ಪ್ರಸ್ತುತ ನಮ್ಮ ದೇಶದ ಸುದ್ದಿ ಕೇಂದ್ರ ಎಂದರೆ ಅದು ಜೆಎನ್ಯು. ಒಂದು ಬಾರಿ ಶುಲ್ಕದ ವಿಚಾರದಲ್ಲಿ, ಇನ್ನೊಂದು ಬಾರಿ ಸಿಎಎ ವಿಚಾರಲ್ಲಿ, ಮತ್ತೊಂದು ಬಾರಿ ದೊಂಬಿಗಾಗಿ ಹೀಗೆ ಒಂದು ಮುಗಿದ ತಕ್ಷಣ ಮತ್ತೊಂದು ವಿಷಯಕ್ಕೆ ಈ ವಿಶ್ವವಿದ್ಯಾಲಯ ಸುದ್ದಿಯಾಗುತ್ತಲೇ ಇರುತ್ತದೆ. ಅದು ಕೂಡ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಇಲ್ಲಿನ ವಿಶ್ವವಿದ್ಯಾಲಯದ ಎಡಪಂಥೀಯ ವಿದ್ಯಾರ್ಥಿಗಳು ಆಜಾದಿ ಆಜಾದಿ ಎಂದು ಜೋರು ಧ್ವನಿಯಲ್ಲೇ ಕೂಗಲಾರಂಭಿಸಿದ್ದಾರೆ. ದೇಶದಲ್ಲಿ ಹಿಂದೆ ಇದ್ದ, ಈಗ ಇರುವ ಮತ್ತು ಮುಂದೆ ಬರಬಹುದಾದ ಎಲ್ಲಾ ಸಮಸ್ಯೆಗಳಿಗೂ ಮೋದಿಯೇ ಕಾರಣ ಎಂಬುದು ಇವರ ವಿತ್ತಂಡವಾದ.
ಎಡಪಂಥೀಯರ ರಾಜಕೀಯ ಅಡ್ಡಾ ಆಗಿರುವ ಜೆಎನ್ಯು ವಿಶ್ವವಿದ್ಯಾಲಯದ ಬಗೆಗಿನ ಒಂದಿಷ್ಟು ವಿವರಣೆ ಇಲ್ಲಿದೆ:-
ಜೆಎನ್ಯುನಲ್ಲಿ ಒಟ್ಟು 8000 ವಿದ್ಯಾರ್ಥಿಗಳು ಇದ್ದಾರೆ. ಇದರಲ್ಲಿ ಶೇ.57ರಷ್ಟು ಅಂದರೆ 4578 ವಿದ್ಯಾರ್ಥಿಗಳು ಸಮಾಜ ವಿಜ್ಞಾನ, ಕಲೆ, ಭಾಷೆ, ಸಾಹಿತ್ಯವನ್ನು ಅಧ್ಯಯನ ಮಾಡುವವರು, ಶೇ.15ರಷ್ಟು ಅಂದರೆ 1210 ವಿದ್ಯಾರ್ಥಿಗಳು ಇಂಟರ್ನ್ಯಾಷನಲ್ ಸ್ಟಡೀಸ್ ಅಧ್ಯಯನ ಮಾಡುತ್ತಿದ್ದಾರೆ. ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ.55ರಷ್ಟು ಅಂದರೆ 4359 ವಿದ್ಯಾರ್ಥಿಗಳು M.Phil ಅಥವಾ Ph.D ಮಾಡುತ್ತಿದ್ದಾರೆ.
