ನವದೆಹಲಿ: ಇರಾನಿನ ಪ್ರಮುಖ ಬಂದರು ಆಗಿರುವ ಚಬಹಾರ್ ಬಂದರಿನ ಅಭಿವೃದ್ಧಿಯನ್ನು ವೇಗಗೊಳಿಸಲು ಟೆಹ್ರಾನ್ ಮತ್ತು ದೆಹಲಿ ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಇರಾನ್ ಭೇಟಿಯ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.
ಚಬಹಾರ್ ಬಂದರನ್ನು ಭಾರತ, ಇರಾನ್ ಮತ್ತು ಅಫ್ಘಾನಿಸ್ಥಾನ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿದೆ. ಇದು ಹಿಂದೂ ಮಹಾಸಾಗರದಲ್ಲಿ ಪಾಕಿಸ್ಥಾನ ಗಡಿಯಿಂದ ಪಶ್ಚಿಮಕ್ಕೆ 100 ಕಿಲೋಮೀಟರ್ (62 ಮೈಲಿ) ದೂರದಲ್ಲಿದೆ. ಅಮೆರಿಕಾ ನಿರ್ಬಂಧತಾ ಬಳಿಕ ಈ ಬಂದರಿನ ಅಭಿವೃದ್ಧಿ ಕಾರ್ಯಕ್ಕೆ ಅಡೆತಡೆ ಸೃಷ್ಟಿಯಾಗಿತ್ತು.
ಟ್ವಿಟ್ ಮಾಡಿರುವ ಜೈ ಶಂಕರ್ ಅವರು, “ಬಹಳ ಫಲದಾಯಕ ಭಾರತ-ಇರಾನ್ ಜಂಟಿ ಆಯೋಗದ ಸಭೆಯನ್ನು ಮುಕ್ತಾಯಗೊಳಿಸಿದೆ” ಎಂದು ಹೇಳಿದ್ದರು.
“ನಮ್ಮ ಸಹಕಾರದ ಸಂಪೂರ್ಣ ಆಯಾಮವನ್ನು ಪರಿಶೀಲನೆ ನಡೆಸಿದ್ದೇನೆ. ನಮ್ಮ ಚಬಹಾರ್ ಯೋಜನೆಯನ್ನು ವೇಗಗೊಳಿಸಲು ನಾವು ಪರಸ್ಪರ ಒಪ್ಪಿಕೊಂಡಿದ್ದೇವೆ” ಎಂದು ಅವರು ಇರಾನಿನ ರಾಜಧಾನಿಗೆ ಎರಡು ದಿನಗಳ ಭೇಟಿಯನ್ನು ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ.
ಈ ಯೋಜನೆಯು ಈ ಪ್ರದೇಶದ ವ್ಯಾಪಾರವನ್ನು ವೃದ್ಧಿಸಲು ಅತ್ಯಂತ ಸಹಕಾರಿ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಜೈಶಂಕರ್ ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
“ಚಬಹಾರ್-ಜಹೇದಾನ್ ರೈಲ್ವೆಯನ್ನು ಪೂರ್ಣಗೊಳಿಸುವುದು ಮತ್ತು ಅದನ್ನು ಇರಾನ್ನ ರಾಷ್ಟ್ರೀಯ ರೈಲ್ವೆಗೆ ಸಂಪರ್ಕಿಸುವುದರಿಂದ ಚಬಹಾರ್ ಬಂದರಿನ ಸ್ಥಾನವನ್ನು ಹೆಚ್ಚಿಸಬಹುದು, ಪ್ರಾದೇಶಿಕ ವಾಣಿಜ್ಯದಲ್ಲಿ ಕ್ರಾಂತಿಯುಂಟು ಮಾಡಬಹುದು ಮತ್ತು ಅಗ್ಗದ ಮತ್ತು ಕಡಿಮೆ ಮಾರ್ಗದಲ್ಲಿ ಸರಕುಗಳನ್ನು ಸಾಗಿಸಲು ಸಹಾಯ ಮಾಡಬಹುದು” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.