ನವದೆಹಲಿ: ಹೊಸ ವರ್ಷದ ಸಂದರ್ಭದಲ್ಲಿ ರಾಷ್ಟ್ರಕ್ಕೆ ಶುಭ ಹಾರೈಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಹೊಸ ದಶಕವು ಬಲಿಷ್ಠ ಭಾರತದ ಬಗೆಗಿನ ನಮ್ಮ ಬದ್ಧತೆಯನ್ನು ನವೀಕರಿಸುವ ಸಂದರ್ಭವಾಗಿದೆ ಎಂದು ಹೇಳಿದ್ದಾರೆ.
“ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಮತ್ತು ಹೊಸ ದಶಕದ ಉದಯವು ಬಲವಾದ ಮತ್ತು ಹೆಚ್ಚು ಸಮೃದ್ಧ ಭಾರತದತ್ತ ನಮ್ಮ ಬದ್ಧತೆಯನ್ನು ನವೀಕರಿಸುವ ಒಂದು ಸಂದರ್ಭವಾಗಿದೆ. 2020 ನಮ್ಮ ಕುಟುಂಬಗಳಿಗೆ, ನಮ್ಮ ದೇಶಕ್ಕೆ ಮತ್ತು ನಮ್ಮ ಸುಂದರ ಭೂಮಿಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ” ಎಂದು ಕೋವಿಂದ್ ಟ್ವೀಟ್ ಮಾಡಿದ್ದಾರೆ.
“ಹೊಸ ವರ್ಷ 2020ರ ಆಗಮನದ ಹಿನ್ನಲೆಯಲ್ಲಿ ನಮ್ಮ ಎಲ್ಲ ನಾಗರಿಕರಿಗೆ ನನ್ನ ಆತ್ಮೀಯ ಶುಭಾಶಯಗಳನ್ನು ಮತ್ತು ಹಾರೈಕೆಗಳನ್ನು ತಿಳಿಸುತ್ತೇನೆ. ಹೊಸ ವರ್ಷವು ಹೊಸ ಪ್ರಾರಂಭದ ಸಮಯ” ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.
ಜೀವನದಲ್ಲಿ ಹೊಸ ಗುರಿಗಳನ್ನು ಇಟ್ಟುಕೊಳ್ಳಲು ಮತ್ತು ಹೊಸ ನಿರ್ಣಯಗಳನ್ನು ಮಾಡಲು ಇದು ಸುಸಮಯ ಎಂದು ನಾಯ್ಡು ಹೇಳಿದ್ದಾರೆ. “ಇದು ಕೃತಜ್ಞರಾಗಿರಬೇಕಾದ ಸಮಯ, ಸಂತೋಷಪಡುವ ಸಮಯ ಮತ್ತು ಭರವಸೆಯ ಸಮಯ” ಎಂದು ಅವರು ಮತ್ತೊಂದು ಟ್ವಿಟ್ನಲ್ಲಿ ತಿಳಿಸಿದ್ದಾರೆ.
Happy New Year everyone!
The dawn of New Year and the new decade is an occasion to renew our commitment towards a stronger and more prosperous India.
May 2020 bring joy, peace and prosperity to our families, to our country, and to our beautiful planet!
— President of India (@rashtrapatibhvn) January 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.