ಪ್ರ 1. ಭಾರತೀಯ ಮುಸ್ಲಿಮರು ಸಿಎಎ + ಎನ್ಆರ್ಸಿ ಬಗ್ಗೆ ಚಿಂತಿಸಬೇಕೇ?
ಉತ್ತರ: ಯಾವುದೇ ಧರ್ಮದ ಯಾವುದೇ ಭಾರತೀಯ ಪ್ರಜೆ ಸಿಎಎ ಅಥವಾ ಎನ್ಆರ್ಸಿ ಬಗ್ಗೆ ಚಿಂತಿಸಬೇಕಾಗಿಲ್ಲ.
ಪ್ರ 2. ಧಾರ್ಮಿಕ ಆಧಾರದ ಮೇಲೆ ಜನರನ್ನು ಎನ್ಆರ್ಸಿಯಿಂದ ಹೊರಗಿಡಲಾಗುತ್ತದೆಯೇ?
ಉತ್ತರ: ಇಲ್ಲ. ಎನ್ಆರ್ಸಿ ಧರ್ಮದ ಆಧಾರದ ಮೇಲೆ ನಡೆಯುವುದಿಲ್ಲ. ಎನ್ಆರ್ಸಿ ಅನುಷ್ಠಾನ ಧಾರ್ಮಿಕ ಆಧಾರದ ಮೇಲೆ ಇರಬಾರದು ಮತ್ತು ಇರುವುದಿಲ್ಲ ಕೂಡ. ನಿರ್ದಿಷ್ಟ ಧರ್ಮದ ಅನುಯಾಯಿಗಳು ಎಂದು ಯಾರನ್ನೂ ಇದರಿಂದ ಹೊರಗಿಡಲಾಗುವುದಿಲ್ಲ.
ಪ್ರ 3. ಪೌರತ್ವವನ್ನು ಹೇಗೆ ನಿರ್ಧರಿಸಲಾಗುತ್ತದೆ? ಅದು ಸರ್ಕಾರದ ಕೈಯಲ್ಲಿದೆಯೇ?
ಉತ್ತರ: 1955ರ ಪೌರತ್ವ ಕಾಯ್ದೆ ಪ್ರಕಾರ ರೂಪಿಸಲಾದ ಪೌರತ್ವ ನಿಯಮಗಳು 2009ರ ಅಡಿಯಲ್ಲಿ ಪೌರತ್ವವನ್ನು ನಿರ್ಧರಿಸಲಾಗುತ್ತದೆ. ಅವು ಸಾರ್ವಜನಿಕ ವಲಯದಲ್ಲಿವೆ. ಒಬ್ಬ ವ್ಯಕ್ತಿಯು ಭಾರತೀಯ ಪ್ರಜೆಯಾಗಲು ಐದು ಮಾರ್ಗಗಳಿವೆ: I. ಜನನದ ಮೂಲಕ ಪೌರತ್ವ, II. ವಂಶಾನುಕ್ರಮದಿಂದ ಪೌರತ್ವ, III. ನೋಂದಣಿ ಮೂಲಕ ಪೌರತ್ವ, IV. ನೈಸರ್ಗಿಕೀಕರಣದಿಂದ ಪೌರತ್ವ, V. ಪ್ರದೇಶವನ್ನು ಸೇರಿಸುವ ಮೂಲಕ ಪೌರತ್ವ
ಪ್ರ 4. ಎನ್ಆರ್ಸಿ ಅನುಷ್ಠಾನಗೊಂಡಾಗ, ನನ್ನ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ನಾನು ಪೋಷಕರ ಜನನ ಇತ್ಯಾದಿಗಳ ವಿವರಗಳನ್ನು ನೀಡಬೇಕೇ?
