ನವದೆಹಲಿ: ಕೇಂದ್ರ ಸರ್ಕಾರವು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಅನ್ನು ಎಪ್ರಿಲ್ ತಿಂಗಳಿನಿಂದ ಆರಂಭಿಸಲಿದೆ. ಇದಕ್ಕೆ ಸಂಬಂಧಿಸಿದಂತೆಯೂ ಕೆಲವರು ಊಹಾಪೋಹಗಳನ್ನು ಹಬ್ಬಿಸಲು ಮುಂದಾಗಿದ್ದಾರೆ. ಆದರೆ ಗೃಹ ಸಚಿವ ಅಮಿತ್ ಶಾ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, “ಎನ್ಪಿಆರ್ ಮತ್ತು ಎನ್ಆರ್ಸಿ ನಡುವೆ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್)ನಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ಎನ್ಆರ್ಸಿಗೆ ಬಳಸಿಕೊಳ್ಳುವುದಿಲ್ಲ. ಎನ್ಪಿಆರ್ ಸಂಪೂರ್ಣ ವಿಭಿನ್ನ ಪ್ರಕ್ರಿಯೆ” ಎಂದಿದ್ದಾರೆ.
“ಎನ್ಪಿಆರ್ ಜನಸಂಖ್ಯೆಯ ನೋಂದಣಿ, ಎನ್ಆರ್ಸಿ ನಾಗರಿಕರ ನೋಂದಣಿ ಆಗಿದೆ. ಇದೆರಡರ ನಡುವೆ ಯಾವುದೇ ಸಂಬಂಧವಿಲ್ಲ ಮತ್ತು ಇವೆರಡೂ ವಿಭಿನ್ನ ಪ್ರಕ್ರಿಯೆಗಳಾಗಿವೆ” ಎಂದು ಅಮಿತ್ ಶಾ ಸಂದರ್ಶನದಲ್ಲಿ ಹೇಳಿದ್ದಾರೆ. “ಎನ್ಪಿಆರ್ ಡೇಟಾವನ್ನು ಎನ್ಆರ್ಸಿಗೆ ಬಳಸಲಾಗುವುದಿಲ್ಲ, ಈ ಬಗ್ಗೆ ಯಾವುದೇ ಭಯ ಇರಬಾರದು ಯಾವುದೇ ನಾಗರಿಕರಿಗೆ ವಿಶೇಷವಾಗಿ ಅಲ್ಪಸಂಖ್ಯಾತರಿಗೆ ಈ ಬಗ್ಗೆ ಭಯ ಇರಬಾರದು” ಎಂದಿದ್ದಾರೆ.
ಎನ್ಪಿಆರ್ನ ಎಲ್ಲಾ ಪ್ರಕ್ರಿಯೆಗಳನ್ನು ಕಾಂಗ್ರೆಸ್ ತಂದ ಕಾನೂನಿನಡಿಯೇ ನಡೆಸಲಾಗುತ್ತದೆ. ಕಾಂಗ್ರೆಸ್ ಈ ಪ್ರಕ್ರಿಯೆಯನ್ನು 2010-2011ರಲ್ಲಿ ನಡೆಸಿತ್ತು. ನಾವು ಕೂಡ ಅದೇ ಪ್ರಕ್ರಿಯೆಯನ್ನು ನಡೆಸಲಿದ್ದೇವೆ.
“ಸರ್ಕಾರಿ ಯೋಜನೆಗಳ ರಚನೆಗೆ ಎನ್ಪಿಆರ್ ಆಧಾರವಾಗಿದೆ. ಮನೆಯ ವಿಸ್ತೀರ್ಣ, ಎಷ್ಟು ದನಗಳು ಇವೆ ಇತ್ಯಾದಿ ಕೆಲವು ವಿಷಯಗಳು ಎನ್ಪಿಆರ್ನಲ್ಲಿ ಹೊಸದಾಗಿವೆ” ಎಂದು ಅವರು ಹೇಳಿದ್ದಾರೆ.
ಎನ್ ಆರ್ ಸಿಯ ಬಗ್ಗೆ ಜನರು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಈ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.