ವಿಶ್ವದ ಅತೀ ದೊಡ್ಡ ಸೌರ ಪಾರ್ಕ್ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿದೆ. ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿರುವ ಪಾವಗಡ ಸೌರ ಉದ್ಯಾನವನ್ನು ಕರ್ನಾಟಕ ಸೋಲಾರ್ ಪಾರ್ಕ್ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ (ಕೆಎಸ್ಪಿಡಿಸಿಎಲ್) ಅಭಿವೃದ್ಧಿಪಡಿಸಿದೆ, ಇದು ಸೌರಶಕ್ತಿ ನಿಗಮ (ಎಸ್ಇಸಿಐ) ಮತ್ತು ಕರ್ನಾಟಕದ ನವೀಕರಿಸಬಹುದಾದ ಇಂಧನ (ಕೆಆರ್ಇಡಿಎಲ್) ಜಂಟಿ ಕಾರ್ಯವಾಗಿದೆ. ಆರಂಭದಲ್ಲಿ, 13,000 ಎಕರೆ ಪ್ರದೇಶದಲ್ಲಿ 2,000 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಉದ್ಯಾನವನವನ್ನು ನಿರ್ಮಿಸುವ ಯೋಜನೆಯಿತ್ತು. ನಂತರ ಅದಕ್ಕೆ 50 ಮೆಗಾವ್ಯಾಟ್ ಹೆಚ್ಚುವರಿ ಸಾಮರ್ಥ್ಯವನ್ನು ಸೇರಿಸಲಾಯಿತು.
ಎಸ್ಬಿ ಎನರ್ಜಿ (ಸಾಫ್ಟ್ಬ್ಯಾಂಕ್) ಅಭಿವೃದ್ಧಿಪಡಿಸಿದ 200 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಉದ್ಯಾನ ಕಾರ್ಯಾರಂಭಿಸಿದ ಬಳಿಕ ಇದು ವಿಶ್ವದ ಅತಿ ದೊಡ್ಡ ಸೌರ ಉದ್ಯಾನವಾಗಿ ಹೊರಹೊಮ್ಮಿದೆ. ಈ ಹಿಂದೆ, ಕೆಎಸ್ಪಿಡಿಸಿಎಲ್ ಪಾವಗಡದಲ್ಲಿನ 2,050 ಮೆಗಾವ್ಯಾಟ್ ಉದ್ಯಾನ ಡಿಸೆಂಬರ್ 2019 ರೊಳಗೆ ಕಾರ್ಯನಿರ್ವಹಣೆ ಆರಂಭಿಸಲಿದೆ ಎಂದು ನಿರೀಕ್ಷಿಸಲಾಗಿತ್ತು.
ಕೆಆರ್ಇಡಿಎಲ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿಯನ್ನು ನೀಡಿ, “ಪಾವಗಡದಲ್ಲಿ 2,050 ಮೆಗಾವ್ಯಾಟ್ ಸೌರ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ವಿದ್ಯುತ್ ಉತ್ಪಾದಿಸುತ್ತಿವೆ. ಎಸ್ಬಿ ಎನರ್ಜಿ ತನ್ನ ಅಂತಿಮ 100 ಮೆಗಾವ್ಯಾಟ್ ಸೌರ ಯೋಜನೆಯನ್ನು ಡಿಸೆಂಬರ್ 17, 2019 ರಂದು ಆರಂಭಿಸಿದ ನಂತರ, ಸೌರ ಉದ್ಯಾನವು ಅಧಿಕೃತವಾಗಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದಿದ್ದಾರೆ.
ಒಟ್ಟು 2,050 ಮೆಗಾವ್ಯಾಟ್ ಸಾಮರ್ಥ್ಯದ ಪೈಕಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್ಟಿಪಿಸಿ) 600 ಮೆಗಾವ್ಯಾಟ್ ಸೌರ ಪಿವಿ ಯೋಜನೆಗಳನ್ನು ಜಾರಿಗೆ ತಂದಿದೆ, ಎಸ್ಇಸಿಐ 200 ಮೆಗಾವ್ಯಾಟ್ ಜಾರಿಗೆ ತಂದರೆ, ಕೆಆರ್ಇಡಿಎಲ್ 1,250 ಮೆಗಾವ್ಯಾಟ್ ಜಾರಿಗೆ ತಂದಿದೆ.
