2011ರಲ್ಲಿ ಹಿಮಾಚಲ ಪ್ರದೇಶದ ಕೇವಲ ಮೂರು ವರ್ಷ ಹಳೆಯ ವಿಶ್ವವಿದ್ಯಾಲವೊಂದು ಪ್ರತಿಭಟನೆಗೆ ಸಾಕ್ಷಿಯಾಗಿತ್ತು. ಈ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಒಟ್ಟು ಸಂಖ್ಯೆ ಇದ್ದುದ್ದು 2,500. ಇದರಲ್ಲಿ 1,500 ವಿದ್ಯಾರ್ಥಿಗಳು ತರಗತಿಯಿಂದ ಹೊರ ಬಂದಿದ್ದರು. ಪ್ರತಿಭಟನೆ ಮಾಡಲಿಲ್ಲ, ಘೋಷಣೆ ಕೂಗಲಿಲ್ಲ, ಕೂಗಾಡಲಿಲ್ಲ, ದೊಂಬಿ ಎಬ್ಬಿಸಲಿಲ್ಲ. ತರಗತಿಗೆ ಹೋಗದೆ ಹೊರಗಡೆ ನಿಂತಿದ್ದರು ಅಷ್ಟೇ. ಈ ವಿಶ್ವವಿದ್ಯಾಲಯ ಶುಲ್ಕ ಹೆಚ್ಚಳ ಮಾಡಿದ್ದರ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಇದಾಗಿತ್ತು.
ಈ ಪ್ರತಿಭಟನೆ ವೇಳೆ ಕೆಲವೊಂದು ವಿದ್ಯಾರ್ಥಿಗಳು ಜೋರು ಧ್ವನಿಯಲ್ಲಿ ವಿಶ್ವವಿದ್ಯಾಲಯದ ಶುಲ್ಕ ಹೆಚ್ಚಳದ ಕ್ರಮವನ್ನು ಪ್ರಶ್ನಿಸಿದ್ದರು. ಆದರೆ ಅವರ ಮಾತು ಗೌರವಯುತವಾಗಿತ್ತು. ಈ ವೇಳೆ ವಿದ್ಯಾರ್ಥಿಗಳ ಬಳಿ ಬಂದ ವಿಶ್ವವಿದ್ಯಾಲಯದ ಮುಖ್ಯಸ್ಥ ಏನೂ ಉತ್ತರ ನೀಡದೆ ವಿದ್ಯಾರ್ಥಿಗಳನ್ನು ಆಡಿಟೋರಿಯಂಗೆ ಬರುವಂತೆ ಸೂಚನೆ ನೀಡಿದ್ದರು. ವಿದ್ಯಾರ್ಥಿಗಳು ಅವರ ಮಾತಿಗೆ ಸಹಮತ ತೋರಿಸಿ ಅಲ್ಲಿಗೆ ಹೋದರು. ಅಲ್ಲಿ ಚರ್ಚೆ ನಡೆಯಿತು.
ಮೂರು ಗಂಟೆಗಳ ಬಳಿಕ ಎರಡೂ ಕಡೆಯಲ್ಲೂ ಸಹಮತ ಮೂಡಿ ನಿರ್ಣಯ ಅಂಗೀಕಾರವಾಯಿತು. ಎಲ್ಲರೂ ತಮ್ಮ ತಮ್ಮ ಕಾರ್ಯದತ್ತ ಹಿಂದಿರುಗಿದರು.
ಈ ಪ್ರತಿಭಟನೆಯನ್ನು ಕೆಲವು ದಿನಗಳ ಹಿಂದೆ ಶುಲ್ಕ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸಿದ್ದ ದೆಹಲಿಯ ಜೆಎನ್ಯು ಪ್ರತಿಭಟನೆಯೊಂದಿಗೆ ಹೋಲಿಸಿ. ಇಲ್ಲಿ ಬೋಧಕವರ್ಗವನ್ನೇ ವಿದ್ಯಾರ್ಥಿಗಳು ಒತ್ತೆಯಾಗಿರಿಸಿದ್ದರು, ಇಡೀ ವಿಶ್ವವಿದ್ಯಾಲಯದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು, ಪ್ರತಿಭಟನೆ ನಡೆಸದ ವಿದ್ಯಾರ್ಥಿಗಳನ್ನು ಬಲವಂತವಾಗಿ ತರಗತಿಗೆ ಹೋಗದಂತೆ ತಡೆಯಲಾಯಿತು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಇಲ್ಲಿ ನಡೆಸಲಾದ ಪ್ರತಿಭಟನೆಯ ಸಂದರ್ಭದಲ್ಲೂ ಇದೇ ನಡೆಯಿತು. ಗಲಾಟೆ, ದೊಂಬಿ, ವಿಶ್ವವಿದ್ಯಾಲಯದ ಆಸ್ತಿಯ ಧ್ವಂಸ ಎಲ್ಲವೂ ಅಲ್ಲಿ ನಡೆದಿತ್ತು.
