ಭೋಪಾಲ್: ಮಧ್ಯಪ್ರದೇಶ ಕಾಂಗ್ರೆಸ್ ಸೇವಾ ದಳವು ಗುರುವಾರ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕುರಿತು ವಿವಾದಾತ್ಮಕ ಕಿರುಪುಸ್ತಕವೊಂದನ್ನು ಪ್ರಕಟಿಸಿದ್ದು, ಹಿಂದೂ ಮಹಾಸಭಾ ಸಹ ಸಂಸ್ಥಾಪಕ ನಾಥುರಾಮ್ ಗೋಡ್ಸೆ ಅವರೊಂದಿಗೆ ಸಾವರ್ಕರ್ ದೈಹಿಕ ಸಂಬಂಧವನ್ನು ಹೊಂದಿದ್ದಾರೆಂದು ಹೇಳಿಕೊಂಡಿದೆ.
ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಹಿಂದೂ ಮಹಾಸಭಾ ಪಾತ್ರವನ್ನು ಈ ಕಿರುಹೊತ್ತಿಗೆ ಟೀಕಿಸಿದೆ. ಕಿರು ಪುಸ್ತಕದ ಇಡೀ ವಿಷಯವೇ ಪ್ರಶ್ನಾರ್ಹವಾಗಿದ್ದು ಮತ್ತು ದೀರ್ಘಕಾಲದ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಬೆಂಕಿ ಹಚ್ಚುವ ಸಾಹಿತ್ಯವು ಮಧ್ಯ ಪ್ರದೇಶದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ, ಬಿಜೆಪಿ ಕಾಂಗ್ರೆಸ್ಸಿನ ಈ ಕೃತ್ಯವನ್ನು ಖಂಡಿಸಿದೆ ಮತ್ತು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ. ಇತರ ಹಿಂದೂ ಸಂಘಟನೆಗಳು ಕೂಡ ಕಿರುಪುಸ್ತಕದ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿದೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಅಖಿಲ ಭಾರತ ಕಾಂಗ್ರೆಸ್ ಸೇವಾ ದಳ ತರಬೇತಿ ಶಿಬಿರದಲ್ಲಿ ಭಾಗವಹಿಸಿದ 500 ಜನರಲ್ಲಿ ವಿತರಿಸಲಾದ ಸಾಹಿತ್ಯವು ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ಫ್ಯಾಸಿಸ್ಟ್ ಸಂಘಟನೆಗಳೆಂದು ಆರೋಪಿಸಿದೆ.
‘ವೀರ್ ಸಾವರ್ಕರ್ ಕಿತ್ನೆ ವೀರ್?’ ‘(ವೀರ್ ಸಾವರ್ಕರ್ ಎಷ್ಟು ಧೈರ್ಯಶಾಲಿ?) ಎಂದು ಪ್ರಶ್ನಿಸಿ, ಸಾವರ್ಕರ್ 12 ವರ್ಷದ ಬಾಲಕನಾಗಿದ್ದಾಗ ಮಸೀದಿಗೆ ಕಲ್ಲು ಎಸೆದು ಅಲ್ಲಿನ ಅಂಚುಗಳನ್ನು ಒಡೆದಿದ್ದರು. ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆ ಮತ್ತು ಅವರ ನಡುವೆ ದೈಹಿಕ ಸಂಬಂಧಗಳು ಇತ್ತು ಎಂಬಿತ್ಯಾದಿ ವಿವಾದಾತ್ಮಕ ಉಲ್ಲೇಖಗಳು ಪುಸ್ತಕದಲ್ಲಿ ಇದೆ.
ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ಸಾವರ್ಕರ್ ಜನರನ್ನು ಪ್ರಚೋದಿಸುತ್ತಿದ್ದರು ಎಂದು ಪುಸ್ತಕ ಹೇಳಿದೆ. ಜೈಲಿನಿಂದ ಬಿಡುಗಡೆಯಾಗುವ ಸಲುವಾಗಿ ಸಾವರ್ಕರ್ ಬ್ರಿಟಿಷರಿಗೆ ಲಿಖಿತವಾಗಿ ಕ್ಷಮೆಯಾಚಿಸಿದ್ದರು ಮತ್ತು ತಾನು ಮತ್ತೆ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದು ಪುಸ್ತಕದಲ್ಲಿ ಹೇಳಲಾಗಿದೆ.
ಕಾಂಗ್ರೆಸ್ ಸೇವಾ ದಳದ ಸಭೆಯಲ್ಲಿ ವಿವಾದಿತ ಪುಸ್ತಕ ವಿತರಣೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ರಾಜ್ಯ ಬಿಜೆಪಿ ಉಪಾಧ್ಯಕ್ಷ ರಮೇಶ್ವರ ಶರ್ಮಾ ಕಾಂಗ್ರೆಸ್ ಕೃತ್ಯಕ್ಕೆ ಪ್ರತಿಕ್ರಿಯೆಯನ್ನು ನೀಡಿ, “ಒಲೆಯಲ್ಲಿ ಹಾಕಿ ಮಹಿಳೆಯರನ್ನು ಸುಡುವ ಕಾಂಗ್ರೆಸ್ಸಿಗರಿಂದ ಬೇರೆ ಏನನ್ನು ನಿರೀಕ್ಷಿಸಬಹುದು?” ಎಂದಿದ್ದಾರೆ. 1990 ರ ದಶಕದಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಮುಖಂಡನೋರ್ವ ತನ್ನ ಹೆಂಡತಿಯನ್ನು ಕೊಂದು ಆಕೆಯ ದೇಹವನ್ನು ತಂದೂರ್ ಅಲ್ಲಿ ಹಾಕಿ ಸುಟ್ಟ ಘಟನೆಯನ್ನು ಉಲ್ಲೇಖಿಸಿ ಅವರು ಹೇಳಿಕೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.