ಜಿನೆವಾ: ಭಾರತದಿಂದ ವಲಸೆ ಬರುವ ಮುಸ್ಲಿಂ ನಿರಾಶ್ರಿತರನ್ನು ಪಾಕಿಸ್ಥಾನವು ಸ್ವೀಕರಿಸುವುದಿಲ್ಲ ಎಂದು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಅಲ್ಲದೇ, 370 ನೇ ವಿಧಿ ರದ್ದತಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಿಂದ ಭಾರತದಿಂದ ಮುಸ್ಲಿಮರು ಸಾಮೂಹಿಕವಾಗಿ ವಲಸೆ ಬರುವ ಸಾಧ್ಯತೆ ಇದೆ, ಆದರೆ ಅವರನ್ನು ನಾವು ಸ್ವೀಕರಿಸುವುದಿಲ್ಲ ಎಂದಿದ್ದಾರೆ.
ಸ್ವಿಟ್ಜರ್ಲ್ಯಾಂಡ್ನ ಜಿನೀವಾದಲ್ಲಿ ನಡೆದ ನಿರಾಶ್ರಿತರ ಕುರಿತ ಜಾಗತಿಕ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್ ಅವರು ಈ ಹೇಳಿಕೆಯನ್ನು ನೀಡಿದ್ದಾರೆ ಎಂಬುದು ದುರಾದೃಷ್ಟಕರವಾಗಿದೆ. ಅಲ್ಲದೇ, ಇತರ ದೇಶಗಳು ಈ ವಿಷಯದಲ್ಲಿ ಮುಂದೆ ಬರಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದದಾರೆ.
ಪ್ರಸ್ತುತ ಪರಿಸ್ಥಿತಿಯು ಲಕ್ಷಾಂತರ ಮುಸ್ಲಿಮರು ಭಾರತದಿಂದ ಪಲಾಯನ ಮಾಡಲು ಕಾರಣವಾಗಬಹುದು, ಇದರಿಂದಾಗಿ ನಿರಾಶ್ರಿತರ ಬಿಕ್ಕಟ್ಟು ಉಂಟಾಗುತ್ತದೆ ಮತ್ತು ಅದು ಇತರರನ್ನು ಸಂಕಷ್ಟಕ್ಕೆ ದೂಡುತ್ತದೆ ಎಂದು ಖಾನ್ ಆರೋಪಿಸಿದ್ದಾರೆ. ಇದು ಎರಡು “ಪರಮಾಣು ರಾಷ್ಟ್ರಗಳ” ನಡುವೆ ಸಶಸ್ತ್ರ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಖಾನ್ ಹೇಳಿಕೆ ನೀಡಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ ನಿರಾಶ್ರಿತರ ಬಿಕ್ಕಟ್ಟು ಉಂಟಾಗಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ.
ಆದರೆ ಪೌರತ್ವ ಮಸೂದೆಯು ಪೌರತ್ವವನ್ನು ನೀಡುವುದದ ಬಗ್ಗೆ ಇದೆಯೇ ಹೊರತು, ಪೌರತ್ವ ಹಿಂಪಡೆಯುವುದರ ಬಗ್ಗೆ ಇಲ್ಲ. ಹೀಗಿದ್ದಾಗ ಇದು ವಲಸೆ ಬಿಕ್ಕಟ್ಟನ್ನು ಹೇಗೆ ಸೃಷ್ಟಿಸುತ್ತದೆ ಎಂಬುದಕ್ಕೆ ಅವರೇ ಉತ್ತರಿಸಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.