ಎರಡೂ ವಿಶ್ವವಿದ್ಯಾಲಯಗಳ ಪ್ರತಿಭಟನೆಗೆ ಇದ್ದ ಭಿನ್ನತೆ ಏನು? ಏನೆಂದರೆ ವಿದ್ಯಾರ್ಥಿ ರಾಜಕೀಯ.
ಒಂದು ದಶಕಗಳಿಂದ ಖಾಸಗಿ ವಿಶ್ವವಿದ್ಯಾಲಯಗಳು ಅನೇಕ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಯಾವುದೇ ವಿದ್ಯಾರ್ಥಿ ಸಂಘಟನೆಗಳು ಅಥವಾ ಒಕ್ಕೂಟಗಳಿಲ್ಲದೆ ಈ ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದ ಇಲ್ಲಿನ ವಿದ್ಯಾರ್ಥಿಗಳು ಇಂದು ದೇಶ ಮತ್ತು ಪ್ರಪಂಚದಾದ್ಯಂತ ಸೇವಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಜೆಎನ್ಯು ಅಥವಾ ಜಾಮಿಯಾದ ವಿದ್ಯಾರ್ಥಿಗಳಂತೆಯೇ ಇವರುಗಳಿಗೆ ರಾಜಕೀಯವಾಗಿ ಆಳವಾದ ಜ್ಞಾನಗಳಿವೆ.
ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನವು ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಬೋಧನೆಗಳನ್ನು ನೀಡುತ್ತವೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕಲಿಕೆಯ ಸಮಯವು ಅತ್ಯಂತ ಮಹತ್ವದ್ದಾಗಿರುತ್ತದೆ. ಇಲ್ಲಿ ವಿದ್ಯಾರ್ಥಿ ಸಂಘಗಳು ಇವೆ, ಆದರೆ ಅವುಗಳು ಗಮನ ಹರಿಸುವುದು ಪಠ್ಯ ಚಟುವಟಿಕೆಗಳ ಮೇಲೆ ಮಾತ್ರ. ಅನಗತ್ಯ ಕವಿತೆಗಳ ವಾಚನವನ್ನು ಮಾಡಿ ಅಥವಾ ಭಯೋತ್ಪಾದಕರಿಗೆ ಬೆಂಬಲವನ್ನು ನೀಡುವ ಸಮಾರಂಭ ಏರ್ಪಡಿಸುವ ಬಗ್ಗೆ ಇವುಗಳು ಗಮನ ಹರಿಸುವುದಿಲ್ಲ.
ಆದರೆ, ಜೆಎನ್ಯು ಅಥವಾ ಜಾಮಿಯಾಗಳು ಶೈಕ್ಷಣಿಕ ಕಾರ್ಯಕ್ಕೆ ಬದಲಾಗಿ ವಿದ್ಯಾರ್ಥಿ ರಾಜಕೀಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ ಹೆಸರುವಾಸಿಯಾಗಲು ಪ್ರಾರಂಭಿಸುತ್ತಿವೆ. ಹಲವು ಬಾರಿ ಈ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಕ್ಯಾಂಪಸ್ನಲ್ಲಿನ ಹಿಂಸಾಚಾರವನ್ನು ನಿಗ್ರಹಿಸಲು ಯತ್ನಿಸಿದ ಕಾರಣಕ್ಕೆ ಪೊಲೀಸರ ಅಧಿಕಾರ ವ್ಯಾಪ್ತಿಯನ್ನೇ ಪ್ರಶ್ನಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ, ಪಂಜಾಬ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘರ್ಷಗಳು ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಸಾಮಾನ್ಯವಾಗಿತ್ತು. ಕ್ಯಾಂಪಸ್ ಧ್ರುವೀಕರಣದ ವಾತಾವರಣವು ಭದ್ರತಾ ದುಃಸ್ವಪ್ನಕ್ಕೆ ಕಾರಣವಾಗಿತ್ತು, ಇಲ್ಲಿನ ಕ್ಯಾಂಟೀನ್ಗಳು ಸೋಡಾ ಗ್ಲಾಸ್ ಬಾಟಲಿಗಳನ್ನು ದಾಸ್ತಾನು ಮಾಡುವುದನ್ನೇ ನಿಲ್ಲಿಸಬೇಕಾಗಿತ್ತು, ವಿದ್ಯಾರ್ಥಿಗಳು ಇವುಗಳನ್ನು ಹೆಚ್ಚಾಗಿ ಹಲ್ಲೆಗಳನ್ನು ನಡೆಸಲು ಬಳಸುತ್ತಿದ್ದರು. ಇಂದಿಗೂ ಅಲ್ಲಿ ಕಾಲೇಜು ಚುನಾವಣೆಯ ವೇಳೆ ಭದ್ರತಾ ವ್ಯವಸ್ಥೆ ಹೆಚ್ಚಾಗಿರುತ್ತದೆ.
