ರಾಯ್ಪರ: ವಿದ್ಯಾರ್ಥಿಗಳಿಗೆ ಡಿ ಫಾರ್ ಡಾಗ್, ಪಿ ಫಾರ್ ಪೆನ್ ಎಂದು ಹೇಳಿಕೊಡಬೇಕಾದ ಶಿಕ್ಷಕನೊಬ್ಬ ಡಿ ಫಾರ್ ದಾರು(ಶರಾಬು) ಪಿ ಫಾರ್ ಪಿಯೋ(ಕುಡಿಯಿರಿ) ಎಂದು ಹೇಳಿಕೊಡುತ್ತಿದ್ದಾನೆ.
ಛತ್ತೀಸ್ಗಢದ ಕೊರೆಯ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನೊಬ್ಬ ಮಕ್ಕಳಿಗೆ ಈ ರೀತಿಯಾಗಿ ಶರಾಬು ಕುಡಿಯುವ ಪಾಠ ಹೇಳಿಕೊಡುತ್ತಿದ್ದಾನೆ.
ಶಿಕ್ಷಕನ ಈ ಪಾಠವನ್ನು ಸ್ಥಳೀಯ ಪತ್ರಕರ್ತ ಶಿಯಾಬರನ್ ಎಂಬುವವರು ವೀಡಿಯೋ ಮಾಡಿದ್ದಾರೆ. ಬ್ಲ್ಯಾಕ್ ಬೊರ್ಡ್ನಲ್ಲಿ ದಾರು ಪಿಯೋ ಎಂದು ಶಿಕ್ಷಕ ಬರೆಯುತ್ತಿರುವ ಮತ್ತು ಅದನ್ನು ಮಕ್ಕಳ ಬಾಯಿಯಿಂದ ಹೇಳಿಸುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿ ಚಿತ್ರೀಕರಣಗೊಂಡಿದೆ.
ಅಲ್ಲದೇ ನಾನು ಶಾಲೆಗೆ ಕುಡಿದು ಬಂದು ಪಾಠ ಮಾಡುತ್ತಿದ್ದೆ, ಈ ವೇಳೆ ಈ ರೀತಿ ಬರೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಈಗ ಕುಡಿತವನ್ನು ಬಿಟ್ಟಿದ್ದು, ಇನ್ನು ಮುಂದೆ ಕುಡಿದು ಪಾಠ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾನೆ.
ಈತನ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಜರುಗಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ.
ಮಕ್ಕಳಿಗೆ ಉತ್ತಮ ನಾಗರಿಕತೆಯನ್ನು ಕಲಿಸಬೇಕಾದ ಶಿಕ್ಷಕರೇ ಈ ರೀತಿ ಶರಾಬು ಕುಡಿದು ಬಂದು ಶರಾಬು ಕುಡಿಯುವ ಪಾಠ ಹೇಳಿಕೊಡುತ್ತಿರುವುದು ದುರಾದೃಷ್ಟಕರ. ಶಿಕ್ಷಕ ವೃತ್ತಿಗೆ ಗೌರವ ಕೊಡದವರ ವಿರುದ್ಧ ಕಠಿಣಕ್ರಮ ಜರುಗಿಸಬೇಕಾದ ಅಗತ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.