ಇತ್ತೀಚಿಗೆ, ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಮಹಿಳಾ ಉದ್ಯಮಶೀಲರ ನ್ಯಾಷನಲ್ ಆರ್ಗ್ಯಾನಿಕ್ ಫೆಸ್ಟಿವಲ್ ಅನ್ನು ಸ್ಥಾಪನೆ ಮಾಡುವ ಒಪ್ಪಂದಕ್ಕೆ ಒಳಪಟ್ಟಿದ್ದಾರೆ.
ಈ ಬಗೆಗಿನ ತಿಳುವಳಿಕೆ ಒಪ್ಪಂದಕ್ಕೂ ಇಬ್ಬರು ಸಚಿವೆಯರು ಸಹಿ ಹಾಕಿದ್ದಾರೆ. ಸರ್ಕಾರದ ಈ ಕಾರ್ಯಕ್ರಮವು ಮಹಿಳಾ ಉದ್ಯಮಶೀಲರು ಮತ್ತು ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಳ್ಳಲಿದೆ.
ಈ ಕಾರ್ಯಕ್ರಮವು ಪ್ರಮುಖವಾಗಿ ಎರಡು ಉದ್ದೇಶಗಳನ್ನು ಹೊಂದಿದೆ. ಒಂದು ಮಹಿಳೆಯರ ಕಲ್ಯಾಣ ಮತ್ತು ಎರಡು ರೈತರ ಆದಾಯವನ್ನು ದ್ವಿಗುಣಗೊಳಿಸುವಿಕೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಆರಂಭದಿಂದಲೂ ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಗುರಿಯಾಗಿದೆ.
ಮೊದಲ ಸಂಚಿಕೆಯ ನ್ಯಾಷನಲ್ ಆರ್ಗ್ಯಾನಿಕ್ ಫೆಸ್ಟಿವಲ್ ಹರಿಯಾಣದ ಸೋನಿಪತ್ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫುಡ್ ಟೆಕ್ನಾಲಜಿ ಎಂಟರ್ಪ್ರೆನರ್ಷಿಪ್ ಅಂಡ್ ಮ್ಯಾನೇಜ್ಮೆಂಟ್ (NIFTEM)ನಲ್ಲಿ ಜರುಗಲಿದೆ.
ಆಹಾರ ವಲಯದಲ್ಲಿ ತಜ್ಞತೆಯನ್ನು ಗಳಿಸುವ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಸಹಾಯ ಮಾಡುತ್ತಿರುವ ಶೈಕ್ಷಣಿಕ ಸಂಸ್ಥೆಯ ಸಹಕಾರದೊಂದಿಗೆ ಸಂಸ್ಥೆಯ ಆವರಣದಲ್ಲಿ ಆರ್ಗ್ಯಾನಿಕ್ ಫೆಸ್ಟಿವಲ್ ಅನ್ನು ಆಯೋಜಿಸಲಾಗುತ್ತಿದೆ.
ಸಂಸದರಾಗಿ ಮತ್ತು ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಸ್ಮೃತಿ ಇರಾನಿ ಮತ್ತು ಬಾದಲ್ ಈ ಕಾರ್ಯಕ್ರಮಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ಅವರ ರಾಜಕೀಯ ಇಚ್ಚಾಶಕ್ತಿ ಇಲ್ಲಿ ಬಲವಾಗಿ ಗೋಚರಿಸುತ್ತದೆ. ತಳಮಟ್ಟದಿಂದಲೇ ಅವರು ತಮ್ಮ ಚಿಂತನೆಗಳನ್ನು ಮತ್ತು ಪಾಲುದಾರಿಕೆಯನ್ನು ಸಮರ್ಪಕವಾದ ರೀತಿಯಲ್ಲಿ ಅನುಷ್ಠಾನಗೊಳಿಸುತ್ತಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದೊಂದಿಗೆ ಜವಳಿ ಖಾತೆಯನ್ನು ಮುನ್ನಡೆಸುತ್ತಿರುವ ಸ್ಮತಿ ಇರಾನಿಯವರು ಮಹಿಳಾ ಸಬಲೀಕರಣದ ಬಗ್ಗೆ ಈಗಾಗಲೇ ಹಲವಾರು ಅವಕಾಶ ಮತ್ತು ಸಾಮರ್ಥ್ಯಗಳ ಬಗ್ಗೆ ಮಾಹಿತಿಗಳನ್ನು ನೀಡಿದ್ದಾರೆ.
