ನವದೆಹಲಿ: ಪ್ರತಿ ವರ್ಷ ಡಿಸೆಂಬರ್ 16 ಅನ್ನು ವಿಜಯ್ ದಿವಸ್ ಆಗಿ ದೇಶದಲ್ಲಿ ಆಚರಣೆ ಮಾಡಲಾಗುತ್ತದೆ. 1971ರ ಇಂಡೋ-ಪಾಕಿಸ್ಥಾನ ಯುದ್ಧದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತದ ಅಭೂತಪೂರ್ವ ವಿಜಯವನ್ನು ಗುರುತಿಸಲು ಮತ್ತು ಯುದ್ಧದ ಸಮಯದಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಹುತಾತ್ಮರನ್ನು ನೆನಪಿಸಲು ರಾಷ್ಟ್ರವು ‘ವಿಜಯ್ ದಿವಸ್’ ಅನ್ನು ಆಚರಿಸುತ್ತದೆ.
ಡಿಸೆಂಬರ್ 3 ರಂದು ಪ್ರಾರಂಭವಾದ 1971 ರ ಇಂಡೋ-ಪಾಕಿಸ್ಥಾನ ಯುದ್ಧವು 13 ದಿನಗಳ ಕಾಲ ನಡೆಯಿತು ಮತ್ತು ಅಧಿಕೃತವಾಗಿ ಡಿಸೆಂಬರ್ 16 ರಂದು ಯುದ್ಧ ಕೊನೆಗೊಂಡಿತು, ನಂತರ ಪಾಕಿಸ್ಥಾನವು ಭಾರತಕ್ಕೆ ಶರಣಾಯಿತು. 1971 ರಲ್ಲಿ ಈ ದಿನದಂದು, ಪಾಕಿಸ್ಥಾನದ ಪಡೆಗಳ ಮುಖ್ಯಸ್ಥ ಜನರಲ್ ಎಎ ಖಾನ್ ನಿಯಾಜಿ ಮತ್ತು 93 ಸಾವಿರ ಸೈನಿಕರು ಭಾರತೀಯ ಸೇನೆ ಮತ್ತು ಮುಕ್ತಿ ಬಾಹಿನಿ ಒಳಗೊಂಡ ಮಿತ್ರಪಡೆಗಳಿಗೆ ಬೇಷರತ್ತಾಗಿ ಶರಣಾಗಿದ್ದರು.
ಯುದ್ಧದ ಅಂತ್ಯವು ಪೂರ್ವ ಪಾಕಿಸ್ಥಾನವನ್ನು ಪ್ರತ್ಯೇಕಿಸಿ ಬಾಂಗ್ಲಾದೇಶವನ್ನು ಉದಯವಾಗುವಂತೆ ಮಾಡಿತು. ಅಂದಿನಿಂದ ಭಾರತ ಮತ್ತು ಬಾಂಗ್ಲಾದೇಶ, ಪ್ರತಿ ವರ್ಷ ಪಾಕಿಸ್ಥಾನದ ವಿರುದ್ಧ ಉಭಯ ದೇಶಗಳ ಮಿಲಿಟರಿ ವಿಜಯವನ್ನು ಗುರುತಿಸಲು ವಿಜಯ್ ದಿವಸ್ ಅನ್ನು ಆಚರಿಸುತ್ತವೆ.
ವಿಜಯ್ ದಿವಸ್ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೈನಿಕರ ಧೈರ್ಯ ಮತ್ತು ಶೌರ್ಯಕ್ಕೆ ನಮನಗಳನ್ನು ಸಲ್ಲಿಸಿದ್ದಾರೆ. 1971 ರ ಈ ದಿನ ನಮ್ಮ ಸೈನ್ಯವು ರಚಿಸಿದ ಇತಿಹಾಸವು ಸುವರ್ಣ ಪದಗಳಲ್ಲಿ ಬರೆಯಲ್ಪಡಲಿವೆ ಎಂದು ಟ್ವೀಟ್ ನಲ್ಲಿ ಮೋದಿ ಹೇಳಿದ್ದಾರೆ.
“ವಿಜಯ ದಿವಸದ ಅಂಗವಾಗಿ ಭಾರತೀಯ ಸೈನಿಕರ ಸಾಹಸ, ಶೌರ್ಯ ಮತ್ತು ಪರಾಕ್ರಮಕ್ಕೆ ನಮಗಳನ್ನು ಸಲ್ಲಿಸುತ್ತೇನೆ. 1971ರ ಈ ದಿನ ನಮ್ಮ ಸೇನೆಯು ಇತಿಹಾಸ ನಿರ್ಮಾಣ ಮಾಡಿತು, ಅದು ಸದಾ ಸುವರ್ಣಾಕ್ಷರಗಳಲ್ಲಿ ನಮೋದಿಸಲ್ಪಡಲಿದೆ” ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
विजय दिवस पर भारतीय सैनिकों के साहस, शौर्य और पराक्रम को नमन करता हूं। 1971 में आज के दिन हमारी सेना ने जो इतिहास रचा, वह सदा स्वर्णाक्षरों में अंकित रहेगा।
— Narendra Modi (@narendramodi) December 16, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.