ಉತ್ತರ: ನಿಮ್ಮ ಜನ್ಮ ದಿನಾಂಕ / ತಿಂಗಳು ಮತ್ತು ವರ್ಷ ಮತ್ತು ಹುಟ್ಟಿದ ಸ್ಥಳದ ವಿವರಗಳು ಸಾಕು. ಲಭ್ಯವಿಲ್ಲದಿದ್ದರೆ, ನೀವು ಪೋಷಕರ ಜನನದಂತಹ ವಿವರಗಳನ್ನು ಒದಗಿಸಬೇಕಾಗಬಹುದು, ಆದರೆ ಯಾವುದೇ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವ ಅಗತ್ಯವಿಲ್ಲ. ಹುಟ್ಟಿದ ದಿನಾಂಕ ಮತ್ತು ಸ್ಥಳಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಸಲ್ಲಿಸುವ ಮೂಲಕ ಪೌರತ್ವವನ್ನು ಸಾಬೀತುಪಡಿಸಬಹುದು. ಅಂತಹ ಸ್ವೀಕಾರಾರ್ಹ 1 ದಾಖಲೆಗಳ ವಿವರಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದರೆ ಅವುಗಳು ಮತದಾರರ ಚೀಟಿ, ಪಾಸ್ಪೋರ್ಟ್, ಆಧಾರ್, ಪರವಾನಗಿ, ವಿಮಾ ಪತ್ರಗಳು, ಜನನ ಪ್ರಮಾಣಪತ್ರ, ಶಾಲೆ ಬಿಡುವ ವೇಳೆ ಪಡೆದ ಪ್ರಮಾಣಪತ್ರ, ಭೂಮಿ ಅಥವಾ ಮನೆ ಪತ್ರಗಳು ಅಥವಾ ಸಾರ್ವಜನಿಕ ಅಧಿಕಾರಿಗಳು ನೀಡುವ ಇತರ ದಾಖಲೆಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ. ಈ ದಾಖಲೆಗಳ ಪಟ್ಟಿಯು ಸಾಕಷ್ಟು ಉದ್ದವಾಗಿದೆ, ಆದ್ದರಿಂದ ಯಾವುದೇ ಭಾರತೀಯ ಪ್ರಜೆಯನ್ನು ಯಾವುದೇ ಅನಗತ್ಯ ಕಿರುಕುಳಕ್ಕೆ ಒಳಪಡಿಸಲಾಗುವುದಿಲ್ಲ.
ಪ್ರ 5. ಎನ್ಆರ್ಸಿ ಅನುಷ್ಠಾನಗೊಂಡಾಗ, ನಾನು 1971 ಕ್ಕಿಂತ ಹಿಂದಿನ ವಂಶವನ್ನು ಸಾಬೀತುಪಡಿಸಬೇಕೇ?
ಉತ್ತರ: ಇಲ್ಲ. 1971 ಕ್ಕಿಂತ ಹಿಂದಿನ ಕಾಲದ ಗುರುತಿನ ಚೀಟಿಗಳು ಅಥವಾ ಪೋಷಕರು / ಪೂರ್ವಜರ ಜನನ ಪ್ರಮಾಣಪತ್ರಗಳಂತಹ ಯಾವುದೇ ದಾಖಲೆಯನ್ನು ನೀವು ಪ್ರಸ್ತುತಪಡಿಸುವ ಮೂಲಕ ಯಾವುದೇ ಪೂರ್ವಜರನ್ನು ಸಾಬೀತುಪಡಿಸಬೇಕಾಗಿಲ್ಲ. ಅದು ಅಸ್ಸಾಂ ಎನ್ಆರ್ಸಿಗೆ ಮಾತ್ರ ಮಾನ್ಯವಾಗಿತ್ತು ಮತ್ತು ಅಸ್ಸಾಂ ಒಪ್ಪಂದದಿಂದ ಅದು ಕಡ್ಡಾಯಗೊಂಡಿತು ಮತ್ತು ಸುಪ್ರೀಂಕೋರ್ಟ್ನ ನಿರ್ದೇಶನಗಳಿಂದ ಅದು ಜಾರಿಗೆ ಬಂತು. ಪೌರತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳ ವಿತರಣೆ) ನಿಯಮಗಳು, 2003 ರ ಪ್ರಕಾರ ದೇಶದ ಉಳಿದ ಭಾಗಗಳಲ್ಲಿನ ಎನ್ಆರ್ಸಿ ಕಾರ್ಯವಿಧಾನವು ಸಂಪೂರ್ಣವಾಗಿ ಭಿನ್ನವಾಗಿದೆ.
