ಕೋಟ: ಡಿಸೆಂಬರ್ 11 ರಂದು ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ ನಂತರ ಇದೇ ಮೊದಲ ಬಾರಿಗೆ ರಾಜಸ್ಥಾನದ ಕೋಟಾದಲ್ಲಿ ವಾಸಿಸುತ್ತಿರುವ 8 ಮಂದಿ ಪಾಕಿಸ್ಥಾನದ ಹಿಂದೂ ನಿರಾಶ್ರಿತರಿಗೆ ಸೋಮವಾರ ಭಾರತೀಯ ಪೌರತ್ವ ನೀಡಲಾಗಿದೆ. 2000ನೇ ಇಸವಿಯಿಂದ ಇವರು ಭಾರತದಲ್ಲಿ ವಾಸಿಸುತ್ತಿದ್ದಾರೆ.
ಕೋಟ ಜಿಲ್ಲಾಧಿಕಾರಿ ಇವರಿಗೆ ಪೌರತ್ವದ ಪ್ರಮಾಣಪತ್ರವನ್ನು ನೀಡಿದರು.
ಮೂಲಗಳ ಪ್ರಕಾರ, ಈ ನಿರಾಶ್ರಿತರು ಧಾರ್ಮಿಕ ಕಿರುಕುಳವನ್ನು ಎದುರಿಸಿ ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಿಂದ ಭಾರತಕ್ಕೆ ಪರಾರಿಯಾಗಿದ್ದರು. ಈಗ ನಾವು ಭಾರತೀಯ ನಾಗರಿಕರಾಗಿ ಭಾರತೀಯ ಸಂವಿಧಾನದ ಪ್ರಕಾರ ಜೀವನವನ್ನು ನಡೆಸಬಹುದು ಎಂಬ ಬಗ್ಗೆ ಸಮಾಧಾನವನ್ನು ಇವರುಗಳು ವ್ಯಕ್ತಪಡಿಸಿದ್ದಾರೆ.
ಅವರಲ್ಲಿ ಒಬ್ಬರು, “ನಾವು ಇಲ್ಲಿಗೆ ಧಾರ್ಮಿಕ ಕಿರುಕುಳ ಅನುಭವಿಸಿ ಬಂದಿದ್ದೇವೆ, ನಮ್ಮ ಕುಟುಂಬಗಳು ಈಗಾಗಲೇ ಇಲ್ಲಿ ವಾಸಿಸತೊಡಗಿದೆ. ನಮಗೆ ಪೌರತ್ವ ನೀಡಿದ ಭಾರತಕ್ಕೆ ನಮ್ಮ ಧನ್ಯವಾದಗಳು. ನಾನು ತುಂಬಾ ಸಂತೋಷವಾಗಿದ್ದೇನೆ ಮತ್ತು ಆ ಸಂತೋಷವನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ” ಎಂದು ನಿರಾಶ್ರಿರಾಗಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
“ನಾವು 20-25 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ನಾವು ಇಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸಲಿಲ್ಲ. ಪಾಕಿಸ್ಥಾನದಲ್ಲಿ ವಾಸಿಸುವ ಎಲ್ಲಾ ಸಿಂಧಿಗಳು ಭಾರತಕ್ಕೆ ಬರಲು ಬಯಸುತ್ತಾರೆ. ನಾವು ಇಲ್ಲಿ ತುಂಬಾ ಸಂತೋಷವಾಗಿದ್ದೇವೆ. ನಾವು ಇಲ್ಲಿಯವರೆಗೆ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಲಿಲ್ಲ” ಎಂದು ಇನ್ನೊಬ್ಬರು ಹೇಳಿದ್ದಾರೆ.
ಸಿಎಎ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದರೂ, ಸ್ಥಳೀಯ ಆಡಳಿತ ಇದನ್ನು ಪೌರತ್ವ ನೀಡುವ ವಾಡಿಕೆಯ ಪ್ರಕ್ರಿಯೆ ಎಂದು ಕರೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.