ಭುವನೇಶ್ವರ: ಕಾಂಗ್ರೆಸ್ ಪಕ್ಷ ದೇಶದಲ್ಲಿ ಹಿಂಸೆ ಸೃಷ್ಟಿಸುತ್ತಿದೆ ಎಂಬ ಆರೋಪಗಳಿಗೆ ಇನ್ನಷ್ಟು ಇಂಬು ಸಿಕ್ಕಿದೆ. ಒರಿಸ್ಸಾದ ಕಾಂಗ್ರೆಸ್ ಮುಖಂಡರೊಬ್ಬರು ಫೋನಿನಲ್ಲಿ ಹಿಂಸಾಚಾರವನ್ನು ಭುಗಿಲೆಬ್ಬಿಸುವಂತೆ ಹೇಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಆಗಿದೆ.
“ಪೆಟ್ರೋಲ್ ಅನ್ನು ತಂದಿಟ್ಟುಕೊಳ್ಳಿ. ಆರ್ಡರ್ ಬಂದ ಕೂಡಲೇ ಬೆಂಕಿ ಹಚ್ಚಿ. ಮತ್ತೆ ಏನಾಗುತ್ತೋ ಕಾದು ನೋಡಿ” ಎಂದು ಕಾಂಗ್ರೆಸ್ ನಾಯಕ ಪ್ರದೀಪ್ ಮಜ್ಹಿ ಅವರು ಪ್ರತಿಭಟನಾಕಾರರಿಗೆ ಹೇಳುತ್ತಿರುವ ಮಾತು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವರದಿಗಳ ಪ್ರಕಾರ, ಡಿಸೆಂಬರ್ 14 ರಂದು ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಆರೋಪದ ವಿರುದ್ಧ ಪ್ರತಿಭಟಿಸಲು ನಬರಂಗ್ಪುರದಲ್ಲಿ ಕಾಂಗ್ರೆಸ್ ಗುರುವಾರ ಕರೆ ಮಾಡಿದ ಬಂದ್ ಸಂದರ್ಭದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಈ ವೇಳೆ ನಗರದಾದ್ಯಂತ ಅಂಗಡಿಗಳನ್ನು ಮುಚ್ಚಲಾಗಿತ್ತು.
ನಾನು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದೇನೆ. ಹೀಗಾಗಿ ಬೆಂಕಿ ಹಚ್ಚಲು ಜನರಿಗೆ ಕರೆ ನೀಡಿದೆ ಎಂದು ಸ್ವತಂ ಈ ನಾಯಕ ಹೇಳಿಕೊಂಡಿದ್ದಾನೆ. ಒರಿಸ್ಸಾದ ಬಿಜೆಡಿ ಸರ್ಕಾರದಡಿಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ ಎಂದು ಈತ ಹೇಳಿದ್ದಾನೆ.
“ನಮ್ಮನ್ನು ಕಾನೂನು ಕೈಗೆತ್ತಿಕೊಳ್ಳುವಂತೆ ಸರ್ಕಾರ ಪ್ರೇರೇಪಿಸುತ್ತಿದೆ. ನ್ಯಾಯವನ್ನು ಖಾತ್ರಿಪಡಿಸಿಕೊಳ್ಳಲು ಗಾಂಧಿವಾದಿ ತತ್ವಗಳು ಇನ್ನು ಮುಂದೆ ನಮಗೆ ಸಹಾಯ ಮಾಡುವುದಿಲ್ಲ, ಈ ಕಾರಣ, ಸುಭಾಷ್ ಚಂದ್ರ ಬೋಸ್ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ ”ಎಂದು ಈತ ಹೇಳಿದ್ದಾನೆ.
ಈತ ಆಡುತ್ತಿರುವ ಮಾತುಗಳು ಭಾರೀ ವೈರಲ್ ಆಗಿದೆ.
Keep petrol ready, set everything on fire: Watch Odisha Congress leader Pradeep Majhi asking protestors to go on rampage.
This explains why Sonia Gandhi, in her address following the CAA violence, never appealed for peace. Cadre confuse जो हो जाता। https://t.co/fUZAixZOhl
— Amit Malviya (@amitmalviya) December 27, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.