ಓರ್ವ ಸಚಿವೆಯಾಗಿ ಸ್ಮೃತಿ ಇರಾನಿ ಅವರು ಸ್ತ್ರೀತನದ ಹಲವಾರು ಶಕ್ತಿಶಾಲಿ ಮುಖಗಳನ್ನು ತೋರ್ಪಡಿಸಿದ್ದಾರೆ. ಬಾದಲ್ ಅವರೊಂದಿಗಿನ ಅವರ ಪಾಲುದಾರಿತ್ವ ನಿಜಕ್ಕೂ ಒಂದು ಅದ್ಭುತ ಆರಂಭವಾಗಿದೆ.
ಮಹಿಳೆಯರನ್ನು ತಲುಪುವ, ಅವರ ಮೇಲೆ ಪ್ರಭಾವ ಬೀರುವ ಮತ್ತು ಅವರ ಬದುಕನ್ನು ಸುಧಾರಿಸುವ ಆಯಾಮಗಳ ಮತ್ತು ಕ್ರಮಗಳ ಬಗ್ಗೆ ಇರಾನಿಯವರು ಅತಿ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಮೋದಿ ಆಡಳಿತದಲ್ಲಿ ಲಿಂಗ ಆಧಾರಿತ ಯಶಸ್ಸು ಮತ್ತು ಮಹಿಳಾ ಸುರಕ್ಷತೆ ವೃದ್ಧಿಸುವ ಪ್ರಮುಖ ಪಾತ್ರವನ್ನು ಅವರು ವಹಿಸುತ್ತಿದ್ದಾರೆ.
ಹೇಗೆ ಎಂಬ ಬಗ್ಗೆ ಕೆಲವು ಅಂಶಗಳು ಇಲ್ಲಿವೆ
ಒಂದು: ಕೌಶಲ್ಯ ರಹಿತರನ್ನು ಕೌಶಲ್ಯ ಭರಿತರನ್ನಾಗಿಸುವುದು
ಸಚಿವಾಲಯಗಳ ನಡುವೆ ಮತ್ತು ಇಲಾಖೆಗಳ ನಡುವೆ ನೈಸರ್ಗಿಕ ಪಾಲುದಾರಿತ್ವವನ್ನು ನಿರ್ಮಾಣ ಮಾಡುವುದು. ಎರಡನೇ ಅತಿ ದೊಡ್ಡ ಉದ್ಯೋಗ ಸೃಷ್ಟಿ ವಲಯದಲ್ಲಿ ಹೊಸ ಚಿಂತನೆಗಳನ್ನು ಅನುಷ್ಠಾನಗೊಳಿಸುವಂತೆ ಮಾಡುವುದು ಅತಿ ಮುಖ್ಯವಾಗುತ್ತದೆ. ಅತಿದೊಡ್ಡ ಉದ್ಯೋಗ ಸೃಷ್ಟಿ ವಲಯವು ಸ್ಮೃತಿ ಇರಾನಿ ಅವರ ಸಚಿವಾಲಯದ ಅಧೀನಕ್ಕೆ ಬರುತ್ತದೆ.
ಇರಾನಿ ಅವರ ಅಧೀನದಲ್ಲಿರುವ ಎರಡು ಸಚಿವಾಲಯಗಳು ಕೂಡ ಮಹಿಳಾ ಕೇಂದ್ರಿತವಾಗಿದೆ. ಮಹಿಳಾ ಕೈಮಗ್ಗ ಕಾರ್ಮಿಕರು, ಮಹಿಳಾ ಕಲಾವಿದರು ಟೆಕ್ಸ್ಟೈಲ್ ವಲಯದಲ್ಲಿ ಅತಿ ಪ್ರಮುಖ ಪಾತ್ರವನ್ನು ನಿಭಾಯಿಸುತ್ತಾರೆ.
