ನವದೆಹಲಿ: ಉಬರ್ ಟೆಕ್ನಾಲಜೀಸ್ ಇಂಕ್ನ ಭಾರತೀಯ ಆಹಾರ ವಿತರಣಾ ವ್ಯವಹಾರವನ್ನು ಆಲ್-ಸ್ಟಾಕ್ ಒಪ್ಪಂದದಲ್ಲಿ ಖರೀದಿಸಲು ಒಪ್ಪಿಗೆ ಪಡೆದಕೊಂಡಿದ್ದಾಗಿ ಆಹಾರ ವಿತರಣಾ ಸ್ಟಾರ್ಟ್ಅಪ್ ಜೊಮ್ಯಾಟೋ ತಿಳಿಸಿದೆ.
ಒಪ್ಪಂದದ ಮೌಲ್ಯವು ಸುಮಾರು $350 ಮಿಲಿಯನ್ ಅಥವಾ ಅಂದಾಜು 2,492 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
ಉಬರ್ ಟೆಕ್ನಾಲಜೀಸ್ ಇಂಕ್ನ ಆಹಾರ ವಿತರಣಾ ವ್ಯವಹಾರ ‘ಉಬರ್ ಈಟ್ಸ್’ 2017 ರಲ್ಲಿ ಪ್ರಾರಂಭವಾದ ನಂತರ ಭಾರತದಲ್ಲಿ ವ್ಯಾಪಾರ ಕುದುರಿಸಲು ಹೆಣಗಾಡಿತು. ಇದಕ್ಕೆ ಮುಖ್ಯ ಕಾರಣವೆಂದರೆ ಜೊಮ್ಯಾಟೊ ಮತ್ತು ದೇಶಿಯ ಪ್ರತಿಸ್ಪರ್ಧಿ ಸ್ವಿಗ್ಗಿ ಭಾರತದಲ್ಲಿ ಆಹಾರ ವಿತರಣಾ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದ್ದು.
“ರೆಸ್ಟೋರೆಂಟ್ ಆವಿಷ್ಕಾರದ ಪ್ರವರ್ತಕರಾಗಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಮತ್ತು ಭಾರತದ 500 ಕ್ಕೂ ಹೆಚ್ಚು ನಗರಗಳಲ್ಲಿ ನಾವು ಪ್ರಮುಖ ಆಹಾರ ವಿತರಣಾ ವ್ಯವಹಾರವನ್ನು ರಚಿಸಿದ್ದೇವೆ. ಉಬರ್ ಈಟ್ಸ್ ಖರೀದಿ ನಮ್ಮ ಸ್ಥಾನವನ್ನು ಗಮನಾರ್ಹವಾಗಿ ಬಲಪಡಿಸುತ್ತದೆ” ಎಂದು ಜೊಮ್ಯಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಹೇಳಿದ್ದಾರೆ.
ಭಾರತದಲ್ಲಿನ ಉಬರ್ ಈಟ್ಸ್ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುತ್ತಿದೆ ಮತ್ತು ಅದರ ರೆಸ್ಟೋರೆಂಟ್ಗಳು, ವಿತರಣಾ ಪಾಲುದಾರರು ಮತ್ತು ಬಳಕೆದಾರರು ಜೊಮ್ಯಾಟೊ ಪ್ಲಾಟ್ಫಾರ್ಮ್ಗೆ ಮುಖ ಮಾಡುವಂತೆ ಕೋರಲಾಗಿದೆ. ತಕ್ಷಣದಿಂದ ಇದು ಜಾರಿಗೆ ಬರಲಿದೆ ಎಂದು ಜೊಮಾಟೊ ಹೇಳಿದ್ದು, ಈ ಬದಲಾವಣೆಯು ಈಗಾಗಲೇ ಉಬರ್ ಈಟ್ಸ್ ಅಪ್ಲಿಕೇಶನ್ನಲ್ಲಿ ಪ್ರತಿಫಲಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.