ತಿರುವನಂತಪುರಂ: ಕೇರಳ ರಾಜ್ಯ ಸಚಿವ ಸಂಪುಟವು ಇಂದು ಇಸ್ರೋದ ಮಾಜಿ ವಿಜ್ಞಾನಿ ಎಸ್. ನಂಬಿಯಾರ್ ಅವರಿಗೆ 1.3 ಕೋಟಿ ರೂ. ಗಳ ಪರಿಹಾರವನ್ನು ನೀಡಲು ಅನುಮೋದನೆಯನ್ನು ನೀಡಿದೆ. ನ್ಯಾಯಾಂಗದ ಆದೇಶಕ್ಕೆ ತಲೆ ಬಾಗಿ ಈ ನಿರ್ಧಾರವನ್ನು ಕೈಗೊಂಡಿದೆ.
1994ರಲ್ಲಿ ನಾರಾಯಣ್ ಅವರ ವಿರುದ್ಧ ರಕ್ಷಣೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಮಾಲ್ಡೀವ್ಸ್ ಗುಪ್ತಚರ ಅಧಿಕಾರಿಗಳಿಗೆ ಸೋರಿಕೆ ಮಾಡಿದ ಆರೋಪವನ್ನು ಹೊರಿಸಲಾಗಿತ್ತು. 50 ದಿನಗಳ ಬಂಧನದ ಸಮಯದಲ್ಲಿ ತನ್ನನ್ನು ತೀವ್ರ ಸ್ವರೂಪದಲ್ಲಿ ಕಿರುಕುಳಕ್ಕೆ ಒಳಪಡಿಸಲಾಯಿತು, ಸುಳ್ಳು ಹೇಳಿಕೆ ನೀಡುವಂತೆ ಪೀಡಿಸಲಾಯಿತು ಎಂದು ಅವರು ಆರೋಪಿಸಿದ್ದರು.
ಬಳಿಕ ನಡೆದ ಸಿಬಿಐ ತನಿಖೆಯಲ್ಲಿ ನಂಬಿಯಾರ್ ಅವರು ಯಾವುದೇ ಅಪರಾಧವನ್ನು ಎಸಗಿಲ್ಲ ಎಂಬುದು ಸಾಬೀತಾಗಿತ್ತು. ಅವರನ್ನು ಅನಗತ್ಯವಾಗಿ ಬಂಧಿಸಲಾಯಿತು, ಕಿರುಕುಳ ನೀಡಲಾಯಿತು, ಮಾನಸಿಕವಾಗಿ ಹಿಂಸಿಸಲಾಯಿತು ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಅಲ್ಲದೇ ಅವರಿಗೆ ಪರಿಹಾರವನ್ನು ನೀಡುವಂತೆ ಕೇರಳ ಸರ್ಕಾರಕ್ಕೆ ಆದೇಶಿಸಿತ್ತು.
ಈ ವರ್ಷ ನಂಬಿಯಾರ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. ತಾನು ನೀಡಿದ ಕೊಡುಗೆಗಳು ಕೊನೆಗೂ ಪುರಸ್ಕರಿಸಲ್ಪಟ್ಟಿತ್ತಲ್ಲ ಎಂಬ ಹೆಮ್ಮೆಯಲ್ಲಿ ಅವರಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ನಂಬಿಯಾರ್ ಅವರನ್ನು ಹಿಂಸಿಸಿತ್ತು ಎಂದು ಪ್ರಧಾನಿ ಮೋದಿ ಅವರು ಆರೋಪಿಸಿದ್ದರು.
ಬಂಧನದ ಸಮಯದಲ್ಲಿ, ನಾರಾಯಣನ್ ಇಸ್ರೋದಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಮತ್ತು ಕ್ರಯೋಜೆನಿಕ್ಸ್ ವಿಭಾಗದ ಉಸ್ತುವಾರಿ ವಹಿಸಿದ್ದರು. 70 ರ ದಶಕದ ಆರಂಭದಲ್ಲಿ ಭಾರತ ಇನ್ನೂ ಘನ ಮೋಟರ್ಗಳಲ್ಲಿ ಕೆಲಸ ಮಾಡುತ್ತಿದ್ದಾಗ ದ್ರವ ಇಂಧನ ರಾಕೆಟ್ ತಂತ್ರಜ್ಞಾನವನ್ನು ಪರಿಚಯಿಸಿದವರು ನಾರಾಯಣನ್. ಅಲ್ಲದೇ, ವಿಕಾಸ್ ಎಂಜಿನ್ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು, ಇದನ್ನು ಭಾರತದ ಮೊದಲ ಪಿಎಸ್ಎಲ್ವಿ ಉಡಾವಣೆಗೆ ಬಳಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.