ನವದೆಹಲಿ: ಜನವರಿ 31ರ ಒಳಗೆ ಡ್ರೋನ್ ಅನ್ನು ನೋಂದಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಒಂದು ವೇಳೆ ನೋಂದಾವಣೆ ಮಾಡದೇ ಇದ್ದ ಪಕ್ಷದಲ್ಲಿ ಡ್ರೋಣ್ ಅನ್ನು ಹೊಂದಿದವರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ವಾಯುಯಾನ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗುತ್ತದೆ.
ನಾಗರಿಕ ವಿಮಾನಯಾನ ಸಚಿವಾಲಯ ಹೊರಡಿಸಿರುವ ಸಾರ್ವಜನಿಕ ಸೂಚನೆಯಲ್ಲಿ ಜನವರಿ 31ರೊಳಗೆ ನೋಂದಾವಣೆ ಮಾಡಿಕೊಳ್ಳುವಂತೆ ಸೂಚನೆಯನ್ನು ನೀಡಲಾಗಿದೆ.
ಡ್ರೋಣ್ ಮಾಲಕರು ತಮ್ಮಲ್ಲಿರುವ ಡ್ರೋಣ್ಗಳ ನೋಂದಣಿಯನ್ನು ಪೂರ್ಣಗೊಳಿಸಿದ ಬಳಿಕ ಅವರಿಗೆ ಅಪರೇಟರ್ ಅಕ್ನಾಲೆಡ್ಜ್ಮೆಂಟ್ ನಂಬರ್ನ್ನು (OAN) ನೀಡಲಾಗುತ್ತದೆ ಮತ್ತು ಡ್ರೋಣ್ ಬಳಕೆದಾರರ ಪ್ರೊಫೈಲ್ನಲ್ಲಿ ನೋಂದಣಿಯಾಗುವ ಪ್ರತೀ ಡ್ರೋಣ್ಗೆ ‘ಡ್ರೋಣ್ ಅಕ್ನಾಲೆಡ್ಜ್ಮೆಂಟ್ ನಂಬರ್’ನ್ನು (DAN) ನೀಡಲಾಗುತ್ತದೆ.
ಇದರಿಂದ ದೇಶದಲ್ಲಿರುವ ಒಟ್ಟು ಡ್ರೋಣ್ಗಳ ಸಂಖ್ಯೆಯ ಕುರಿತಾಗಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಒಂದು ನಿಖರ ಮಾಹಿತಿ ಸಿಗುವ ನಿರೀಕ್ಷೆ ಇದೆ. ಮುಂಬರುವ ದಿನಗಳಲ್ಲಿ ಡ್ರೋಣ್ ಬಳಕೆಗೆ ಸಂಬಂಧಿಸಿದಂತೆ ಸೂಕ್ತ ನೀತಿ ನಿಯಮಗಳನ್ನು ರೂಪಿಸಲು ಸರಕಾರಕ್ಕೆ ಇದರಿಂದ ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ಡ್ರೋಣ್ ಫೆಡರೇಶನ್ ಆಫ್ ಇಂಡಿಯಾದ ನಿರ್ದೇಶಕ ಸ್ಮಿತ್ ಶಾ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.