ಹೈದರಾಬಾದ್: ಐದು ವರ್ಷದ ಬಾಲಕ ಅಶ್ಮಾನ್ ತನೇಜಾ ಟೇಕ್ವಾಂಡೋದಲ್ಲಿ ಒಂದು ಗಂಟೆ ತಡೆರಹಿತ ಫುಲ್ ಕಾಂಟ್ಯಾಕ್ಟ್ ನೀ ಸ್ಟ್ರೈಕ್ ಮಾಡಿದ್ದಕ್ಕಾಗಿ ವಿಶ್ವ ದಾಖಲೆ ಮಾಡಿದ್ದಾನೆ. ಆಶ್ಮಾನ್ ಅದ್ಭುತ ಟೇಕ್ವಾಂಡೋ ಆಟಗಾರನಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಕ್ರೀಡಾಪಟುವಾಗಿ ಸಾಧನೆ ಮಾಡಿದ್ದಾನೆ. ಅವರು ಯುಎಸ್ಎ ವರ್ಲ್ಡ್ ಓಪನ್ ಟೇಕ್ವಾಂಡೋದಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾನೆ ಮತ್ತು ಈಗ ಗಿನ್ನೆಸ್ ವಿಶ್ವ ದಾಖಲೆಯ ಹೆಮ್ಮೆಯನ್ನು ಹೊಂದಿದ್ದಾನೆ.
ಒಂದು ಗಂಟೆಯ ತಡೆರಹಿತ ಮೊಣಕಾಲು ಸ್ಟ್ರೈಕ್ಗಳಿಗಾಗಿ ಅವನು ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದಾನೆ ಮತ್ತು 1200 ಕ್ಕೂ ಹೆಚ್ಚು ಮೊಣಕಾಲು ಸ್ಟ್ರೈಕ್ಗಳನ್ನು ಯಶಸ್ವಿಯಾಗಿ ಸಾಧಿಸಿದ್ದಾನೆ.
ಆಶ್ಮಾನ್ ತನೇಜಾ ಅವರ ತಂದೆ ಆಶಿಶ್ ತನೇಜಾ ತಮ್ಮ ಮಗನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, “ನನ್ನ ಮಗ ವಿಶ್ವ ದಾಖಲೆಗಾಗಿ ಸಾಕಷ್ಟು ಅಭ್ಯಾಸ ಮಾಡಿದ್ದ, ಅವನು ತನ್ನ ಸಹೋದರಿಯಿಂದ ಸ್ಫೂರ್ತಿ ಪಡೆದು, ಎಳವೆಯಿಂದಲೇ ತರಬೇತಿಯನ್ನು ಪ್ರಾರಂಭಿಸಿದ್ದಾನೆ. ಅವನು ಈ ದಾಖಲೆಯನ್ನು ಸಾಧಿಸಿದ ಕಿರಿಯ ಬಾಲಕ” ಎಂದು ಹೇಳಿದ್ದಾರೆ.
“ನನ್ನ ಮಗ ಈಗ ಮತ್ತೊಂದು ಗಿನ್ನೆಸ್ ವಿಶ್ವ ದಾಖಲೆಗಾಗಿ ಅಭ್ಯಾಸ ಮಾಡುತ್ತಿದ್ದಾನೆ ಮತ್ತು ಅವನು ಅದನ್ನು ಸಾಧಿಸುತ್ತಾನೆ ಎಂದು ನಮಗೆ ನಂಬಿಕೆ ಇದೆ” ಎಂದು ಅವರು ಹೇಳಿದ್ದಾರೆ.
“ನನ್ನ ಅಕ್ಕನಿಗೆ ಎರಡು ಗಿನ್ನೆಸ್ ವಿಶ್ವ ದಾಖಲೆಗಳು ದೊರೆತಾಗ, ನಾನು ಕೂಡ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಬೇಕು ಎಂದು ಬಯಸಿದ್ದೆ. ಅವಳು ನನ್ನ ಸ್ಫೂರ್ತಿ ಮತ್ತು ನನ್ನ ಶಿಕ್ಷಕಿಯೂ ಹೌದು” ಎಂದು ಆಶ್ಮಾನ್ ಹೇಳುತ್ತಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.