ನವದೆಹಲಿ: ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗೆ ನಾಂದಿ ಹಾಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ 2019ರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಝೀ ನ್ಯೂಸ್ ಅಭಿಯಾನವನ್ನು ನಡೆಸಿತ್ತು. ಕಾಯ್ದೆಯ ಬಗ್ಗೆ ಅರಿವು ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿತ್ತು. ಈ ಅಭಿಯಾನಕ್ಕೆ 87 ಲಕ್ಷಕ್ಕೂ ಹೆಚ್ಚು ಜನರು ಬೆಂಬಲವನ್ನು ನೀಡಿದ್ದಾರೆ.
ಹೊಸ ಕಾಯ್ದೆಯ ಸುತ್ತ ಹರಡಿರುವ ಸುಳ್ಳು ಮತ್ತು ವದಂತಿಗಳನ್ನು ಹೋಗಲಾಡಿಸಲು ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಡಿಸೆಂಬರ್ 21ರಂದು ಪ್ರಾರಂಭಿಸಲಾಗಿತ್ತು. ಅಲ್ಲಿಂದೀಚೆಗೆ, ಈ ಅಭಿಯಾನಕ್ಕೆ 87 ಲಕ್ಷಕ್ಕೂ ಹೆಚ್ಚು ಜನರು ಸ್ಪಂದನೆ ನೀಡಿದ್ದಾರೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗೆ ತಮ್ಮ ಬೆಂಬಲ ಇದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಡಿಸೆಂಬರ್ 26ರವರೆಗೆ ಅಭಿಯಾನ ಮುಂದುವರೆದಿತ್ತು.
ಅಪಾರ ಸಾರ್ವಜನಿಕ ಬೆಂಬಲದಿಂದಾಗಿ, ಈ ಅಭಿಯಾನವು ದೇಶದ ಅತಿದೊಡ್ಡ ಡಿಜಿಟಲ್ ಉಪಕ್ರಮವಾಗಿ ಹೊರಹೊಮ್ಮಿದೆ.
ತನ್ನ ಅಭಿಯಾನದ ಮೂಲಕ ಝೀ ನ್ಯೂಸ್ ಮಿಸ್ಡ್ ಕಾಲ್ ಮೂಲಕ ಜನರ ಬೆಂಬಲವನ್ನು ಕೋರಿತ್ತು. ನೀವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸುವವರಾಗಿದ್ದರೆ, ಟೋಲ್-ಫ್ರೀ ಸಂಖ್ಯೆಗಳಾದ 7836800500 ಮತ್ತು 7834998998 ಗೆ ಮಿಸ್ಡ್ ಕಾಲ್ ನೀಡಿ ಎಂದು ಕರೆ ನೀಡಿತ್ತು. ಈ ಸಂಖ್ಯೆಗಳಿಗೆ ಮಿಸ್ಡ್ ಕಾಲ್ ನೀಡಿದರೆ ಈ ಕಾಯಿದೆಯನ್ನು ಬೆಂಬಲಿಸುತ್ತಿದ್ದಾರೆ ಎಂದರ್ಥ.
ಈ ಕರೆಗೆ ಓಗೊಟ್ಟು ಸುಮಾರು 87 ಲಕ್ಷ ಜನರು ಮಿಸ್ಡ್ ಕಾಲ್ ನೀಡಿದ್ದಾರೆ. ಈ ಮೂಲಕ ಕಾಯ್ದೆಯನ್ನು ಬೆಂಬಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.