ಪ್ರಶ್ನೆ 6. ಒಬ್ಬ ವ್ಯಕ್ತಿಯು ಅನಕ್ಷರಸ್ಥನಾಗಿದ್ದರೆ ಮತ್ತು ಸಂಬಂಧಿತ ದಾಖಲೆಗಳನ್ನು ಹೊಂದಿಲ್ಲದಿದ್ದರೆ ಏನು ಕಥೆ?
ಉತ್ತರ: ಈ ಸಂದರ್ಭದಲ್ಲಿ, ಸಾಕ್ಷಿಗಳು, ಇತರ ಪುರಾವೆಗಳು / ಸಮುದಾಯ ಪರಿಶೀಲನೆ ಇತ್ಯಾದಿಗಳನ್ನು ತರಲು ಅಧಿಕಾರಿಗಳು ಅವರಿಗೆ ಅವಕಾಶ ನೀಡುತ್ತಾರೆ. ಸರಿಯಾದ ವಿಧಾನವನ್ನು ಅನುಸರಿಸಲಾಗುತ್ತದೆ. ಯಾವುದೇ ಭಾರತೀಯ ಪ್ರಜೆಯನ್ನು ಅನಗತ್ಯ ತೊಂದರೆಗೆ ಸಿಲುಕಿಸಲಾಗುವುದಿಲ್ಲ.
ಪ್ರ 7. ನಾಸ್ತಿಕ, ಆದಿವಾಸಿಗಳು, ದಲಿತರು, ಮಹಿಳೆಯರು ಮತ್ತು ದಾಖಲೆಗಳಿಲ್ಲದವರು, ಭೂಹೀನರು ಮುಂತಾದವರು ಯಾರಾನ್ನಾದರು ಎನ್ಆರ್ಸಿ ಹೊರಗಿಡುತ್ತದೆಯೇ?
ಉತ್ತರ: ಇಲ್ಲ. ಎನ್ಆರ್ ಸಿ ಅನುಷ್ಠಾನಗೊಂಡಾಗ ಮೇಲೆ ತಿಳಿಸಿದ ಯಾರ ಮೇಲೆಯೂ ಪರಿಣಾಮ ಬೀರುವುದಿಲ್ಲ.
1955ರ ಪೌರತ್ವ ಕಾಯ್ದೆಯಿಂದ ಇದು ರೂಪುಗೊಂಡಿದೆ
I. ಹುಟ್ಟಿನಿಂದ ಪೌರತ್ವ
ಭಾರತದ ಸಂವಿಧಾನದ 5 ನೇ ವಿಧಿಯು 1950ರ ಜನವರಿ 26 ರಂದು ಭಾರತದಲ್ಲಿ ನೆಲೆಸಿದ ಯಾವುದೇ ವ್ಯಕ್ತಿ ಮತ್ತು;
ಎ) ಭಾರತದ ಭೂಪ್ರದೇಶದಲ್ಲಿ ಜನಿಸಿದವರಿಗೆ; ಅಥವಾ
ಬಿ) ಇವರ ಹೆತ್ತವರು ಭಾರತದ ಭೂಪ್ರದೇಶದಲ್ಲಿ ಜನಿಸಿದ್ದರೆ; ಅಥವಾ
ಸಿ) ಐದು ವರ್ಷಗಳಿಗಿಂತ ಹೆಚ್ಚು ಭಾರತದ ಭೂಪ್ರದೇಶದಲ್ಲಿ ವಾಸಿಸಿದವರು ಭಾರತದ ಪ್ರಜೆಯಾಗಿರುತ್ತಾರೆ.
