ನವದೆಹಲಿ: ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಪೌರತ್ವ ತಿದ್ದಪಡಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಝೀ ನ್ಯೂಸ್ ಆರಂಭಿಸಿದ ಅಭಿಯಾನವು ವಿಶ್ವ ದಾಖಲೆಯನ್ನು ನಿರ್ಮಾಣ ಮಾಡಿದೆ. ಶುಕ್ರವಾರ 8 ಗಂಟೆಯವರೆಗೆ ಸುಮಾರು 1 ಕೋಟಿ ಜನರು ಈ ಅಭಿಯಾನಕ್ಕೆ ಬೆಂಬಲವನ್ನು ನೀಡಿದ್ದಾರೆ.
ದೇಶದ ಮೊದಲ ಅತೀದೊಡ್ಡ ಡಿಜಿಟಲ್ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಭಾರೀ ಜನ ಸ್ಪಂದನೆ ವ್ಯಕ್ತವಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡುವುದಾದರೆ 7836800500 ಮತ್ತು 7834998998 ಟೋಲ್ ಫ್ರೀ ನಂಬರಿಗೆ ಕರೆ ಮಾಡುವಂತೆ ಜನರಿಗೆ ಮನವಿ ಮಾಡಿಕೊಳ್ಳಲಾಗಿದೆ. ಈ ನಂಬರಿಗೆ ಮಿಸ್ಡ್ ಕಾಲ್ ಕೊಟ್ಟರೆ ಕಾಯ್ದೆಯನ್ನು ಬೆಂಬಲಿಸುತ್ತಿದ್ದೀರಿ ಎಂದು ಅರ್ಥ. ಮಾತ್ರವಲ್ಲದೇ, ಟ್ವಿಟರಿನಲ್ಲಿ #ZEENewsCreatesWorldRecord ಎಂಬ ಹ್ಯಾಶ್ ಟ್ಯಾಗ್ ಅನ್ನು ಬಳಸಿ ಟ್ವಿಟ್ ಮಾಡುವ ಮೂಲಕವೂ ಈ ಅಭಿಯಾನಕ್ಕೆ ಬೆಂಬವನ್ನು ಸೂಚಿಸಬಹುದಾಗಿದೆ.
ಈ ಅಭಿಯಾನಕ್ಕೆ ದೇಶದ ಜನರಿಂದ ಮಾತ್ರವಲ್ಲದೇ ಪ್ರಪಚದಾದ್ಯಂತದ ಜನರಿಂದ ಬೆಂಬಲ ವ್ಯಕ್ತವಾಗಿದೆ.
ಮಾಹಿತಿಯ ಪ್ರಕಾರ, ಡಿಸೆಂಬರ್ 21 ರಂದು ಅದರ ಮೊದಲ ದಿನ, ಝೀ ನ್ಯೂಸ್ಗೆ ಒಟ್ಟು 81,000 ಮಿಸ್ಡ್ ಕಾಲ್ಗಳು ಬಂದಿವೆ. ಡಿಸೆಂಬರ್ 22 ರಂದು 10 ಲಕ್ಷ ಮಿಸ್ಡ್ ಕಾಲ್ಗಳು ಬಂದಿವೆ, ಡಿಸೆಂಬರ್ 23 ರಂದು 20 ಲಕ್ಷ ಮಿಸ್ಡ್ ಕಾಲ್ಗಳು ಬಂದಿವೆ, ಡಿಸೆಂಬರ್ 24 ರಂದು 18 ಲಕ್ಷ, ಡಿಸೆಂಬರ್ 25 ರಂದು 13 ಲಕ್ಷ, ಡಿಸೆಂಬರ್ 26 ರಂದು 23 ಲಕ್ಷ ಮತ್ತು ಡಿಸೆಂಬರ್ 27 ರಂದು 15 ಲಕ್ಷ ಮಿಸ್ಡ್ ಕಾಲ್ಗಳು ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಬಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.