ನವದೆಹಲಿ: ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರು ಬುಧವಾರ, ಭಾರತದಾದ್ಯಂತದ ಹಳ್ಳಿಗಳಿಗೆ ಭಾರತ್ ನೆಟ್ ಮೂಲಕ ನೀಡುತ್ತಿರುವ ವೈಫೈ ಸೇವೆಗಳನ್ನು 2020 ಮಾರ್ಚ್ವರೆಗೆ ಉಚಿತವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.
“ನಾವು ಈಗಾಗಲೇ 1.3 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಭಾರತ್ ನೆಟ್ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಮೂಲಕ ಸಂಪರ್ಕಿಸಿದ್ದೇವೆ. ಮುಂದೆ 2.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಇದನ್ನು ವಿಸ್ತರಣೆ ಮಾಡುವುದು ನಮ್ಮ ಗುರಿ. ಭಾರತ್ ನೆಟ್ ಸೇವೆಗಳ ಬಳಕೆಯನ್ನು ಉತ್ತೇಜಿಸಲು, ನಾವು ಮಾರ್ಚ್ 2020 ರವರೆಗೆ ಭಾರತ್ ನೆಟ್ ಮೂಲಕ ಸಂಪರ್ಕ ಹೊಂದಿದ ಎಲ್ಲಾ ಹಳ್ಳಿಗಳಿಗೆ ವೈಫೈ ಅನ್ನು ಉಚಿತವಾಗಿ ನೀಡುತ್ತೇವೆ” ಎಂದು ಪ್ರಸಾದ್ ಹೇಳಿದ್ದಾರೆ.
ಪ್ರಸ್ತುತ, ಭಾರತ್ನೆಟ್ ಯೋಜನೆಯಡಿ ಸಂಪರ್ಕ ಹೊಂದಿದ 48,000 ಗ್ರಾಮಗಳಿಗೆ ವೈಫೈ ಪ್ರವೇಶವಿದೆ.
ಭಾರತ್ ನೆಟ್, ಭಾರತ್ ಬ್ರಾಡ್ ಬ್ಯಾಂಡ್ ನೆಟ್ವರ್ಕ್ ಲಿಮಿಟೆಡ್ ಎಂದೂ ಕರೆಯಲ್ಪಡುತ್ತದೆ, ಇದು ಟೆಲಿಕಾಂ ಮೂಲಸೌಕರ್ಯ ಪೂರೈಕೆದಾರ ಆಗಿದ್ದು, ಇದನ್ನು ದೂರಸಂಪರ್ಕ ಇಲಾಖೆಯಡಿ ಭಾರತ ಸರ್ಕಾರ ಸ್ಥಾಪಿಸಿದೆ.
ದೇಶದ ಎಲ್ಲಾ 250,000 ಗ್ರಾಮ ಪಂಚಾಯಿತಿಗಳಿಗೆ ಸೆಕೆಂಡಿಗೆ ಕನಿಷ್ಠ 100 ಮೆಗಾಬಿಟ್ (ಎಂಬಿಪಿಎಸ್) ಸಂಪರ್ಕವನ್ನು ಒದಗಿಸುವ ರಾಷ್ಟ್ರೀಯ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಸ್ಥಾಪನೆ, ನಿರ್ವಹಣೆ ಮತ್ತು ಕಾರ್ಯಾಚರಣೆಯ ಉದ್ದೇಶದಿಂದ ಭಾರತ್ನೆಟ್ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.