ಈ ವಿಶ್ವವಿದ್ಯಾಲಯದ 2018ರ ವಾರ್ಷಿಕ ಲಾಭ ಮತ್ತು ನಷ್ಟ ಅಂಕಿ-ಅಂಶದ ಪ್ರಕಾರ, ಇದು ವಾರ್ಷಿಕವಾಗಿ ತನ್ನ ಕಾರ್ಯಾಚರಣೆಗೆ 556 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತದೆ. ಈ ಲೆಕ್ಕಾಚಾರದಲ್ಲಿ ಇಲ್ಲಿನ ಒಂದು ವಿದ್ಯಾರ್ಥಿಯ ಮೇಲೆ ತಗಲುವ ವೆಚ್ಚ ರೂ. 6.95 ಲಕ್ಷ ವಾರ್ಷಿಕವಾಗಿ. ಆದರೆ ಇಷ್ಟೊಂದು ಮೊತ್ತವನ್ನು ಯಾವ ವಿದ್ಯಾರ್ಥಿಯ ಮೇಲೂ ವಿಧಿಸಲಾಗಿಲ್ಲ. ಸಬ್ಸಿಡಿ ದರದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಅತ್ಯುತ್ತಮ ಸಂಶೋಧನೆಗಳು ಹೊರ ಬರಲಿ, ಉತ್ತಮ ಪ್ರತಿಭೆಗಳು ಬೆಳಯಲಿ ಎಂಬ ಕಾರಣಕ್ಕೆ ಭಾರೀ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿಯನ್ನು ನೀಡಿ ಸರ್ಕಾರ ಇಲ್ಲಿನ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುತ್ತಿದೆ. ಆದರೆ ಅಂತಹ ಯಾವುದೇ ಪ್ರತಿಭೆಗಳು ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಹೊರ ಬಂದಿಲ್ಲ, ಪರಿಗಣಿಸಬಹುದಾದಂತಹ ಅತ್ಯುತ್ತಮ ಸಂಶೋಧನಾ ಪ್ರಬಂಧಗಳೂ ಅಲ್ಲಿಂದ ಹೊರ ಬರುತ್ತಿಲ್ಲ.
M.Phil ಮತ್ತು Ph.D ಮಾಡುವ 4360 ವಿದ್ಯಾರ್ಥಿಗಳಿದ್ದರೂ ಜರ್ನಲ್ಗಳಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧಗಳು 1000 ದ ಗಡಿ ದಾಟಿಲ್ಲ. ಇಂತಹ ಹೇಳಿಕೆಗಳನ್ನು ನೀಡುವಾಗ ವಿಶ್ವವಿದ್ಯಾಲಯವು ಯಾವುದೇ ಗಮನಾರ್ಹ ಜರ್ನಲ್ಗಳನ್ನು ಹೆಸರಿಸುವುದಿಲ್ಲ. ಪ್ರತಿ ವರ್ಷ ಪ್ರತಿ 4.5 ವಿದ್ಯಾರ್ಥಿಗಳಿಗೆ ಕೇವಲ ಒಂದು ಲೇಖನ ಪ್ರಕಟವಾಗುತ್ತಿದೆ ಎಂಬುದನ್ನು ಇದು ಸೂಚಿಸುತ್ತಿದೆ.
ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾರಿ ಭಾಗವಹಿಸುವಿಕೆ ಇದೆ. ಆದ್ದರಿಂದ ಪ್ರತಿವರ್ಷ ಸುಮಾರು 2000 ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಲಾಗುತ್ತದೆ. ಆದರೆ ಆ ಸಮ್ಮೇಳನಗಳಲ್ಲಿ ಏನು ನಡೆಯುತ್ತದೆ ಎಂಬ ಬಗ್ಗೆ ಖಚಿತತೆ ಇಲ್ಲ. ಖಂಡಿತವಾಗಿಯೂ ಸಂಶೋಧನಾ ಪ್ರಬಂಧಗಳು ಅಥವಾ ಪೇಟೆಂಟ್ಗಳು ಇಲ್ಲಿ ಜರಗುವುದಿಲ್ಲ.
ಹೋಗಲಿ ಈ ವಿಶ್ವವಿದ್ಯಾಲಯದಲ್ಲಿ ಪೇಟೆಂಟ್ ಆದರೂ ಹೊರಬರುತ್ತಿದೆಯೇ? ಕನಿಷ್ಠ ನಾಲ್ಕು ಹೆಸರುಗಳನ್ನು ಹೆಸರಿಸಬಹುದು. ಅದೆಂದರೆ ಭಟ್ನಾಗರ್, ದೀಕ್ಷಿತ್, ಕಾರ್ ಮತ್ತು ಮುಖರ್ಜಿ. ಬೇರೆ ಫ್ಯಾಕಲ್ಟಿಗಳಲ್ಲಿ ಪೇಟೆಂಟ್ ಇಲ್ಲ. ವಿದ್ಯಾರ್ಥಿಗಳು ಪಡೆದ ಪೇಟೆಂಟ್ ಹುಡುಕಾಡಿದರೂ ಸಿಗುತ್ತಿಲ್ಲ.
