ಕಾರವಾರ: ಪ್ರಸ್ತುತ ನಡೆಯುತ್ತಿರುವ ನೌಕಾ ಸಪ್ತಾಹ 2019 ಆಚರಣೆಯ ಅಂಗವಾಗಿ ಭಾರತೀಯ ನೌಕಾ ಹಡಗು ‘ವಿಕ್ರಮಾದಿತ್ಯ’ವನ್ನು ಭಾನುವಾರ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿತ್ತು.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ನೌಕಾ ಸೇನೆಯು, “ನೌಕಾ ಸಪ್ತಾಹ 2019 ಆಚರಣೆಯ ಅಂಗವಾಗಿ ಭಾರತೀಯ ನೌಕಾ ಹಡಗು ವಿಕ್ರಮಾದಿತ್ಯವು ಡಿಸೆಂಬರ್ 22 ರಂದು 9 ರಿಂದ ಸಂಜೆ 7 ಗಂಟೆವರೆಗೆ ಪ್ರವಾಸಿಗರಿಗೆ ಮುಕ್ತವಾಗಿತ್ತು. ಈ ಕಾರ್ಯಕ್ರಮವು ಎಲ್ಲ ವಯೋಮಾನದ 8,200 ಕ್ಕೂ ಹೆಚ್ಚು ಪ್ರವಾಸಿಗರನ್ನು ಮತ್ತು ಕಾರವಾರ ಸುತ್ತಲ ನಿವಾಸಿಗಳನ್ನು ಆಕರ್ಷಿಸಿತ್ತು” ಎಂದು ಹೇಳಿದೆ.
“ಜನರು ಕಾರವಾರದ ನೌಕಾ ನೆಲೆಯ ಮುಖ್ಯ ಗೇಟ್ ಮೂಲಕ ಪ್ರವೇಶಿಸಿದರು ಮತ್ತು ಐಎನ್ಎಸ್ ವಿಕ್ರಮಾದಿತ್ಯವನ್ನು ನೇವಲ್ ಶಿಪ್ ರಿಪೇರಿ ಯಾರ್ಡ್ ಮೂಲಕ ತಲುಪಿದರು. ಹಡಗಿನಲ್ಲಿ, ಜನರಿಗೆ ಹಡಗಿನ ಸಿಬ್ಬಂದಿಗಳು ಆನ್ಬೋರ್ಡ್ ಉಪಕರಣಗಳು, ವಿಮಾನವಾಹಕ ನೌಕೆ ಕಾರ್ಯಾಚರಣೆಗಳ ಬಗ್ಗೆ ವಿವರಿಸಿದರು. ಭಾರತೀಯ ನೌಕಾಪಡೆ ಮತ್ತು ಸಮುದ್ರದಲ್ಲಿನ ಜೀವನದ ಬಗ್ಗೆ ವಿವರಿಸಿದರು “ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
“ಏಕೈಕ ಏರ್ಕ್ರಾಫ್ಟ್ ಕ್ಯಾರಿಯರ್ ಅನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ ಹಿನ್ನಲೆಯಲ್ಲಿ ಭೇಟಿ ನೀಡುವ ಸಮಯವನ್ನು ವಿಸ್ತರಿಸಲಾಗಿತ್ತು. ಮಕ್ಕಳು ಮತ್ತು ವಿದ್ಯಾರ್ಥಿಗಳ ವ್ಯಾಪಕ ಭಾಗವಹಿಸುವಿಕೆಯು ಸಶಸ್ತ್ರ ಪಡೆಗಳ ವಿಶೇಷವಾಗಿ ಭಾರತೀಯ ನೌಕಾಪಡೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅವಕಾಶವಾಗಿ ಕಾರ್ಯನಿರ್ವಹಿಸಿತು” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.