ನವದೆಹಲಿ: ಭಾರತಕ್ಕೆ ಮತ್ತೊಂದು ಜಯ ಸಿಕ್ಕಿದೆ, ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ)ಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಲು ಪ್ರಯತ್ನಿಸಿದ ಚೀನಾದ ಪ್ರಯತ್ನವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ) ಮೂಲೆ ಗುಂಪು ಮಾಡಿದೆ.
ಯುಎನ್ಎಸ್ಸಿಯ ಮುಚ್ಚಿದ ಬಾಗಿಲಿನ ಸಭೆಯಲ್ಲಿ ಚೀನಾ ಬುಧವಾರ ಕಾಶ್ಮೀರ ವಿಷಯದ ಕುರಿತು ‘ಯಾವುದೇ ಇತರ ವ್ಯವಹಾರ ಅಂಶಗಳು’ ಕಾರ್ಯಸೂಚಿಯಡಿಯಲ್ಲಿ ಉದ್ದೇಶಪೂರ್ವಕವಾಗಿ ಪ್ರಸ್ತಾಪ ಮಾಡಿದೆ. ಆದರೆ, ಚೀನಾವನ್ನು ಹೊರತುಪಡಿಸಿ ಬೇರೆ ಯಾವುದೇ ಯುಎನ್ಎಸ್ಸಿ ಸದಸ್ಯರು ಈ ಸಭೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಲಿಲ್ಲ.
ಆಗಸ್ಟ್ ತಿಂಗಳಿನಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಹಿಂಪಡೆದ ಸುಮಾರು ಐದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ. ಕಾಶ್ಮೀರ ಸಮಸ್ಯೆಯನ್ನು ಯುಎನ್ನಲ್ಲಿ ಕಾರ್ಯಸೂಚಿಯಡಿ ಪ್ರಸ್ತಾಪಿಸಲು ಚೀನಾ ಮಾಡಿದ ಎರಡನೇ ಪ್ರಯತ್ನ ಇದಾಗಿದೆ.
ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಭಾರತದ ಧ್ವಜ ಮತ್ತು ಇತರ ದೇಶಗಳ ಧ್ವಜ ಹಾರಾಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ “ಇಂದು ಯುಎನ್ ನಲ್ಲಿ … ನಮ್ಮ ಧ್ವಜ ಎತ್ತರಕ್ಕೆ ಹಾರುತ್ತಿದೆ.” ಸುಳ್ಳು ಧ್ವಜ “ವನ್ನು ಹಾರಿಸಲು ಪ್ರಯತ್ನಿಸಿದವರಿಗೆ ನಮ್ಮ ಅನೇಕ ಸ್ನೇಹಿತರಿಂದ ತೀಕ್ಷ್ಣ ಪ್ರತಿಕ್ರಿಯೆ ಸಿಕ್ಕಿದೆ …” ಎಂದು ಬರೆದುಕೊಂಡಿದ್ದಾರೆ.
“ನಾವು ಅಂದುಕೊಂಡಂತೆ ಆಗಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನದ ಸುಳ್ಳು ಹೇಳಿಕೆ ಬಹಿರಂಗಗೊಂಡಿದೆ. ನಮ್ಮ ಹೆಚ್ಚಿನ ಸ್ನೇಹಿತರು ನಮ್ಮನ್ನು ಬೆಂಬಲಿಸಿದರು ಮತ್ತು ಇದು ದ್ವಿಪಕ್ಷೀಯ ವಿಷಯ ಎಂದಿದ್ದಾರೆ. ತನ್ನ ಅಸಮರ್ಥತೆಯನ್ನು ಮುಚ್ಚಿ ಹಾಕಲು ಪಾಕಿಸ್ಥಾನದ ಸುಳ್ಳು ಹೇಳುವ ಪ್ರಕ್ರಿಯೆಯು ಇಂದಿಗೆ ಮುಗಿದಿದೆ. ಇಂದಿನ ಘಟನೆಯಿಂದ ಪಾಕಿಸ್ಥಾನ ಬುದ್ಧಿ ಕಲಿಯಲಿದೆ ಮತ್ತು ಭಾರತದೊಂದಿಗೆ ಸರಿಯಾಗಿ ವ್ಯವಹರಿಸುತ್ತದೆ ಎಂದು ನಂಬುತ್ತೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.