ಇತರ ಸಚಿವಾಲಯಗಳೊಂದಿಗಿನ ಮತ್ತು ಅವರ ಎರಡು ಸಚಿವಾಲಯಗಳ ನಡುವಿನ ಪಾಲುದಾರಿಕೆ ಕೌಶಲ್ಯ ರಹಿತರನ್ನು ಕೌಶಲ್ಯ ಭರಿತರನ್ನಾಗಿ ಮಾಡುವ ನಿಟ್ಟಿನಲ್ಲಿ ಅವಕಾಶಗಳ ಹೆಬ್ಬಾಗಿಲನ್ನು ತೆರೆಯಲಿದೆ. ಕೌಶಲ್ಯಾಭಿವೃದ್ಧಿ ಟೆಕ್ಸ್ಟೈಲ್ ಮತ್ತು ಕರಕುಶಲ ವಲಯಕ್ಕೆ ಅತಿ ಮುಖ್ಯವಾಗಿದೆ.
ಎರಡು: ವ್ಯವಸ್ಥೆಯನ್ನು ನಂಬಲು ಕಾರಣ ನೀಡುವುದು
ಮಹಿಳಾ ಭದ್ರತೆ ಮತ್ತು ಮಹಿಳೆಯರ ವಿರುದ್ಧದ ಅಪರಾಧಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ಮಹಿಳಾ ವಿರುದ್ಧದ ಅಪರಾಧಗಳಿಗೆ ಕಠಿಣವಾದ ಶಿಕ್ಷೆಯನ್ನು ಒದಗಿಸುವಂತೆ ಅತ್ಯಂತ ಪ್ರಬಲವಾಗಿ ಪ್ರತಿಪಾದಿಸುವುದು, ಈ ನಿಟ್ಟಿನಲ್ಲಿ ಇತರ ಸಚಿವಾಲಯಗಳೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಕಾರ್ಯವನ್ನು ಸ್ಮೃತಿ ಇರಾನಿ ಅವರು ಮಾಡುತ್ತಾ ಬಂದಿದ್ದಾರೆ.
40 ಗಂಟೆಗಳ ಅವಿರತ ಹೋರಾಟದ ಬಳಿಕ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸಾವಿಗೀಡಾದರು. ಹೈದ್ರಾಬಾದ್ ಪಶುವೈದ್ಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಈ ಎರಡು ಪ್ರಕ್ರಿಯೆಗಳಲ್ಲಿ ನ್ಯಾಯಾಂಗದ ವಿಳಂಬ ಪ್ರಕ್ರಿಯೆಯನ್ನು ಜನರು ನೋಡಿದ್ದರು. ಅವುಗಳ ಸುತ್ತ ನಡೆದ ಭಾವನಾತ್ಮಕ ಸನ್ನಿವೇಶಗಳಿಗೂ ಜನರು ಸಾಕ್ಷಿಯಾಗಿದ್ದರು. ಇಂತಹ ಘಟನೆಗಳ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವಾಲಯ ಮತ್ತು ಇತರ ಸಚಿವಾಲಯಗಳ ನಡುವಿನ ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಮತ್ತು ಪ್ರಕ್ರಿಯೆಯನ್ನು ನ್ಯಾಯಸಮ್ಮತಗೊಳಿಸುವ ನಿಟ್ಟಿನಲ್ಲಿ ಮಹಿಳೆಯರ ವಿಶ್ವಾಸವನ್ನು ಮತ್ತೆ ಗಳಿಸುವ ನಿಟ್ಟಿನಲ್ಲಿ ಸಹಾಯಕವಾಗಬಲ್ಲದು. ಈ ಪ್ರಯತ್ನವನ್ನು ಸ್ಮೃತಿ ಇರಾನಿ ಮಾಡುತ್ತಿದ್ದಾರೆ ಎಂಬುದು ಸಮಾಧಾನಕರ ಸಂಗತಿ.
