ನವದೆಹಲಿ: ಭವಿಷ್ಯದ ಯುದ್ಧಗಳನ್ನು ಭಾರತೀಯ ವ್ಯವಸ್ಥೆಗಳನ್ನು ಬಳಸಿಯೇ ನಾವು ಗೆಲ್ಲುತ್ತೇವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೋಮವಾರ ಹೇಳಿದ್ದಾರೆ. ಈ ಮೂಲಕ ದೇಶೀಕರಣವನ್ನು ಅವರು ಬಲವಾಗಿ ಪ್ರತಿಪಾದಿಸಿದ್ದಾರೆ. ಸಂಪರ್ಕ ರಹಿತ ಯುದ್ಧದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಜನರಲ್ ರಾವತ್, “ಭವಿಷ್ಯದ ಯುದ್ಧಗಳಲ್ಲಿ ಎದುರಾಳಿಯ ಮೇಲೆ ಪ್ರಭಾವ ಬೀರಲು ಸಂಪರ್ಕೇತರ ಯುದ್ಧವು ನಮಗೆ ಸಹಾಯ ಮಾಡುತ್ತದೆ. ಕ್ವಾಂಟಮ್ ತಂತ್ರಜ್ಞಾನಗಳು, ಸೈಬರ್, ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆ ಪರಿಸರ ವ್ಯವಸ್ಥೆಯನ್ನು ರಕ್ಷಣೆಗಾಗಿ ನಮ್ಮ ಸುಪರ್ದಿಯಲ್ಲಿ ಇಡಬೇಕಾಗುತ್ತದೆ” ಎಂದಿದ್ದಾರೆ.
ದೇಶೀಯ ಭಾರತೀಯ ಕೈಗಾರಿಕೆಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸುವಲ್ಲಿ ನಾವು ಸಫಲರಾಗಲಿದ್ದೇವೆ ಎಂಬ ಭರವಸೆ ನನಗಿದೆ, ಭವಿಷ್ಯದ ಯುದ್ಧಗಳನ್ನು ದೇಶೀಯ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಬಳಸಿಯೇ ನಾವು ಗೆಲ್ಲುದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ ಎಂದಿದ್ದಾರೆ.
“ಮಿಲಿಟರಿಯು ಸ್ಥಗಿತಗೊಂಡ ವ್ಯವಸ್ಥೆಯನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳುತ್ತಿಲ್ಲ. ನಮ್ಮ ಬಾಗಿಲುಗಳು ತೆರೆದಿವೆ. ಸಂಶೋಧನೆ, ಅಭಿವೃದ್ಧಿಗೆ ನಾವು ಮುಕ್ತರಾಗಿದ್ದೇವೆ” ಎಂದಿದ್ದಾರೆ.
“ಕೈಗಾರಿಕೆಗಳು ಆರ್ಡರ್ಗಳಿಗಾಗಿ ತುದಿಗಾಲಲ್ಲಿ ನಿಂತು ಕಾಯುತ್ತಿವೆ. ಇವುಗಳಿಗೆ ಆರ್ಡರ್ ನೀಡುವ ಆಶಯ ನಮಗೂ ಇದೆ. ನಮ್ಮ ವ್ಯವಸ್ಥೆಗಳ ಬಗ್ಗೆ ನಾವು ಹೆಚ್ಚು ಮುಕ್ತರಾಗಿದ್ದೇವೆ. ಬಹು ಬಳಕೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಈ ಕಾಲಘಟ್ಟದ ಅವಶ್ಯಕತೆಯಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.