ನಾಸಿಕ್: ನಗರಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಎದುರಿಸಲು ವಿಶಿಷ್ಟ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಪ್ರಯಾಣಿಕರಿಗೆ ಶುದ್ಧ ಗಾಳಿಯನ್ನು ಒದಗಿಸಲು ನಾಸಿಕ್ ರೈಲ್ವೆ ನಿಲ್ದಾಣದಲ್ಲಿ ”ಆಕ್ಸಿಜನ್ ಪಾರ್ಲರ್” ತೆರೆಯಲಾಗಿದೆ. ಭಾರತೀಯ ರೈಲ್ವೆಯ ಸಹಯೋಗದೊಂದಿಗೆ ಏರೋ ಗಾರ್ಡ್ನ ಪ್ರಯತ್ನದ ಭಾಗವಾಗಿ ಈ ಉಪಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ.
ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಶಿಫಾರಸಿನ ಆಧಾರದ ಮೇಲೆ ಆಕ್ಸಿಜನ್ ಪಾರ್ಲರ್ ಪರಿಕಲ್ಪನೆ ಆಧರಿಸಿದೆ ಎಂದು ಏರೋ ಗಾರ್ಡ್ನ ಸಹ ಸಂಸ್ಥಾಪಕ ಅಮಿತ್ ಅಮೃತ್ಕರ್ ಹೇಳಿದ್ದಾರೆ.
“1989 ರಲ್ಲಿ, ನಾಸಾ ಒಂದು ಅಧ್ಯಯನವನ್ನು ನಡೆಸಿತು, ಅದರಲ್ಲಿ ಅವರು ಗಾಳಿಯಿಂದ ಐದು ಹಾನಿಕಾರಕ ಮಾಲಿನ್ಯಕಾರಕಗಳನ್ನು ಉತ್ತಮವಾಗಿ ಹೀರಿಕೊಳ್ಳುವ ಕೆಲವು ಸಸ್ಯಗಳನ್ನು ಗುರುತಿಸಿದ್ದಾರೆ. ನಾವು ಆ ಸಸ್ಯಗಳಲ್ಲಿ ಬಹುತೇಕವನ್ನು ಬೆಳೆಸಿದ್ದೇವೆ ಎಂದು ಅಮೃತಕರ್ ತಿಳಿಸಿದ್ದಾರೆ.
ಈ ಸಸ್ಯಗಳು ತಮ್ಮ ಸುತ್ತಲಿನ 10X10 ಅಡಿ ಪ್ರದೇಶದಲ್ಲಿ ಗಾಳಿಯನ್ನು ಸ್ವಚ್ಛಗೊಳಿಸಬಲ್ಲವು ಎಂದು ಅವರು ಹೇಳಿದ್ದಾರೆ.
“ಇಲ್ಲಿ ಸುಮಾರು 1500 ಸಸ್ಯಗಳಿವೆ, ಆದ್ದರಿಂದ, ಈ ಸಸ್ಯಗಳು ರೈಲ್ವೆ ನಿಲ್ದಾಣದಲ್ಲಿ ಗಾಳಿಯಲ್ಲಿನ ಮಾಲಿನ್ಯವನ್ನು ನೇರವಾಗಿ ಮತ್ತು ಪರಿಣಾಮಕಾರಿಯಾಗಿ ತಗ್ಗಿಸಬಲ್ಲದು ಮತ್ತು ಜನರಿಗೆ ಶುದ್ಧ ಗಾಳಿಯನ್ನು ಉಸಿರಾಡಲು ಅನುವು ಮಾಡಿಕೊಡುತ್ತದೆ” ಎಂದು ಅವರು ಹೇಳಿದರು.
ಈ ಉಪಕ್ರಮವನ್ನು ಪ್ರತಿ ರೈಲ್ವೆ ನಿಲ್ದಾಣದ ಜೊತೆಗೆ ಪ್ರತಿ ಮನೆಗೂ ವಿಸ್ತರಿಸುವುದು ನಮ್ಮ ಉದ್ದೇಶವಾಗಿದೆ ಎಂದು ಅಮೃತಕರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.