ಮೂರು: ಜನಪ್ರಿಯ ವಿಷಯಗಳಲ್ಲಿನ ವಿಷಕಾರಿ ಅಂಶಗಳನ್ನು ಪತ್ತೆ ಹಚ್ಚುವುದು
ಲಿಂಗ ಆಧಾರಿತ ಅಪರಾಧ ಪ್ರಕರಣಗಳಲ್ಲಿ ಹಬ್ಬಲಾಗುವ ಜನಪ್ರಿಯ ಕಥೆಗಳನ್ನು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಲಾಗುವ ಕಥೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾದ ಮತ್ತು ಅವುಗಳಲ್ಲಿ ತಪ್ಪು ಕಂಡರೆ ಸರಿಪಡಿಸಬೇಕಾದ ಮಹತ್ವದ ಕಾರ್ಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಚಿವಾಲಯವು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಸಹಾಯವನ್ನು ಪಡೆದುಕೊಂಡು ಸುಳ್ಳು ಕಥೆಗಳನ್ನು ಮತ್ತು ವದಂತಿಗಳನ್ನು ಮಹಿಳೆ ಮತ್ತು ಮಕ್ಕಳ ರಕ್ಷಣೆಯನ್ನು ಮಾಡಬೇಕಾಗುತ್ತದೆ. ಈ ರೀತಿಯಲ್ಲಿ ಸ್ಮೃತಿ ಇರಾನಿಯವರು ಹೆಜ್ಜೆಯನ್ನು ಮುಂದಿಡುತ್ತಿದ್ದಾರೆ.
ನಾಲ್ಕು: ಯುವ ಭಾರತ ಮತ್ತು ಅಪೌಷ್ಟಿಕತೆ ಮುಕ್ತ
ಡಿಸೆಂಬರ್ 3 ರಂದು ಭಾರತೀಯ ಪೋಷಣೆ ಅಭಿಯಾನವನ್ನು ಆರಂಭಿಸಲಾಯಿತು. ಈ ನಿಟ್ಟಿನಲ್ಲಿ ದೇಶ್ ಉಮ್ಮೀದ್ ಸೆ ಗೀತೆಯನ್ನು ರಚನೆ ಮಾಡಲಾಯಿತು. ಈ ಅಭಿಯಾನವು 2022ರ ವೇಳೆಗೆ ಭಾರತವನ್ನು ಅಪೌಷ್ಟಿಕತೆ ಮುಕ್ತವನ್ನಾಗಿಸುವ ಉದ್ದೇಶವನ್ನು ಹೊಂದಿದೆ.
ಈ ಅಭಿಯಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಮತಿ ಇರಾನಿ, ಸವಾಲುಗಳ ತೂಕವನ್ನು ನಾವು ಅರಿತುಕೊಂಡಿದ್ದೇವೆ ಎಂದು ಹೇಳಿದ್ದರು.
ಅವರ ಸಚಿವಾಲಯವು ರಾಷ್ಟ್ರೀಯ ಮಟ್ಟದಲ್ಲಿ ಪೋಷಣಾ ಅಭಿಯಾನದ ಉಸ್ತುವಾರಿಯನ್ನು ವಹಿಸಿಕೊಂಡಿದೆ. ಅವರು ಹೇಳುವಂತೆ ಈ ಅಭಿಯಾನದಡಿಯಲ್ಲಿ 9 ಲಕ್ಷದ 20 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ತರಬೇತಿಯನ್ನು ಪಡೆಯಲಿದ್ದಾರೆ.
ಭಾರತದ ಸರ್ವತೋಮುಖ ಅಭಿವೃದ್ಧಿಗೆ ಅತ್ಯಂತ ನಿರ್ಣಾಯಕವಾದ ತಾಯಂದಿರ ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.
