ನವದೆಹಲಿ: ಯೋಧರಂತೆ ಅವರ ಶ್ವಾನಗಳು ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಮಹತ್ವದ ಪಾತ್ರವನ್ನು ನಿಭಾಯಿಸುತ್ತವೆ. ಆದರೆ ಅವುಗಳು ಪ್ರಸಿದ್ಧಿಗೆ ಬರುವುದು ತೀರಾ ವಿರಳ. ಆದರೀಗ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಸೇನಾ ಪಡೆಗಳು ಹೆಚ್ಚು ಸಕ್ರಿಯವಾಗಿರುವ ಹಿನ್ನಲೆಯಲ್ಲಿ ಮಿಲಿಟರಿ ಪ್ರಾಣಿಗಳು ಕೂಡ ಪ್ರಸಿದ್ಧಿಯನ್ನು ಪಡೆಯುತ್ತಿವೆ.
15 ಕಾರ್ಪ್ಸ್ ಕಮಾಂಡರ್ ಲೆ.ಜನರಲ್.ಕೆಜೆಎಸ್ ದಿಲ್ಲಾನ್ ಅವರಿಗೆ ಗೋಲ್ಡನ್ ಲ್ಯಾಬ್ರೊಡಾರ್ ಶ್ವಾನ ತನ್ನ ಮೊದಲಿನ ಎರಡು ಕಾಲುಗಳನ್ನು ಎತ್ತಿ ಗೌರವ ಸಲ್ಲಿಸುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಿಲ್ಲಾನ್ ಅವರು ಕೂಡ ಈ ಶ್ವಾನಕ್ಕೆ ಪ್ರತಿಯಾಗಿ ಸೆಲ್ಯೂಟ್ ಮಾಡಿದ್ದಾರೆ. ಈ ಫೋಟೋಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿದೆ.
ಡಿಸೆಂಬರ್ 14ರಂದು ರಿಮೌಂಟ್ ವೆಟರ್ನರಿ ಕಾರ್ಪ್ ಡೇ ಸಂದರ್ಭದಲ್ಲಿ ಈ ಫೋಟೋವನ್ನು ಹಂಚಲಾಗಿದೆ. ಈ ಕಾರ್ಪ್ ಮಿಲಿಟರಿ ಶ್ವಾನಗಳನ್ನು ಮತ್ತು ಪ್ರಾಣಿಗಳನ್ನು ತರಬೇತುಗೊಳಿಸುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಈ ಫೋಟೋಗೆ ಭಾರಿ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದು, ‘ಒಬ್ಬ ಯೋಧ ಮತ್ತೊಬ್ಬ ಯೋಧನಿಗೆ ಸೆಲ್ಯೂಟ್ ಮಾಡುತ್ತಿದ್ದಾನೆ’, ‘ಬೆಲೆಕಟ್ಟಲಾಗದ ಕ್ಷಣ’ ಎಂದೆಲ್ಲಾ ಜನರು ಪ್ರತಿಕ್ರಿಯೆ ನೀಡಿದ್ದಾರೆ.
#RVC Day Salute to the Buddy who saved many a lives many a times 🙏🇮🇳✊ https://t.co/Xr7PQkUiWM
— KJS DHILLON (@Tiny_Dhillon) December 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.