ಲಖಂಡೈ ನದಿಯು ನೇಪಾಳದ ಸರ್ಲಾಹಿ ಪರ್ವತಗಳಿಂದ ಇಳಿಯುತ್ತದೆ, ಬಿಹಾರದ ಸೀತಾಮಾರ್ಹಿ ಜಿಲ್ಲೆಯ ಮೂಲಕ ಭಾರತಕ್ಕೆ ಪ್ರವೇಶಿಸುವ ಮೊದಲು 50 ಕಿ.ಮೀ ಹರಿಯುತ್ತದೆ. ಕತ್ರಾದಲ್ಲಿ ಬಾಗಮತಿ ನದಿಯನ್ನು ಭೇಟಿಯಾಗುವ ಮೊದಲು ಸುಮಾರು 18 ಕಿ.ಮೀ ದೂರದಲ್ಲಿರುವ ಮಾರ್ಗವನ್ನು ಹಾದುಹೋಗುವ ಈ ನದಿಯು ಸೀತಾಮರ್ಹಿಯ ಇಡೀ ಪ್ರದೇಶಕ್ಕೆ ನೀರುಣಿಸುತ್ತದೆ. ಲಖಂಡೈ ನದಿಯ ಒಟ್ಟು ಉದ್ದ 170 ಕಿ.ಮೀ. ‘ಜಲ-ಜೀವನ್’ ಮತ್ತು ‘ಹರಿಯಾಲಿ’, ಲಖಂಡೈ ಅಥವಾ ಲಕ್ಷ್ಮಣ ಗಂಗಾ ಎಂಬ ಸಮಾನಾರ್ಥಕ ಹೆಸರನ್ನು ಹೊಂದಿರುವ ಈ ನದಿಯು ಸೀತಾಮರ್ಹಿಯ ಒರಟಾದ ಭೂಪ್ರದೇಶಗಳಿಗೆ ಜೀವ ತುಂಬುತ್ತದೆ. ಇದು ನದಿ ದಂಡೆಯಲ್ಲಿರುವ ಮಾನವ ಅಸ್ತಿತ್ವವನ್ನು ಪೋಷಿಸುತ್ತಿದೆ.
ಆದರೂ, ಕಳೆದ ಒಂದು ದಶಕದಲ್ಲಿ ಅತಿಕ್ರಮಣ ಮತ್ತು ಯೋಜಿತವಲ್ಲದ ತ್ಯಾಜ್ಯ ವಿಲೇವಾರಿಗಳು ಉಕ್ಕಿ ಹರಿಯುತ್ತಿದ್ದ ನದಿಯನ್ನು ಸಂಪೂರ್ಣವಾಗಿ ಕೆಸರುಮಯಗೊಳಿಸಿತು. ಇದರಿಂದ ನದಿಯ ಹಾದಿಯಲ್ಲಿ ಹಲವಾರು ಹಂತಗಳಲ್ಲಿ ನೀರಿನ ನಿಶ್ಚಲತೆ ಮತ್ತು ಮಾಲಿನ್ಯ ಉಂಟಾಯಿತು. ನದಿಯು ಗುರುತು ಸಿಗದಷ್ಟರ ಮಟ್ಟಿಗೆ ಒಣಗಿಹೋಗಿತ್ತು ಮತ್ತು ಕಂದಕಗಳನ್ನು ಉಳಿಸಿ ಹೋಗಿತ್ತು. ಈ ಅಂತರ್ಜಲ ಕುಗ್ಗುವಿಕೆಯಿಂದ ಅಲ್ಲಿನ ಜನರು ಜಲಕ್ಷಾಮ ಅನುಭವಿಸಿದರು ಮತ್ತು ಕೃಷಿ ನೆಲಕಚ್ಚಿ ಹೋಯಿತು.
ಆದರೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಐಎಎಸ್ ಅಭಿಲಾಶಾ ಕುಮಾರಿ ಶರ್ಮಾ ಅವರು ಸೀತಾಮರ್ಹಿಗೆ ಬರುವವರೆಗೆ ಮಾತ್ರ ಈ ಸಂಕಷ್ಟ ಇತ್ತೇ ಹೊರತು ಈಗ ಇಲ್ಲ. ಅವರ ದಣಿವರಿಯದ ಪ್ರಯತ್ನಗಳು ಲಖಂಡೈಯನ್ನು ಅದರ ಹಿಂದಿನ ವೈಭವಕ್ಕೆ ಮರಳಿಸಿದೆ, ಅದು ಈಗ ಶುದ್ಧ ನೀರಿನಿಂದ ಕಂಗೊಳಿಸುತ್ತಿವೆ. ಅವರ ಸಮರ್ಪಣೆ ಮತ್ತು ಉತ್ಸಾಹಕ್ಕೆಅಲ್ಲಿನ ಜನರು ಶಬ್ಬಾಶ್ ಹೇಳುತ್ತಿದ್ದಾರೆ. ಲಖಂಡೈ ಪುನರುಜ್ಜೀವನವು ಕೇವಲ ಎರಡು ತಿಂಗಳ ಅವಧಿಯಲ್ಲಿ ಯಶಸ್ವಿಯಾಗಿದೆ ಎಂಬುದು ಮಹತ್ವದ್ದಾಗಿದೆ. ಯೋಜನೆಯು ಪ್ರಸ್ತುತ ಅಂತಿಮ ಹಂತದಲ್ಲಿದೆ.
ಕಳೆದ 82 ವರ್ಷಗಳಿಂದ ಲಖಂಡೈ ನದಿ ಸಂಕಷ್ಟವನ್ನು ಅನುಭವಿಸುತ್ತಾ ಬಂದಿತ್ತು, ಮೂಲದಿಂದಲೇ ಇದರ ಸಮರ್ಪಕ ನೀರಿನ ಹರಿವಿಗೆ ನೇಪಾಳದ ಸಹಕಾರ ಅಗತ್ಯವಾಗಿತ್ತು. ಎರಡೂ ಕಡೆಗಳ ಸರ್ಕಾರಗಳ ಮಧ್ಯಪ್ರವೇಶದ ನಡುವೆಯೂ ಯಾವುದೇ ಖಾಯಂ ಪರಿಹಾರ ಇದಕ್ಕೆ ಸಿಕ್ಕಿರಲಿಲ್ಲ. ಹಲವಾರು ಮಂದಿ ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದ್ದರೂ ಅದು ಸಾಧ್ಯವಾಗಿರಲಿಲ್ಲ.
2019ರಲ್ಲಿ ಅಭಿಲಾಶಾ ಶರ್ಮಾ ಅವರು ಡಿ.ಎಂ ಆಗಿ ನೇಮಕವಾದ ಮೇಲೆ ನದಿಯ ಪುನರುಜ್ಜೀವನ ಕಾರ್ಯ ವೇಗ ಪಡೆಯಿತು. ಮನೆಮನೆಗೆ ಭೇಟಿ ನೀಡಿದ ಅವರು ನದಿಯ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸಿದರು.
ಅವರ ಮೇಲ್ವಿಚಾರಣೆಯಲ್ಲಿ, ಜಲಸಂಪನ್ಮೂಲ ಇಲಾಖೆಯ ಎಂಜಿನಿಯರ್ಗಳು ಹಳೆಯ ಲಖಂಡೈ ನದಿಯನ್ನು ಪುನಃಸ್ಥಾಪಿಸಲು ವಿಸ್ತಾರವಾದ ನೀಲನಕ್ಷೆಯನ್ನು ರೂಪಿಸಿದರು. ಇದು ಪ್ರಯಾಸಕರವಾದ ಕಾರ್ಯವಾಗಿದ್ದರೂ ಕೂಡ ಅವರು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಪರಿಪೂರ್ಣ ನಿಖರತೆಯಿಂದ ಕಾರ್ಯಗತಗೊಳಿಸಿದರು.