ಐದು: ಬಾಲ್ಯವನ್ನು ರಚಿಸುವ ಕೈಗಳನ್ನು ಬಲಿಷ್ಠಗೊಳಿಸುವುದು
ಭಾರತದ ಸಾಂಪ್ರದಾಯಿಕ ಆಟಿಕೆಯನ್ನು ತಯಾರಿಸುವಲ್ಲಿ ಮಹಿಳಾ ಕರಕುಶಲಕರ್ಮಿಗಳ, ಕಲಾವಿದರ ಕೊಡುಗೆ ಅಪಾರ. ಅವರಿಗೆ ಆಟಿಕೆಗಳ ತಯಾರಿಕೆ ಜೀವನೋಪಾಯವೂ ಆಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಇಂತಹ ಮಹಿಳಾ ಕರಕುಶಲಕರ್ಮಿಗಳು ಜೀವನೋಪಾಯ ಸಿಗದೆ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ತರಬೇತಿ ನೀಡುವಿಕೆ, ಕಚ್ಚಾವಸ್ತುಗಳ ಪೂರೈಸುವಿಕೆ, ಚಿಂತನೆಗಳ ಅನುಷ್ಠಾನದಲ್ಲಿ ಬದಲಾವಣೆಯನ್ನು ತರುವ ಸಾಧ್ಯತೆ ಇದೆ.
ಭಾರತದ ಸಾಂಪ್ರದಾಯಿಕ ಆಟಿಕೆ ತಯಾರಿಸುವ ಕೈಗಾರಿಕೆಗಳಿಗೆ ಅನುದಾನಗಳನ್ನು ನೀಡುವ ಮೂಲಕ, ಅವುಗಳ ವಸ್ತುಗಳಿಗೆ ಬೇಡಿಕೆಯನ್ನು ಸೃಷ್ಟಿಸುವ ಮೂಲಕ ಮಹಿಳೆಯರ ಜೀವನವನ್ನು ಸುಧರಿಸಬಹುದಾಗಿದೆ. ಎರಡು ಸಚಿವಾಲಯಗಳ ಜವಾಬ್ದಾರಿಯನ್ನು ಹೊತ್ತಿರುವ ಸಚಿವೆಯಾಗಿ ಸ್ಮೃತಿ ಇರಾನಿಯವರು ಕಾರ್ಯವನ್ನು ಕೈಗೊಂಡಿದ್ದಾರೆ.
ಆರು: ಗಡಿಯ ತುತ್ತತುದಿಯಲ್ಲಿರುವ ಗ್ರಾಮಗಳ ಮಹಿಳೆಯರ ಸಬಲೀಕರಣ
ಬಲಿಷ್ಠ ಮಹಿಳೆ ಎಂದರೆ ಬಲಿಷ್ಠ ಮನೆ, ಬಲಿಷ್ಠ ಮನೆಯೆಂದರೆ ಬಲಿಷ್ಠ ಗ್ರಾಮ, ಬಲಿಷ್ಠ ಗ್ರಾಮವೆಂದರೆ ಬಲಿಷ್ಠ ಜಿಲ್ಲೆ, ಬಲಿಷ್ಠ ಜಿಲ್ಲೆ ಎಂದರೆ ಬಲಿಷ್ಟ ಗಡಿ. ಬಲಿಷ್ಠ ಗಡಿ ಎಂದರೆ ಬಲಿಷ್ಠ ಆಂತರಿಕ ಭದ್ರತೆ.
