ಜಮ್ಮು: ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ಪೂರ್ಣಗೊಳಿಸಲು ಸರ್ಕಾರ ಹೊಸ ಗಡುವನ್ನು ನಿಗದಿಪಡಿಸಿದೆ. ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಕಾಶ್ಮೀರವನ್ನು ರೈಲ್ವೆ ನೆಟ್ವರ್ಕ್ ಮೂಲಕ ಭಾರತದ ಉಳಿದ ಭಾಗಗಳಿಗೆ ಸಂಪರ್ಕಿಸುವ ವಿಶ್ವದ ಅತೀ ಎತ್ತರದ ರೈಲ್ವೇ ಸೇತುವೆ ಲೋಕಾರ್ಪಣೆಯಾಗಲಿದೆ.
ರೈಲು ಮಾರ್ಗವು ಐಫೆಲ್ ಟವರ್ಗಿಂತ 35 ಮೀಟರ್ ಎತ್ತರವಿದೆ ಎಂದು ನಿರೀಕ್ಷಿಸಲಾಗಿದೆ.
“ಇದು ಭಾರತೀಯ ರೈಲ್ವೆಯ ಸ್ವಾತಂತ್ರ್ಯ ನಂತರದ ಇತಿಹಾಸದಲ್ಲಿ ಅತ್ಯಂತ ಸವಾಲಿನ ಯೋಜನೆಯಾಗಿದೆ’ ಎಂದು ಕೊಂಕಣ ರೈಲ್ವೇ ಹೇಳಿದೆ.
“ರೈಲ್ವೆಯ 150 ವರ್ಷಗಳ ಇತಿಹಾಸದಲ್ಲಿ ಇದು ಅತ್ಯಂತ ಸವಾಲಿನ ಕೆಲಸವಾಗಿದೆ. ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ, ಕಾಶ್ಮೀರವನ್ನು ರೈಲು ಮಾರ್ಗದ ಮೂಲಕ ದೇಶದ ಉಳಿದ ಭಾಗಗಳಿಗೆ ಸಂಪರ್ಕಿಸಲಿದೆ. ಡಿಸೆಂಬರ್ 2021 ರೊಳಗೆ ಇದು ಪೂರ್ಣಗೊಳ್ಳಲಿದೆ” ಎಂದು ಕೊಂಕಣ ರೈಲ್ವೆ ಅಧ್ಯಕ್ಷ ಸಂಜಯ್ ಗುಪ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಸೇತುವೆಯ ನಿರ್ಮಾಣವು ಸ್ವಾತಂತ್ರ್ಯೋತ್ತರ ನಂತರ ಕೈಗೊಂಡ ಕಾಶ್ಮೀರ ರೈಲು ಸಂಪರ್ಕ ಯೋಜನೆಯ ಅತ್ಯಂತ ಸವಾಲಿನ ಭಾಗವಾಗಿದೆ ಮತ್ತು ಪೂರ್ಣಗೊಂಡ ನಂತರ ಇದು ಎಂಜಿನಿಯರಿಂಗ್ ಅದ್ಭುತವಾಗಲಿದೆ” ಎಂದು ಗುಪ್ತಾ ಹೇಳಿದ್ದಾರೆ.
ಪ್ರತಿಕೂಲವಾದ ಭೂಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ಕಮಾನು ಆಕಾರದ ರಚನೆಯ ಈ ಸೇತುವೆಯು 5,462 ಟನ್ಗಳಷ್ಟು ಉಕ್ಕನ್ನು ಬಳಸಿಕೊಂಡಿದೆ, ನದಿ ಮೇಲ್ಮೈಯಿಂದ ಇದು 359 ಮೀಟರ್ ಎತ್ತರದಲ್ಲಿ ಇದೆ.
ಗಂಟೆಗೆ 260 ಕಿ.ಮೀ ಗಾಳಿ ವೇಗವನ್ನು ತಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುವ 1.315 ಕಿ.ಮೀ ಉದ್ದದ ಈ ಎಂಜಿನಿಯರಿಂಗ್ ಅದ್ಭುತ ಬಕ್ಕಲ್ (ಕಾತ್ರ) ಮತ್ತು ಕೌರಿ (ಶ್ರೀನಗರ) ಗಳನ್ನು ಸಂಪರ್ಕಿಸುತ್ತದೆ.
ಕಾತ್ರ ಮತ್ತು ಬನಿಹಾಲ್ ನಡುವಿನ 111 ಕಿ.ಮೀ ವಿಸ್ತಾರದಲ್ಲಿ ಈ ಸೇತುವೆ ನಿರ್ಣಾಯಕ ಕೊಂಡಿಯನ್ನು ರೂಪಿಸುತ್ತದೆ, ಇದು ಉಧಂಪುರ್- ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಭಾಗವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.