ನವದೆಹಲಿ: ಪಿಎಸ್ಎಲ್ವಿ-ಸಿ 48 ಉಡಾವಣಾ ವಾಹಕದ ಮೂಲಕ ಇಸ್ರೋ ಇಂದು ದೇಶೀ ನಿರ್ಮಿತ ದೂರಸಂವೇದಿ ಉಪಗ್ರಹ RISAT-2BR1 ಸೇರಿದಂತೆ 9 ವಾಣಿಜ್ಯ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ.
ಆಂದು ಮಧ್ಯಾಹ್ನ 3.25ರ ಸುಮಾರಿಗೆ ಆಂಧ್ರಪ್ರದೇಶದ ಶ್ರೀಹರಿಕೋಟದ ಉಡಾವಣಾ ಕೇಂದ್ರದಿಂದ ಉಪಗ್ರಹಗಳನ್ನು ಉಡಾವಣೆಗೊಳಿಸಲಾಗಿದೆ.
628 ಕೆಜಿ ತೂಕದ ರಿಸ್ಯಾಟ್-2ಬಿರ್ಐ1 ಉಪಗ್ರಹವು ಸುಧಾರಿತ ರಾಡರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಷನ್ ಸ್ಯಾಟಲೈಟ್ ಆಗಿದೆ. ಐದು ವರ್ಷಗಳ ಜೀವಿತಾವಧಿ ಇರುವ ಈ ಸ್ಯಾಟಲೈಟ್ ಅತ್ಯಂತ ಪರಿಣಾಮಕಾರಿ ಚಿತ್ರಗಳನ್ನು ಸೆರೆಹಿಡಿಯಬಲ್ಲದು.
ಈ ಉಪಗ್ರಹವನ್ನು ಕೃಷಿ, ಅರಣ್ಯೀಕರಣ ಮತ್ತು ವಿಪತ್ತು ನಿರ್ವಹಣಾ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿದೆ. ಇದರ ಕಾರ್ಯ ತಾಂತ್ರಿಕ ಬಳಕೆಯ ಬಗ್ಗೆ ಇಸ್ರೋ ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ.
ಪಿಎಸ್ಎಲ್ವಿ-ಕ್ಯೂಎಲ್ 4ಹಂತದ, ಇಂಜಿನ್ ವಿಸ್ತರಣ ಸಾಮರ್ಥ್ಯವುಳ್ಳ ರೋಕೆಟ್ ಆಗಿದ್ದು, ಇದು ಸಾವಿರ ಮತ್ತು ಲಿಕ್ವಿಡ್ ಪರ್ಯಾಯ ಇಂಧನಗಳನ್ನು ಬಳಸಿಕೊಳ್ಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.