ಜಬಲ್ಪುರ: ದೇಶೀಯವಾಗಿ ನವೀಕರಿಸಿದ ಶರಂಗ್ 155 ಎಂಎಂ ಗನ್ ವ್ಯವಸ್ಥೆಯನ್ನು ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಖಮರಿಯಾದ ಲಾಂಗ್ ಪ್ರೂಫ್ ರೇಂಜ್ (ಎಲ್ಪಿಆರ್) ನಲ್ಲಿ ಮಂಗಳವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ದೇಶದ ಅತಿದೊಡ್ಡ ದೇಶೀಯ ಬಂದೂಕಾಗಿರುವ ಈ ಹೈ ಕ್ಯಾಲಿಬರ್ ಗನ್ನ ಫೈರ್ಪವರ್ ಅನ್ನು 39 ಕಿ.ಮೀ.ಗೆ ಹೆಚ್ಚಿಸಲಾಗಿದೆ.
ನವೀಕರಿಸಿದ ಶರಂಗ್ ಗನ್ ವ್ಯವಸ್ಥೆಯನ್ನು ಪರೀಕ್ಷಿಸಿರುವುದು ಇದೇ ಮೊದಲು. ಜಬಲ್ಪುರದಲ್ಲಿ ಪರೀಕ್ಷೆ ಯಶಸ್ವಿಯಾಗಿದೆ.
ನರೇಂದ್ರ ಮೋದಿ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಭಾಗವಾಗಿ, ದೇಶೀಯವಾಗಿ ವಿನ್ಯಾಸಗೊಳಿಸಲಾದ ಟೋವ್ಡ್ 155 ಎಂಎಂ / 45 ಕ್ಯಾಲಿಬರ್ ಫಿರಂಗಿ ಗನ್ ಶರಂಗ್ ಶೀಘ್ರದಲ್ಲೇ ಭಾರತೀಯ ಸೇನೆಗೆ ಗನ್ ಕ್ಯಾರೇಜ್ ಫ್ಯಾಕ್ಟರಿ ಮತ್ತು ಕಾನ್ಪುರದ ಆರ್ಡನೆನ್ಸ್ ಫ್ಯಾಕ್ಟರಿಯಿಂದ ಪೂರೈಕೆ ಆಗಲಿದೆ.
ಶರಂಗ್ನ ಸೇರ್ಪಡೆಯು ರಷ್ಯಾ ತಯಾರಿಸಿದ ‘ಸೊಲ್ಟಮ್ -155’ ಬಂದೂಕುಗಳ ಮಾದರಿಯಂತೆ ಸೇನೆಯ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸಲಿದೆ. ಈ ಶಸ್ತ್ರಾಸ್ತ್ರವನ್ನು ಅದರ ಹಿಂದಿನ ವರ್ಶನ್ ಆದ 130 ಎಂಎಂ ನಿಂದ 155 ಎಂಎಂಗೆ ಯಶಸ್ವಿಯಾಗಿ ನವೀಕರಿಸಲಾಗಿದೆ.
ಇದರ ವಾಣಿಜ್ಯ ಉತ್ಪಾದನೆ ಕೂಡ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.