ಯಾವುದೇ ಅಪರೂಪದ ಸಂದರ್ಭದಲ್ಲಿ ಆಡಳಿತದೊಂದಿಗೆ ಭಿನ್ನಾಭಿಪ್ರಾಯ ತಲೆದೋರಿದಾದ ಖಾಸಗಿ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಪರಿಹಾರಗಳನ್ನು ಹುಡುಕುತ್ತಾರೆಯೇ ಹೊರತು ಗಲಾಟೆ, ದೊಂಬಿಗೆ ಮುಂದಾಗುವುದಿಲ್ಲ. ಆದರೆ, ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಈಗ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿ ರಾಜಕೀಯಕ್ಕೆ ಪ್ರವೇಶಿಸುವ ಬಲು ದೊಡ್ಡ ಕನಸನ್ನು ನನಸಾಗಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಅವರು ಆರಿಸಿಕೊಂಡಿದ್ದು, ಪ್ರತಿಭಟನೆ, ಗಲಾಟೆ, ದೊಂಬಿಯನ್ನು ಎಂಬುದೇ ದುರಾದೃಷ್ಟಕರ.
ವಿದ್ಯಾರ್ಥಿ ರಾಜಕೀಯಕ್ಕೆ ತೆರೆ ಬೀಳಬೇಕಾದ ಅನಿವಾರ್ಯತೆ ಈಗ ಎದ್ದು ಕಾಣುತ್ತಿದೆ. ಈ ರೀತಿಯ ಭೀತಿಗಳಿಗೆ ಇಂದು ಜಾಗವಿಲ್ಲ. 2025ರ ವೇಳೆಗೆ $5 ಟ್ರಿಲಿಯನ್ ಆರ್ಥಿಕತೆಯನ್ನು ಹೊಂದುವ ಗುರಿ ಇಟ್ಟಿರುವ ನಾವು ಈ ವಿಶ್ವವಿದ್ಯಾಲಯ ಸಂಸ್ಕೃತಿಯನ್ನು ಮುಂದುವರೆಸುವುದು ಅಪಾಯಕಾರಿಯಾಗಿದೆ.
ಭಾರತದ ಸಾರ್ವಜನಿಕ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ರಾಜಕಾರಣವನ್ನು ಬೇಗನೆ ನಿಷೇಧಿಸಬೇಕಿದೆ. ಯುವ ಮನಸ್ಸುಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಯಾವುದೇ ಸಂದೇಹವಿಲ್ಲದಿದ್ದರೂ, ನಾವು ಅಪಕ್ವತೆ ಮತ್ತು ಅಸಹಿಷ್ಣುತೆಯನ್ನು ಯುವ ಉತ್ಸಾಹದೊಂದಿಗೆ ಗೊಂದಲಗೊಳಿಸುವುದನ್ನು ನಿಲ್ಲಿಸಲು ಇದು ಸಮಯವಾಗಿದೆ.
ವಿದ್ಯಾರ್ಥಿ ರಾಜಕೀಯದ ಬದಲಾಗಿ ರಾಜಕೀಯ ನೇಮಕಾತಿಗಳು ವಿಶ್ವವಿದ್ಯಾಲಯಗಳಲ್ಲಿ ನಡೆಯಬೇಕಿದೆ. ರಾಜಕೀಯ ಸೇರಲು ಇಚ್ಛೆ ಪಡುವವರು ರಾಜಕೀಯ ವಿದ್ಯಾರ್ಥಿ ಸಂಘಟನೆ, ಒಕ್ಕೂಟದ ಬದಲು ನೇರವಾಗಿ ರಾಜಕೀಯ ಪಕ್ಷವನ್ನು ಸೇರಿ ಅಲ್ಲಿ ತನ್ನ ಸಾಮರ್ಥ್ಯವನ್ನು ಬಲಪಡಿಸಬೇಕು.
ಹಿಂದೆ ಕಾಲೇಜುಗಳಲ್ಲಿ ವಿದ್ಯಾರ್ಥಿ ರಾಜಕೀಯ ಇಷ್ಟು ತೀವ್ರವಾಗಿ ಇರಲಿಲ್ಲ. ಆದರೂ ಅನೇಕರು ರಾಜಕೀಯದಲ್ಲಿ ಮಿಂಚಿದ್ದಾರೆ. ಆದರೆ ಪ್ರಸ್ತುತ ನಮ್ಮ ದೇಶ ಸಾಕ್ಷೀಕರಿಸುತ್ತಿರುವ ವಿದ್ಯಾರ್ಥಿ ರಾಜಕೀಯವನ್ನು ಹೀಗೆಯೇ ಮುಂದುವರೆಯಲು ಬಿಟ್ಟರ ಮುಂದೊಂದು ದಿನ ನಾವು ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಬನ್ನಿ, ನಾವೆಲ್ಲರೂ ಜೊತೆಯಾಗಿ ನಮ್ಮ ವಿಶ್ವವಿದ್ಯಾಲಯಗಳನ್ನು ಮತ್ತೊಮ್ಮೆ ಶ್ರೇಷ್ಠತೆಯತ್ತ ಕೊಂಡೊಯ್ಯೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.