ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಆತ ನನ್ನ ದೇಶದ ಗಡಿಯನ್ನು ಕಾಪಾಡಿದ. ನನ್ನ ದೇಶದ ಯುದ್ಧದಲ್ಲಿ ಆತ ಭಾಗಿಯಾದ. ನಿರಾಶ್ರಿತರಾಗಿ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರೊಂದಿಗೆ ಹಿಮಾಲಯ ಪ್ರದೇಶದಿಂದ 3 ತಿಂಗಳುಗಳ ಕಾಲ ಕ್ರಮಿಸಿ ಭಾರತಕ್ಕೆ ಬಂದ ವೇಳೆ ಲಾಬ್ಸಂಗ್ ಸಿಂಗೆ ಅವರ ವಯಸ್ಸು ಕೇವಲ 18 ಆಗಿತ್ತು. ಈಗ ಅವರಿಗೆ 74 ವರ್ಷ ವಯಸ್ಸು. ಅವರು ಟಿಬೆಟ್ನಲ್ಲಿನ ಸ್ವಯಂಪ್ರೇರಿತ ಸ್ವಾತಂತ್ರ್ಯ ಹೋರಾಟಗಾರ ಪಡೆಯ ಸದಸ್ಯರಾಗಿದ್ದರು. ಈ ಟಿಬೆಟಿಯನ್ ಗೆರಿಲ್ಲಾ ಪಡೆ ಚೀನಾದ ಆಡಳಿತದ ವಿರುದ್ಧ ಹೋರಾಡಿತ್ತು ಮತ್ತು ಮಾರ್ಚ್ 1959 ರಲ್ಲಿ ದಲೈಲಾಮಾ ಅವರು ಭಾರತಕ್ಕೆ ಪಲಾಯನ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು.
1964ರಲ್ಲಿ ಲಾಬ್ಸಂಗ್ ಸಿಂಗೆ ಅವರು ಸ್ಪೆಷಲ್ ಫ್ರಾಂಟಿಯರ್ ಫೋರ್ಸ್ ಅನ್ನು ಸೇರಿಕೊಂಡರು, ಈ ಪಡೆ ವಿಶೇಷ ಯುದ್ಧ ಕೌಶಲ್ಯಗಳಿಗೆ ಹೆಸರುವಾಸಿಯಾಗಿದೆ. 1971 ರಲ್ಲಿ ಬಾಂಗ್ಲಾದೇಶದ ವಿಮೋಚನಾ ಯುದ್ಧದಲ್ಲಿ ಹೋರಾಡಿದ ರೆಜಿಮೆಂಟ್ನ ಭಾಗವಾಗಿದ್ದ ಈ ಪಡೆಯು ಚಿತ್ತಗಾಂಗ್ ಬೆಟ್ಟದ ಪ್ರದೇಶಗಳನ್ನು ಪಾಕಿಸ್ಥಾನ ಸೇನೆಯ ಪ್ರಬಲ ಪಠಾಣ್ಗಳಿಂದ ವಿಮೋಚನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಉಳಿದಂತೆ ಸೆಂಗೆ ಸೇವೆಯು ಯಾವಾಗಲೂ ಇಂಡೋ ಟಿಬೆಟ್ ಗಡಿ ಪೋಸ್ಟ್ಗಳಿಗೆ ಮೀಸಲಾಗಿತ್ತು, ಇದು ಅವರಿಗೆ ಪ್ರತಿದಿನ ತನ್ನ ತಾಯಿನಾಡು ಟಿಬೆಟ್ ಅನ್ನು ಇನ್ನೊಂದು ಬದಿಯಿಂದ ನೋಡುವ ಅವಕಾಶವನ್ನು ಕಲ್ಪಿಸಿಕೊಟ್ಟಿತ್ತು.
ಲಾಬ್ಸಂಗ್ ಯುಎಸ್ ಸೈನ್ಯದ ಜಂಟಿ ವ್ಯಾಯಾಮದ ಭಾಗವಾಗಿದ್ದರು. ಅತ್ಯುತ್ತಮ ಪ್ಯಾರಾಟ್ರೂಪರ್ ಆಗಿರುವ ಲೋಬ್ಸಾಂಗ್ ಅವರು 95ಕ್ಕೂ ಹೆಚ್ಚು ಬಾರಿ ಪ್ಯಾರಾಟ್ರೂಪಿಂಗ್ ಮಾಡಿದ್ದಾರೆ ಎಂದು ಅವರೇ ಹೇಳುತ್ತಾರೆ. ಅಲ್ಲದೇ, ಅವರು ದಲೈಲಾಮಾ ಅವರ ಅಂಗರಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಈಗ ಒಬ್ಬಂಟಿಯಾಗಿರುವ ಲಾಬ್ಸಂಗ್ ಅವರು ಸ್ನೇಹಿತರೊಂದಿಗೆ ನಿರಾಶ್ರಿತರ ಶಿಬಿರದಲ್ಲಿ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ ಮತ್ತು ಹೆಚ್ಚಿನ ಸಮಯವನ್ನು ಪ್ರಾರ್ಥನೆ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಕಳೆಯುತ್ತಿದ್ದಾರೆ. “ಭಾರತವು ಟಿಬೆಟ್ಗೆ ಸಾಕಷ್ಟನ್ನು ನೀಡಿದೆ… .ಹಮ್ ಇಂಡಿಯಾ ಕೆ ಲಿಯೆ ಜಾನ್ ಭೀ ದೇಗಾ… (ನಾವು ಭಾರತಕ್ಕಾಗಿ ನಮ್ಮ ಜೀವವನ್ನೇ ನೀಡುತ್ತೇವೆ …)” ಎಂದು ಅವರು ಹೇಳುತ್ತಾರೆ.
ಲಾಬ್ಸಂಗ್ ಲಾ ಅವರೇ, ನಿಮ್ಮ ಶೌರ್ಯ ಮತ್ತು ನಿಮ್ಮ ಬದ್ಧತೆಗೆ ನಾವು ತಲೆ ಬಾಗಿ ನಮಸ್ಕರಿಸುತ್ತೇವೆ.
ಮೂಲ ಲೇಖನ: ಅಮೃತ್ ಜೋಶಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.