ನವದೆಹಲಿ: ಕೇಂದ್ರ ಸರ್ಕಾರವು ಸಬ್ ಕಾ ವಿಶ್ವಾಸ್ (ಲೆಗಸಿ ಡಿಸ್ಪ್ಯೂಟ್ ರೆಸೊಲ್ಯುಶನ್) ಯೋಜನೆಯನ್ನು ವಿಸ್ತರಣೆ ಮಾಡಿದೆ. ತೆರಿಗೆದಾರರ ವ್ಯಾಪಕ ಸ್ಪಂದನೆಯ ಹಿನ್ನಲೆಯಲ್ಲಿ ಯೋಜನೆಯನ್ನು 2020ರ ಜನವರಿ 15ರವರೆಗೆ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ. ಶೇಕಡಾ 73ರಷ್ಟು ಜನರು ಈ ಯೋಜನೆಯನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ ಮತ್ತು 30,627 ಕೋಟಿ ರೂ.ಗಳನ್ನು ಪಾವತಿಸಲು ಬದ್ಧತೆಯನ್ನು ತೋರಿಸಿದ್ದಾರೆ.
ಸಬ್ ಕಾ ವಿಶ್ವಾಸ್ ಯೋಜನೆಯನ್ನು ಸರ್ಕಾರ 15 ದಿನಗಳವರೆಗೆ ಅಂದರೆ 2020ರ ಜನವರಿ 15 ಕ್ಕೆ ವಿಸ್ತರಿಸಲಾಗಿದೆ.
“ತೆರಿಗೆದಾರರ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಜನವರಿ 15 ರವರೆಗೆ ಈ ಯೋಜನೆಯನ್ನು 15 ದಿನಗಳವರೆಗೆ ವಿಸ್ತರಿಸಿದೆ” ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸೇವಾ ತೆರಿಗೆ ಮತ್ತು ಅಬಕಾರಿ ಸುಂಕ ವಿವಾದವನ್ನು ಬಗೆಹರಿಸಿಕೊಳ್ಳಲು ಕೇಂದ್ರ ಸರ್ಕಾರವು ಸಬ್ ಕಾ ವಿಶ್ವಾಸ್ ಯೋಜನೆಯನ್ನು ಪರಿಚಯಿಸಿತ್ತು.
ಜಿಎಸ್ಟಿ ಪೂರ್ವದ ಅವಧಿಯಲ್ಲಿ ಬಗೆಹರಿಯದೆ ಉಳಿದಿರುವ ಪ್ರಕರಣಗಳ ಒಟ್ಟು ತೆರಿಗೆ ಮೊತ್ತ ರೂ.3.75 ಲಕ್ಷ ಕೋಟಿ ಇದೆ ಎಂದು ಬಜೆಟಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಇಷ್ಟು ದೊಡ್ಡ ಪ್ರಮಾಣದ ಹೊರೆಯನ್ನು ಇಳಿಸಲು ಮತ್ತು ದೈನಂದಿನ ವಾಣಿಜ್ಯ ವ್ಯವಹಾರದಲ್ಲಿ ಮುಂದುವರೆಸಲು ‘ಸಬ್ ಕಾ ವಿಶ್ವಾಸ್’ ಯೋಜನೆಯನ್ನು ತರುವ ಪ್ರಸ್ತಾಪ ಮಾಡಿದ್ದರು. ಈ ಮೂಲಕ ಬಾಕಿ ಉಳಿದಿರುವ 1.30 ಖಟ್ಲೆಗಳನ್ನು ಬಗೆಹರಿಸುವ ಅವಕಾಶವನ್ನು ಕಲ್ಪಸಿಕೊಟ್ಟಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.