ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಲೈನ್ ಆಫ್ ಕಂಟ್ರೋಲ್ (Loc)ನಲ್ಲಿ ಪಾಕಿಸ್ಥಾನ ಸೇನೆಯು ನಡೆಸಿದ ಕದನ ವಿರಾಮ ಉಲ್ಲಂಘನೆಯು 2019ರಲ್ಲಿ ದ್ವಿಗುಣಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇದುವರೆಗೆ ಸುಮಾರು 3,200 ಕದನ ವಿರಾಮ ಉಲ್ಲಂಘನೆ ಘಟನೆಗಳು ವರದಿಯಾಗಿವೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಶುಕ್ರವಾರ ತಿಳಿಸಿವೆ.
“ಕೇರನ್ ಕಣಿವೆ, ಪೂಂಚ್, ಉರಿ, ಕೃಷ್ಣ ಘಾಟಿ ಮತ್ತು ಅಖ್ನೂರ್ ಪ್ರದೇಶಗಳಲ್ಲಿ ಪಾಕಿಸ್ಥಾನ ಸೇನೆಯು ನಿರಂತರವಾಗಿ ಗುಂಡು ಹಾರಿಸುತ್ತಿದೆ” ಎಂದು ಸಚಿವಾಲಯದ ಮೂಲವೊಂದು ತಿಳಿಸಿದೆ.
2019 ರಲ್ಲಿ, ನಿಯಂತ್ರಣ ರೇಖೆಯಾದ್ಯಂತ ಒಟ್ಟು 3,200 ಕದನ ವಿರಾಮ ಉಲ್ಲಂಘನೆಯ ಘಟನೆಗಳು ನಡೆದಿವೆ. 2018 ರಲ್ಲಿ 1,629 ಘಟನೆಗಳು ಸಂಭವಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅದು ಸುಮಾರು ಎರಡು ಪಟ್ಟು ಹೆಚ್ಚಾಗಿದೆ.
ಈ ವರ್ಷ ಡಿಸೆಂಬರ್ನಲ್ಲಿ ಇದುವರೆಗೆ 329 ಕದನ ವಿರಾಮ ಉಲ್ಲಂಘನೆ ವರದಿಯಾಗಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ ವರದಿಯಾಗಿದ್ದು 175 ಪ್ರಕರಣಗಳು. ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ, ಚಳಿಗಾಲದಲ್ಲಿ ಎಲ್ಒಸಿಯಲ್ಲಿ ಕದನ ವಿರಾಮ ಉಲ್ಲಂಘನೆ ತೀರಾ ಕಡಿಮೆ ಆದರೆ ಈ ವರ್ಷ ಅದು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ, ಪಾಕಿಸ್ಥಾನವು ಕದನ ವಿರಾಮ ಉಲ್ಲಂಘನೆಯನ್ನು ಹೆಚ್ಚಿಸಿದೆ. ವಿಧಿ ರದ್ದುಗೊಂಡ ಆಗಸ್ಟ್ನಲ್ಲಿ ಒಟ್ಟು 307 ಘಟನೆಗಳು ವರದಿಯಾಗಿದ್ದರೆ, ಸೆಪ್ಟೆಂಬರ್ನಲ್ಲಿ 292, ಅಕ್ಟೋಬರ್ನಲ್ಲಿ 351 ಮತ್ತು ನವೆಂಬರ್ನಲ್ಲಿ 304 ಘಟನೆಗಳು ವರದಿಯಾಗಿವೆ.
ಇದಕ್ಕೂ ಮುನ್ನ ಜನವರಿಯಲ್ಲಿ 203, ಫೆಬ್ರವರಿಯಲ್ಲಿ 215, ಮಾರ್ಚ್ನಲ್ಲಿ 267, ಏಪ್ರಿಲ್ನಲ್ಲಿ 234, ಮೇ 22, ಜೂನ್ನಲ್ಲಿ 181 ಮತ್ತು ಜುಲೈನಲ್ಲಿ 296 ಕದನ ವಿರಾಮ ಉಲ್ಲಂಘನೆಯ ಘಟನೆಗಳು ವರದಿಯಾಗಿವೆ.
2017 ಕ್ಕೆ ಹೋಲಿಸಿದರೆ, 2019 ರಲ್ಲಿ ಕದನ ವಿರಾಮ ಉಲ್ಲಂಘನೆಯ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. 2017 ರಲ್ಲಿ ಒಟ್ಟು 860 ಘಟನೆಗಳು ವರದಿಯಾಗಿದ್ದು, 2016 ರಲ್ಲಿ ಕೇವಲ 228 ಘಟನೆಗಳು ದಾಖಲಾಗಿವೆ.
ಪಾಕಿಸ್ಥಾನ ಸೇನೆಯು ತಮ್ಮ ಬಾರ್ಡರ್ ಆಕ್ಷನ್ ತಂಡಗಳನ್ನು (ಬಿಎಟಿ) ಕಳುಹಿಸುವ ಮೂಲಕ ಭಾರತೀಯ ಪೋಸ್ಟ್ಗಳ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಪಾಕಿಸ್ಥಾನ ಸೇನೆಯು ಕದನ ವಿರಾಮ ಉಲ್ಲಂಘನೆಯ ಮೂಲಕ ಗಡಿಯುದ್ದಕ್ಕೂ ಭಯೋತ್ಪಾದಕರನ್ನು ಒಳನುಸುಳಿಸಲು ಹತಾಶ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಭಾರತೀಯ ಸೇನೆಯು ಅಂತಹ ಅನೇಕ ಪ್ರಯತ್ನಗಳನ್ನು ದಿಟ್ವತನದಿಂದ ವಿಫಲಗೊಳಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.