ನವದೆಹಲಿ: ಬಂಧನ ಕೇಂದ್ರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ನ ಮುಖಂಡ ರಾಹುಲ್ ಗಾಂಧಿಯವರು ನೀಡಿದ ಹೇಳಿಕೆಗೆ ಬಿಜೆಪಿ ತೀಕ್ಷ್ಣ ತಿರುಗೇಟನ್ನು ನೀಡಿದೆ. ಅಕ್ರಮ ವಲಸಿಗರಿಗಾಗಿ ಬಂಧನ ಕೇಂದ್ರಗಳನ್ನು ಅಸ್ಸಾಂನಲ್ಲಿ ಕಾಂಗ್ರೆಸ್ ನಿರ್ಮಾಣ ಮಾಡಿತ್ತು ಎಂಬುದನ್ನು ದೃಢಪಡಿಸುವ ಪತ್ರಿಕಾ ಪ್ರಕಟನೆಯನ್ನು ಬಿಜೆಪಿ ಸೋಶಿಯಲ್ ಮೀಡಿಯಾ ವಕ್ತಾರ ಅಮಿತ್ ಮಾಳವಿಯಾ ಅವರು ಟ್ವೀಟ್ ಮಾಡಿದ್ದಾರೆ.
2011ರಲ್ಲಿ ಪ್ರೆಸ್ ಇನ್ಫಾರ್ಮೇಶನ್ ಬ್ಯುರೋ ಪ್ರಕಟಿಸಿರುವ ಪ್ರಕಟಣೆಯನ್ನು ಅಮಿತ್ ಮಾಳವಿಯಾ ಅವರು ಟ್ವೀಟ್ ಮಾಡಿದ್ದು, ಇದರಲ್ಲಿ ಅಸ್ಸಾಂನಲ್ಲಿ 362 ಅಕ್ರಮ ವಲಸಿಗರನ್ನು ಬಂಧನ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂಬ ಸುದ್ದಿ ಇದೆ. ಮಾತ್ರವಲ್ಲದೇ, ಗೋಲಾಪುರ, ಕೊಕ್ರಜರ್ ಮತ್ತು ಸಿಲ್ಚರ್ನಲ್ಲಿ ಬಂಧನ ಗೃಹಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಇದು ಹೇಳುತ್ತದೆ.
“ರಾಹುಲ್ ಗಾಂಧಿ ಅವರೇ, ಅಸ್ಸಾಂನ 362 ಅಕ್ರಮ ವಲಸಿಗರನ್ನು ‘ಬಂಧನ ಶಿಬಿರಗಳಿಗೆ’ ಕಳುಹಿಸಲಾಗಿದೆ ಎಂದು ಕಾಂಗ್ರೆಸ್ ಸರ್ಕಾರ ಹೊರಡಿಸಿದ 2011 ರ ಈ ಪತ್ರಿಕಾ ಪ್ರಕಟಣೆಯನ್ನು ನೋಡಿದೆ. ಭಾರತವು ನಿಮ್ಮನ್ನು ಪದೇ ಪದೇ ತಿರಸ್ಕರಿಸಿದ್ದರಿಂದ, ನೀವು ಅದನ್ನು ದ್ವೇಷ ಮತ್ತು ಭಯದ ರಾಜಕೀಯದಿಂದ ನಾಶಮಾಡಲು ಹೊರಟಿದ್ದೀರಾ? ” ಎಂದು ಮಾಳವಿಯಾ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ.
Rahul Gandhi
Seen this press release from 2011 issued by the Congress govt claiming to have sent 362 illegal migrants to ‘detention camps’ in Assam.
Just because India has rejected you repeatedly, are you hell bent on destroying it with your politics of hate and fear mongering? pic.twitter.com/wc9HPWjBlS
— Amit Malviya (@amitmalviya) December 26, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.