ನವದೆಹಲಿ: ಜಾಹೀರಾತಿಗಾಗಿ ಬರೋಬ್ಬರಿ 520 ಕೋಟಿ ರೂಪಾಯಿಗಳನ್ನು ವ್ಯಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದೀಗ ತಮ್ಮ ಪಕ್ಷದ ಉದ್ಧಾರಕ್ಕಾಗಿ ದೇಣಿಗೆ ನೀಡುವಂತೆ ಸಾರ್ವಜನಿಕರಲ್ಲಿ ಅಂಗಲಾಚಿದ್ದಾರೆ.
ಪ್ರತಿಯೊಬ್ಬರು ನಮ್ಮ ಪಕ್ಷಕ್ಕೆ ತಲಾ 10 ರೂಪಾಯಿಗಳನ್ನು ನೀಡಿ ಎಂದು ಅವರು ಕೇಳಿಕೊಂಡಿದ್ದಾರೆ.
ಈ ಬಗ್ಗೆ ಟಿವಿ ಮುಖಾಂತರ ಜನರಿಗೆ ಕರೆ ನೀಡಿರುವ ಅವರು, ‘ಮುಖ್ಯಮಂತ್ರಿಯಾಗಿ ಹಣ ಕೇಳುತ್ತಿದ್ದೇನೆ ಎಂದು ನೀವು ಅಂದುಕೊಳ್ಳಬಹುದು, ನಾವು ಈತನನ್ನು ಮುಖ್ಯಮಂತ್ರಿ ಮಾಡಿದೆವು ಆದರೂ ಇವನು ಹಣ ಕೇಳುತ್ತಿದ್ದಾನೆ ಎಂದುಕೊಳ್ಳಬಹುದು. ಆದರೆ ನಾವು ಕೆಟ್ಟ ದಾರಿಯಿಂದ ಹಣ ಮಾಡುತ್ತಿಲ್ಲ. ಉತ್ತಮ ರಾಜಕೀಯಕ್ಕಾಗಿ ನಿಮ್ಮಿಂದ 10 ರೂಪಾಯಿ ಕೇಳುತ್ತಿದ್ದೇನೆ’ ಎಂದಿದ್ದಾರೆ.
ಅಧಿಕಾರಕ್ಕೆ ಬಂದ ಬಳಿಕ ನಮ್ಮ ಪಕ್ಷದ ಫಂಡ್ ಕಡಿಮೆಯಾಗಿದೆ, ನಮ್ಮ ಪಕ್ಷಕ್ಕೀಗ ಫಂಡ್ ಬೇಕಾಗಿದೆ. ಜನರಿಂದ ಈ ಫಂಡ್ನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದಿದ್ದಾರೆ.
ಜಾಹೀರಾತಿಗಾಗಿ ಕೋಟಿಗಟ್ಟಲೆ ಖರ್ಚು ಮಾಡಿ ಟೀಕೆಗೆ ಒಳಗಾಗಿರುವ ಎಎಪಿ ಇದೀಗ ತನ್ನ ಪಕ್ಷಕ್ಕೆ ದೇಣಿಗೆ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.