ಪಾವಗಡ ಸೌರ ಉದ್ಯಾನವನ್ನು ಫೆಬ್ರವರಿ 2015 ರಲ್ಲಿ ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಯಿತು ಮತ್ತು ಉದ್ಯಾನದ ಅಭಿವೃದ್ಧಿ 2016 ರ ಜನವರಿಯಲ್ಲಿ ಪ್ರಾರಂಭವಾಯಿತು. ಉದ್ಯಾನವನ್ನು ತಲಾ 250 ಮೆಗಾವ್ಯಾಟ್ನ ಎಂಟು ಬ್ಲಾಕ್ಗಳಾಗಿ ವಿಂಗಡಿಸಲಾಗಿದೆ ಮತ್ತು ಹೆಚ್ಚಿನ ವೋಲ್ಟೇಜ್ ಪೂರೈಕೆ ಮಾರ್ಗಗಳು, ಪೂಲಿಂಗ್ ಕೇಂದ್ರಗಳು ಮತ್ತು ಸ್ಥಳಾಂತರಿಸುವಿಕೆಗಾಗಿ ಪೂಲಿಂಗ್ ಸಬ್ಸ್ಟೇಷನ್ ಅನ್ನು ಈ ಉದ್ಯಾನ ಹೊಂದಿದೆ. ಸೌರ ಉದ್ಯಾನದ ನಿರ್ಮಾಣ ಪ್ರಮಾಣವು ಇದರ ಯೋಜನೆಗಳು, ಕಠಿಣ ಪರಿಶ್ರಮ ಮತ್ತು ಯೋಚನೆಗಳನ್ನು ಹೊಂದಿದೆ ಎಂಬುದು ಸ್ಪಷ್ಟವಾಗುತ್ತದೆ.
ಪಾವಗಡ ಸೌರ ಉದ್ಯಾನದ ಒಂದು ವಿಶಿಷ್ಟ ಲಕ್ಷಣವೆಂದರೆ ಇಡೀ ಉದ್ಯಾನವನಕ್ಕೆ ಬಳಸಿದ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡಿರುವುದು, ಇದು ಉದ್ಯಾನದ ವೆಚ್ಚವನ್ನು ಕಡಿಮೆ ಮಾಡಿದೆ. ಸೌರ ಉದ್ಯಾನಕ್ಕಾಗಿ ಬಳಸುವ ಭೂಮಿಗಾಗಿ ಕೆಎಸ್ಪಿಡಿಸಿಎಲ್ ರೈತರಿಗೆ ವಾರ್ಷಿಕವಾಗಿ ರೂ. 21,000 ಅನ್ನು ಎಕರೆಗೆ ಪಾವತಿಸುತ್ತಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ 5 ಪ್ರತಿಶತದಷ್ಟು ಮೊತ್ತವನ್ನು ಹೆಚ್ಚಿಸುತ್ತಿದೆ. ಪಾವಗಡ ಬರ ಪೀಡಿತ ಪ್ರದೇಶವಾದ್ದರಿಂದ, ಈ ವ್ಯವಸ್ಥೆ ರೈತರಿಗೂ ಯೋಜನೆಗೂ ಫಲಪ್ರದವಾಗಿದೆ.
ಒಂದು ವರ್ಷದ ನಂತರ, ಒಟ್ಟು 400 ಮೆಗಾವ್ಯಾಟ್ ಗ್ರಿಡ್-ಸಂಪರ್ಕಿತ ಸೌರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಯಿತು. ಆ ಯೋಜನೆಗಳಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಪರಿಕಲ್ಪನೆ ಮಾಡುವ ಮತ್ತು ಅಭಿವೃದ್ಧಿಪಡಿಸುವ ಪ್ರಕ್ರಿಯೆಯು ಎರಡು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು.
ಮೆರ್ಕಾಮ್ ಇಂಡಿಯಾದ ಸೋಲಾರ್ ಪ್ರಾಜೆಕ್ಟ್ ಟ್ರ್ಯಾಕರ್ ಪ್ರಕಾರ, ಕರ್ನಾಟಕವು ಭಾರತದ ಅಗ್ರ ಸೌರ ರಾಜ್ಯವಾಗಿದ್ದು, ಸರಿಸುಮಾರು 7.1 GW ದೊಡ್ಡ ಪ್ರಮಾಣದ ಸೌರ ಯೋಜನೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸುಮಾರು 1 GW ಯೋಜನೆಗಳನ್ನು ಅಭಿವೃದ್ಧಿ ಪೈಪ್ಲೈನ್ ಅಡಿಯಲ್ಲಿ ಹೊಂದಿದೆ. ರಾಜ್ಯವು ತನ್ನ ವಿದ್ಯುತ್ ಮಿಶ್ರಣದಲ್ಲಿ 62% ನಷ್ಟು ನವೀಕರಿಸಬಹುದಾದ ಪಾಲನ್ನು ಹೊಂದಿದೆ, ನಂತರ ಉಷ್ಣ ಶಕ್ತಿ ಮತ್ತು ಪರಮಾಣು ಕ್ರಮವಾಗಿ 35% ಮತ್ತು 2.5% ರಷ್ಟಿದೆ. ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ಸೌರ ಪಾಲು 22% ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.