● 1950 ರ ಜನವರಿ 26 ರಂದು ಅಥವಾ ನಂತರ ಆದರೆ 1987 ರ ಜುಲೈ 1 ರ ಮೊದಲು ಭಾರತದಲ್ಲಿ ಜನಿಸಿದ ಯಾವುದೇ ವ್ಯಕ್ತಿ ಹುಟ್ಟಿನಿಂದ ಭಾರತದ ಪ್ರಜೆ.
● ಜುಲೈ 1, 1987 ಮತ್ತು ಡಿಸೆಂಬರ್ 3, 2004 ರ ನಡುವೆ ಜನಿಸಿದ ಯಾವುದೇ ವ್ಯಕ್ತಿ ಮತ್ತು ಅವರ ಪೋಷಕರಲ್ಲಿ ಒಬ್ಬರು ಭಾರತದ ಪ್ರಜೆಯಾಗಿದ್ದರೆ ಅವರು ಹುಟ್ಟಿನಿಂದಲೂ ಭಾರತದ ಪ್ರಜೆಯಾಗಿರುತ್ತಾರೆ.
●ಡಿಸೆಂಬರ್ 3, 2004 ರ ನಂತರ ಜನಿಸಿದ ಯಾವುದೇ ವ್ಯಕ್ತಿ ಮತ್ತು ಅವರ ಪೋಷಕರು ಇಬ್ಬರೂ ಭಾರತದ ಪ್ರಜೆಗಳು ಅಥವಾ ಹೆತ್ತವರಲ್ಲಿ ಒಬ್ಬರು ವ್ಯಕ್ತಿ ಹುಟ್ಟಿದ ಸಮಯದಲ್ಲಿ ಅಕ್ರಮ ವಲಸಿಗರಲ್ಲದೇ ಇದ್ದರೆ ಮತ್ತು ಇನ್ನೊಬ್ಬರು ಭಾರತದ ಪ್ರಜೆಯಾಗಿದ್ದಾರೆ ಅವರು ಹುಟ್ಟಿನಿಂದಲೇ ಭಾರತದ ಪ್ರಜೆಯಾಗಿರುತ್ತಾರೆ.
II. ವಂಶಾನುಕ್ರಮದ ಮೂಲಕ ಪೌರತ್ವ
III. ನೋಂದಣಿ ಮೂಲಕ ಪೌರತ್ವ
● ನೋಂದಣಿಗೆ ಅರ್ಜಿ ಸಲ್ಲಿಸುವ ಮೊದಲು ಏಳು ವರ್ಷಗಳ ಕಾಲ ಭಾರತದಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಯು ಭಾರತದ ಪ್ರಜೆಯಾಗಿ ನೋಂದಾಯಿಸಲು ಅರ್ಹನಾಗಿರುತ್ತಾನೆ.
● ಅವಿಭಜಿತ ಭಾರತದ ಹೊರಗಿನ ಯಾವುದೇ ಭಾಗ ಅಥವಾ ಸ್ಥಳದಲ್ಲಿ ವಾಸಿಸುವ ಭಾರತೀಯ ಮೂಲದ ವ್ಯಕ್ತಿಯು ಭಾರತದ ಪ್ರಜೆಯಾಗಿ ನೋಂದಾಯಿಸಲು ಅರ್ಹ.
● ಭಾರತದ ಪ್ರಜೆಯನ್ನು ಮದುವೆಯಾರುವ ಮತ್ತು ನೋಂದಣಿಗೆ ಅರ್ಜಿ ಸಲ್ಲಿಸುವ ಮೊದಲು ಭಾರತದಲ್ಲಿ 7 ವರ್ಷಗಳ ಕಾಲ ಸಹಜವಾಗಿ ವಾಸಿಸುತ್ತಿರುವ ವ್ಯಕ್ತಿ ಪೌರತ್ವ ಪಡೆಯಲು ಅರ್ಹ.
