ನವದೆಹಲಿ: ಜನರಲ್ ಬಿಪಿನ್ ರಾವತ್ ಅವರು ಭಾರತದ ಮೊದಲ ರಕ್ಷಣಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶಕ್ಕೆ ಮಹತ್ವದ ಮತ್ತು ಐತಿಹಾಸಿಕ ದಿನ ಎಂದು ಬಣ್ಣಿಸಿದ್ದಾರೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರು ಸಿಡಿಎಸ್ ನೇಮಕ ಮಾಡುವ ಮೂಲಕ ಮತ್ತೊಂದು ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರು ದೀರ್ಘಾವಧಿಯಿಂದ ಬಾಕಿ ಇದ್ದ ಮತ್ತೊಂದು ಬೇಡಿಕೆಯನ್ನು ಈಡೇರಿಸುತ್ತಿದ್ದಾರೆ, ಹೀಗಾಗಿ ಭಾರತಕ್ಕೆ ಇದು ಒಂದು ಮಹತ್ವದ ಮತ್ತು ಐತಿಹಾಸಿಕ ದಿನವಾಗಿದೆ. ಭಾರತ ತನ್ನ ಮೊದಲ ಸೇನಾ ಮಹಾ ದಂಡನಾಯಕನ್ನು ಪಡೆದುಕೊಂಡಿದೆ. ಈ ನಿರ್ಧಾರವು ವಿಶ್ವದ ಅತ್ಯುತ್ತಮ ರಕ್ಷಣಾ ಪಡೆಗಳ ಪೈಕಿ ಒಂದಾಗುವ ಭಾರತದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ ” ಎಂದು ಶಾ ಸರಣಿ ಟ್ವೀಟ್ಗಳಲ್ಲಿ ಹೇಳಿದ್ದಾರೆ.
ರಾವತ್ ಅವರಿಗೆ ಅಭಿನಂದನೆ ಸಲ್ಲಿಸಿದ ಶಾ, ಹೊಸ ಸಿಡಿಎಸ್ ನಾಯಕತ್ವದಲ್ಲಿ ಮೂರೂ ಪಡೆಗಳು ಒಟ್ಟಾಗಿ ತಂಡವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.
“ರಾವತ್ ಅವರ ನಾಯಕತ್ವದಲ್ಲಿ ಮೂರೂ ಪಡೆಗಳು ಒಟ್ಟಾಗಿ ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ನಮ್ಮ ರಾಷ್ಟ್ರವನ್ನು ಎಲ್ಲಾ ಬೆದರಿಕೆಗಳ ವಿರುದ್ಧ ಭದ್ರಪಡಿಸುವ ಯಾವುದೇ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಸಿಡಿಎಸ್ ಹೊಸ ಭಾರತದ ಆಕಾಂಕ್ಷೆಗಳನ್ನು ಸಹ ಪೂರೈಸಲಿದೆ ಎಂದು ಶಾ ಅಭಿಪ್ರಾಯಿಸಿದ್ದಾರೆ.
“ಭಾರತೀಯ ಸಶಸ್ತ್ರ ಪಡೆಗಳ ಎಲ್ಲಾ ಮೂರು ವಿಭಾಗಗಳ ಸಿಬ್ಬಂದಿಗಳ ಕಲ್ಯಾಣವನ್ನು ಖಾತರಿಪಡಿಸುವ, ನಮ್ಮ ಮಿಲಿಟರಿಯನ್ನು ಆಧುನೀಕರಿಸುವ ಮತ್ತು ಹೊಸ ಭಾರತದ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿನ ಮೋದಿ ಸರ್ಕಾರದ ಪ್ರಯತ್ನಗಳನ್ನು ಮತ್ತಷ್ಟು ಮುಂದುವರಿಸಲಿದ್ದಾರೆ” ಎಂದು ಅವರು ಹೇಳಿದರು.
A momentous and historic day for India as PM @narendramodi ji fulfils yet another long pending demand and India gets its First Chief of Defence Staff. I am confident that this decision will further strengthen India’s resolve to be among the best defence forces in the world.
— Amit Shah (@AmitShah) January 1, 2020
I congratulate General Bipin Rawat, on taking charge as India’s first Chief of Defence Staff. I am sure under his leadership all the three forces will collectively work as a team and leave no stone unturned in securing our nation against all odds.
— Amit Shah (@AmitShah) January 1, 2020
The Chief of Defence Staff will not only further Modi government’s efforts towards ensuring welfare of personnel of all the three wings of Indian Armed Forces, modernise our military and fulfil aspirations of a #NewIndia.
— Amit Shah (@AmitShah) January 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.