ನವದೆಹಲಿ: ಯೋಗ ಕ್ಷೇತ್ರದಲ್ಲಿ ನೀಡಿದ ಅತ್ಯುತ್ತಮ ಕೊಡುಗೆ ಮತ್ತು ಸಾಧನೆಗಾಗಿ ಯುಕೆ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 11 ವರ್ಷದೊಳಗಿನ “ವರ್ಷದ ಬ್ರಿಟಿಷ್ ಇಂಡಿಯನ್” ಪ್ರಶಸ್ತಿಯನ್ನು ಪಡೆದುಕೊಂಡಿರುವ ಯುಕೆ ಮೂಲದ ಭಾರತೀಯ ಬಾಲಕ ಈಶ್ವರ್ ಶರ್ಮಾ ಗ್ಲೋಬಲ್ ಚೈಲ್ಡ್ ಪ್ರಾಡಿಜಿ ಅವಾರ್ಡ್ಸ್ 2020 ತನ್ನದಾಗಿಸಿಕೊಂಡಿದ್ದಾನೆ. ಇಲ್ಲಿಯವರೆಗೆ ಆತ ಯುಕೆ ಮತ್ತು ವಿಶ್ವಾದ್ಯಂತ 100 ಯೋಗ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾನೆ. ಮಾತ್ರವಲ್ಲದೇ, ವೇದಗಳು ಮತ್ತು ಭಗವದ್ಗೀತೆಯ 50′ ಶ್ಲೋಕಗಳನ್ನು ‘ಪಠಿಸುವ ಸಾಮರ್ಥ್ಯವಿದೆ ಆತನಿಗಿದೆ.
ವಿಶ್ವದಾದ್ಯಂತದ ನಾಮನಿರ್ದೇಶನಗೊಂಡ 100 ಅತ್ಯುನ್ನತ ಬಾಲ ಪ್ರತಿಭೆಗಳಲ್ಲಿ ಈತನೂ ಒಬ್ಬನಾಗಿ ನಾಮನಿರ್ದೇಶನಗೊಂಡಿದ್ದಾನೆ. ಯೋಗದಲ್ಲಿ ಆತ ಮಾಡಿದ ಸಾಧನೆಗಳಿಗಾಗಿ ಮತ್ತು ವಿಶ್ವದ ಟಾಪ್ 100 ಬಾಲ ಪ್ರತಿಭೆಗಳಲ್ಲಿ ಒಬ್ಬನಾಗಿದ್ದಕ್ಕಾಗಿ ಆತನಿಗೆ ಗ್ಲೋಬಲ್ ಚೈಲ್ಡ್ ಪ್ರಾಡಿಜಿ ಅವಾರ್ಡ್ಸ್ 2020 ನೀಡಲಾಗಿದೆ.
2020 ರ ಜನವರಿ 3 ರಂದು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಖ್ಯ ಅತಿಥಿ ಕೈಲಾಶ್ ಸತ್ಯಾರ್ಥಿ, ಪುದುಚೇರಿಯ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಡಾ. ಕಿರಣ್ ಬೇಡಿ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಜರುಗಿದೆ.
ಗ್ಲೋಬಲ್ ಚೈಲ್ಡ್ ಪ್ರಾಡಿಜಿ ಅವಾರ್ಡ್ಸ್ 2020 ಬಾಲ ಪ್ರತಿಭೆಗಳಿಗಾಗಿರುವ ಉಪಕ್ರಮವಾಗಿದ್ದು, 45 ಕ್ಕೂ ಹೆಚ್ಚು ಕೌಂಟಿಗಳಿಂದ 100 ಬಾಲ ಪ್ರತಿಭೆಗಳನ್ನು ಗೌರವಿಸುವ ಏಕೀಕೃತ ವೇದಿಕೆಯಾಗಿದೆ, 30 ವಿವಿಧ ವಿಭಾಗಗಳಲ್ಲಿ ಪ್ಯಾಲಿಯಂಟಾಲಜಿ, ಬೈಕರ್, ಕೊರಿಯೋಗ್ರಫಿ, ಫಿಟ್ನೆಸ್, ಮಾರ್ಷಲ್ ಆರ್ಟ್ಸ್, ಕಲೆ, ಗಣಿತಜ್ಞರು, ವಿಜ್ಞಾನ, ಗಾಯನ, ಸಂಗೀತ, ಉದ್ಯಮ ಮತ್ತು ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆಯಲು ಅರ್ಹರಾಗಿರುವ ಮಕ್ಕಳನ್ನು ಇದು ಗೌರವಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.