● ಭಾರತದ ಪ್ರಜೆಗಳಾಗಿರುವ ವ್ಯಕ್ತಿಗಳ ಸಣ್ಣ ಮಕ್ಕಳು ಭಾರತದ ಪೌರತ್ವಕ್ಕೆ ನೋಂದಣಿ ಸಲ್ಲಿಸಲು ಅರ್ಹರು
● ಭಾರತದ ಪೌರರಾಗಿ ನೋಂದಾಯಿತರಾದ ಹೆತ್ತವರನ್ನು ಹೊಂದಿದ ಪೂರ್ಣ ವಯಸ್ಕ ಮತ್ತು ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳು ನೋಂದಣಿ ಪೌರತ್ವ ಪಡೆಯು ಅರ್ಹರು.
● ಪೂರ್ಣ ವಯಸ್ಸು ಮತ್ತು ಸಾಮರ್ಥ್ಯ ಹೊಂದಿರುವ ವ್ಯಕ್ತಿ ಐದು ವರ್ಷಗಳ ಕಾಲ ಭಾರತದ ಸಾಗರೋತ್ತರ ಪ್ರಜೆಯಾಗಿ ನೋಂದಾಯಿಸಿಕೊಂಡಿದದರೆ ಮತ್ತು ನೋಂದಣಿಗೆ ಅರ್ಜಿ ಸಲ್ಲಿಸುವ ಮೊದಲು ಹನ್ನೆರಡು ತಿಂಗಳು ಭಾರತದಲ್ಲಿ ನೆಲೆಸಿದ್ದರೆ ಭಾರತದ ಪ್ರಜೆಯಾಗಿ ನೋಂದಾಯಿಸಲು ಅರ್ಹನಾಗಿರುತ್ತಾನೆ.
IV. ನೈಸರ್ಗಿಕೀಕರಣದಿಂದ ಪೌರತ್ವ
ಹನ್ನೆರಡು ವರ್ಷಗಳ ರೆಸಿಡೆನ್ಸಿ ಅಗತ್ಯವನ್ನು ಪೂರೈಸುವಲ್ಲಿ ಪೂರ್ಣ ವಯಸ್ಸು ಮತ್ತು ಸಾಮರ್ಥ್ಯ ಹೊಂದಿರುವ ಯಾವುದೇ ವ್ಯಕ್ತಿ ನೈಸರ್ಗಿಕೀಕರಣದ ಪ್ರಮಾಣಪತ್ರದ ಸ್ವೀಕಾರಕ್ಕೆ ಅರ್ಹನಾಗಿರುತ್ತಾನೆ.
V. ಪ್ರದೇಶವನ್ನು ಸಂಯೋಜಿಸುವ ಮೂಲಕ ಪೌರತ್ವ
ಯಾವುದೇ ಹೊಸ ಭೂಪ್ರದೇಶವು ಭಾರತದ ಭಾಗವಾಗಿ ಹೊರಹೊಮ್ಮಿದರೆ, ಆ ಭೂಪ್ರದೇಶದಲ್ಲಿ ವಾಸಿಸುವ ಜನರು ಭಾರತದ ನಾಗರಿಕರಾಗಲು ಅರ್ಹರಾಗಿರುತ್ತಾರೆ. ಅಂತಹ ವ್ಯಕ್ತಿಗಳು ಅಧಿಸೂಚಿತ ದಿನಾಂಕದಿಂದ ಭಾರತದ ಪ್ರಜೆಯಾಗುತ್ತಾರೆ. ಗೋವಾ, ದಮನ್ ಮತ್ತು ಡಿಯು, ಸಿಕ್ಕಿಂನಲ್ಲಿ ಇದು ನಡೆದಿದೆ. 2014 ರಲ್ಲಿ ಭಾರತದ ಭಾಗವಾದ ಅನೇಕ ಬಾಂಗ್ಲಾದೇಶದ ಭೂಪ್ರದೇಶದ ವಿಷಯದಲ್ಲಿ ಇದು ಸಂಭವಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.