ಒಟ್ಟಾರೆಯಾಗಿ, ನದಿಯನ್ನು ಪುನಃಸ್ಥಾಪಿಸಲು 23 ಎಕರೆ ಭೂಮಿ ಬೇಕಾಗಿತ್ತು, ಅವುಗಳಲ್ಲಿ ಹೆಚ್ಚಿನವು ಸಣ್ಣ ಪ್ರಮಾಣದ ರೈತರ ಒಡೆತನದ ಕೃಷಿಭೂಮಿಗಳಾಗಿದ್ದವು. ಅಡಿಪಾಯವನ್ನು ಪ್ರಾರಂಭಿಸುವ ಮೊದಲು ರೈತರ ಒಪ್ಪಿಗೆಯನ್ನು ಪಡೆದುಕೊಳ್ಳುವಲ್ಲಿ ಶರ್ಮಾ ಖಚಿತಪಡಿಸಿದರು. ಅವರು ತಮ್ಮ ವಿನಂಬ್ರ ಮತ್ತು ಇಚ್ಛಾಶಕ್ತಿಯುಳ್ಳ ವ್ಯಕ್ತಿತ್ವದಿಂದ ಗ್ರಾಮಸ್ಥರ ಗೌರವವನ್ನು ಸಂಪಾದಿಸಿದರು. ಯೋಜನೆಯಿಂದ ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಬಗ್ಗೆ ಸಂಶಯ ಹೊಂದಿದ್ದ ರೈತರಿಗೆ ಸಾಕಷ್ಟು ಪರಿಹಾರದ ಭರವಸೆ ನೀಡಿದರು ಮತ್ತು ಅವರು ಮನಃಪೂರ್ವಕವಾಗಿ ಒಪ್ಪಿಕೊಳ್ಳುವಂತೆ ಮಾಡಿದರು.
ನದಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಶರ್ಮಾ ಅವರು ತೋರಿಸುತ್ತಿದ್ದ ಅತ್ಯುತ್ಸಾಹವನ್ನು ನೋಡಿ ಜಲ ಸಂಪನ್ಮೂಲ ಇಲಾಖೆ ತ್ವರಿತವಾಗಿ ಅನುದಾನವನ್ನು ಬಿಡುಗಡೆ ಮಾಡಿತ್ತು,
ಕೇವಲ ಎರಡು ತಿಂಗಳಲ್ಲಿ ಶರ್ಮಾ ಅವರು ಹುರುಪಿನ ಕಾರ್ಯ ವಿಧಾನದ ಪರಿಣಾಮಕಾಗಿ ನದಿ ಒಂದು ರೂಪವನ್ನು ಪಡೆದುಕೊಂಡಿತು. ಇದರ ಪುನರುಜ್ಜೀವನದ ಸಂಪೂರ್ಣ ಯೋಜನೆ 2020ರ ಮಾರ್ಚ್ ತಿಂಗಳಿಗೆ ಅಂತ್ಯವಾಗಲಿದೆ.
ಪ್ರಸ್ತುತ, ನದಿಯನ್ನು ಪಿತಂಬರ್ಪುರದಿಂದ ದುಲಾರ್ಪುರ ಘಾಟ್ವರೆಗೆ ಪುನರುಜ್ಜೀವನಗೊಳಿಸಲಾಗಿದೆ. ಲಿಂಕ್ ಚಾನೆಲ್ ಉತ್ಖನನ ಕಾರ್ಯ ಮಾತ್ರ ಉಳಿದಿದೆ, ಕೇವಲ 3 ಕಿ.ಮೀ. ಕೆಲಸ ಮುಗಿದ ನಂತರ ಸೀತಾಮರ್ಹಿ ಶೀಘ್ರದಲ್ಲೇ ತನ್ನ ಹಿಂದಿನ ಹಸಿರು ವೈಭವವನ್ನು ಮೆಲುಕು ಹಾಕುತ್ತದೆ ಎಂದು ಶರ್ಮಾ ಭರವಸೆ ಇಟ್ಟುಕೊಂಡಿದ್ದಾರೆ.
ಶರ್ಮಾ ಅವರ ಕಠಿಣ ಪರಿಶ್ರಮವು ಈಗಾಗಲೇ ಸೀತಾಮರ್ಹಿಯಲ್ಲಿ ಅಪಾರ ಮೆಚ್ಚುಗೆ ಮತ್ತು ಗೌರವವನ್ನು ಗಳಿಸಿದೆ. ಮುಂದಿನ ಎಲ್ಲಾ ಯೋಜನೆಗಳಲ್ಲಿ ಜಿಲ್ಲೆಯ ಜನರು ಆಕೆಗೆ ಕೃತಜ್ಞತಾ ಪೂರ್ವಕ ಸಹಾಯದ ಭರವಸೆ ನೀಡಿದ್ದಾರೆ. ಇತರ ಜಿಲ್ಲೆಗಳಲ್ಲಿನ ಅಧಿಕಾರಿಗಳಿಗೆ ಅವರು ಅನುಕರಣೀಯ ಉದಾಹರಣೆಯಾಗಿ ನಿಂತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.