ಹಾಗಾದರೆ ಜೆಎನ್ಯು ವಿದ್ಯಾರ್ಥಿಗಳು ಎಷ್ಟು ಶುಲ್ಕವನ್ನು ಪಾವತಿ ಮಾಡುತ್ತಿದ್ದಾರೆ? ಅವರು ನೀಡುವ ಒಟ್ಟಾರೆ ಟ್ಯೂಶನ್ ಫೀಸ್ ಕೇವಲ 250 ರೂಪಾಯಿ. ಲೈಬ್ರರಿಗೆ 6 ರೂಪಾಯಿ ನೀಡುತ್ತಾರೆ ಮತ್ತು 40 ರೂಪಾಯಿ ರಿಫಂಡೇಬಲ್ ಸೆಕ್ಯೂರಿಟಿ ಡೆಪೋಸಿಟ್ ನೀಡುತ್ತಾರೆ.
ಇದರ ಸಮೀಪದಲ್ಲಿರುವ ಐಐಟಿ ದೆಹಲಿ ವಿದ್ಯಾರ್ಥಿಗಳು ವಾರ್ಷಿಕವಾಗಿ 2.25 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಾರೆ. ಐಐಎಂ ವಿದ್ಯಾರ್ಥಿಗಳು ವಾರ್ಷಿಕವಾಗಿ 5 ರಿಂದ 10 ಲಕ್ಷ ರೂಪಾಯಿ ಪಾವತಿಸುತ್ತಾರೆ. ಆದರೆ ಈ ವಿಶ್ವವಿದ್ಯಾಲಯದಲ್ಲಿ ಯಾವುದೇ ಪ್ರತಿಭಟನೆಗಳನ್ನು ನೋಡಲು ನಮಗೆ ಸಾಧ್ಯವಿಲ್ಲ. ಯಾಕೆಂದರೆ, ತಮಗೆ ಭವಿಷ್ಯದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂಬುದನ್ನು ಇಲ್ಲಿನ ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡಿದ್ದಾರೆ. ಶೈಕ್ಷಣಿಕ ಸಾಲವನ್ನು ಮರುಪಾವತಿಸುವ ಮಹತ್ತರ ಜವಾಬ್ದಾರಿ ಇವರ ಮೇಲಿದೆ.
ಆದರೆ ಜೆಎನ್ಯು ವಿದ್ಯಾರ್ಥಿಗಳಿಗೆ ಅಂತಹ ಯಾವುದೇ ತಲೆ ಬಿಸಿ ಇಲ್ಲ. ಬಹುಶಃ ಇದೇ ಕಾರಣಕ್ಕೆ ಸಮಸ್ಯೆಗಳ ಮೇಲೆ ಸಮಸ್ಯೆ ಸೃಷ್ಟಿಸಿ ಶಾಂತಿ ಭಂಗ ಮಾಡಿ ದೊಂಬಿ ಎಬ್ಬಿಸುತ್ತಾರೆ. ಇದನ್ನು ಸಿದ್ಧಾಂತಗಳ ಸಂಘರ್ಷ ಎಂದು ನಾವು ಕರೆಯುತ್ತೇವೆ. ಜನರಿಗೆ ಎಲ್ಲವನ್ನೂ ಉಚಿತವಾಗಿ ನೀಡಿದರೆ ಏನಾಗುತ್ತದೆ ಎಂಬುದಕ್ಕೆ ಜೆಎನ್ ಯುವೇ ಅತ್ಯುತ್ತಮ ಉದಾಹರಣೆ. ಮಾಡಬೇಕಾದದನ್ನು ಮಾಡದೆ, ಮಾಡಬಾರದನ್ನು ಜನ ಮಾಡುತ್ತಾರೆ. ಕಷ್ಟಪಟ್ಟು ವಿದ್ಯೆ ಪಡೆಯುವವನು ಸಮಯ ವ್ಯರ್ಥ ಮಾಡದೆ ಕೇವಲ ವಿದ್ಯೆಯತ್ತ ಮಾತ್ರ ಗಮನ ನೆಟ್ಟಿರುತ್ತಾನೆಯೇ ಹೊರತು ಜೆಎನ್ಯು ವಿದ್ಯಾರ್ಥಿಗಳಂತೆ ದಿನಕ್ಕೊಂದು ಪ್ರತಿಭಟನೆ ನಡೆಸುವುದಿಲ್ಲ. ಕೆಟ್ಟ ಸಮಾಜವಾದಕ್ಕೆ ಈ ವಿಶ್ವವಿದ್ಯಾಲಯ ಕನ್ನಡಿಯಂತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.