ಉತ್ತರಾಖಂಡ ರಾಜ್ಯವು ವಲಸೆಹೋಗುವ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಸಮಸ್ಯೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರವು ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆಯನ್ನು ವೃದ್ಧಿಗೊಳಿಸಿ ಮೂಲಕ ಜೀವನ ಮಟ್ಟವನ್ನು ಸುಧಾರಿಸುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಇತರ ರಾಜ್ಯ ಸರಕಾರಗಳು ಇಂತಹ ಕ್ರಮಗಳನ್ನು ತೆಗೆದುಕೊಂಡು, ತಮ್ಮ ಸ್ಥಳೀಯ ಜವಳಿ ಮತ್ತು ನೇಕಾರ ಉದ್ಯಮವನ್ನು ಪುನರುಜ್ಜೀವನಗೊಳಿಸುತ್ತಿದೆ, ಅವುಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು ಪೂರೈಕೆ ಮಾಡುವ ಕಾರ್ಯವನ್ನು ಮಾಡುತ್ತಿದೆ. ಇದಕ್ಕಾಗಿ ಈಶಾನ್ಯ ಭಾಗವನ್ನು ಕೇಂದ್ರೀಕರಿಸಿ ಯೋಜನೆಯನ್ನು ತರಲಾಗುತ್ತಿದೆ.
ಕೇಂದ್ರ ಜವಳಿ ಕಥೆಯು ಅಲ್ಮೋರದಲ್ಲಿ ಮೊದಲ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ ಮಾಡಿದೆ. ಈ ಸೆಂಟರ್ ನೈಸರ್ಗಿಕ ಜವಳಿ ಮಾತಾಡಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಶೋಧನೆಯನ್ನು ಮಾಡಲಿದೆ. ಹಿಮಾಲಯ ಪ್ರದೇಶದಲ್ಲಿ ಲಭ್ಯವಿರುವ ಸಸ್ಯಗಳಿಂದ ಫ್ಯಾಬ್ರಿಕ್ ತಯಾರಿಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ.
ಏಳು: ಮಹಿಳೆಯರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಜವಳಿ ಖಾತೆಯ ಬಳಕೆ
ಮಹಿಳೆ ಕೈಮಗ್ಗದ ಆತ್ಮವಿದ್ದಂತೆ. ಇಲ್ಲಿ ಹಾಕಿ ನೇಕಾರಿಕೆಯ ಭಾಗ ಮಾತ್ರ ಅಲ್ಲ, ಅದರ ಪ್ರತಿಹಂತದಲ್ಲೂ ಕೇಂದ್ರೀಕೃತ ಪಾತ್ರವನ್ನು ನಿಭಾಯಿಸುವವಳು. ವಿವಿಧ ರಾಜ್ಯಗಳ ಇಲಾಖೆಗಳನ್ನು ಮತ್ತು ಖಾಸಗಿ ಗುಂಪುಗಳನ್ನು ಸಂಯೋಜಿಸುವ ಮೂಲಕ ಈ ವಲಯವನ್ನು ಬಲಿಷ್ಠಗೊಳಿಸಬಹುದು ಮತ್ತು ಆ ಮೂಲಕ ಮಹಿಳೆಯನ್ನು ಬಲಿಷ್ಟಗೊಳಿಸಬಹುದು.
ಕೇರಳದಲ್ಲಿ ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆಯು 40ಮಂದಿ ಮಹಿಳೆಯರಿಗೆ ಕೈಮಗ್ಗ ಮತ್ತು ಬ್ಲಾಕ್ ಪ್ರಿಂಟಿಂಗ್ ಬಗ್ಗೆ ತರಬೇತಿಯನ್ನು ನೀಡುತ್ತಿರುವ ಬಗ್ಗೆ ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಹರಿಯಾಣ ಮೂಲದ ಲೇಬಲ್ ಈ ತರಬೇತಿಯನ್ನು ನೀಡುತ್ತಿದೆ.
ಒಂದು ವೇಳೆ ಇರಾನಿಯವರು ವಿವಿಧ ಪ್ರದೇಶಗಳ ನೇಕಾರ ಸಂಬಂಧಗಳನ್ನು ಒಟ್ಟಿಗೆ ತರಲು ಪ್ರಯತ್ನಿಸಿದರೆ ಮತ್ತು ಕರಕುಶಲ ವಲಯದಲ್ಲಿ ಇನ್ನಷ್ಟು ಪ್ರಗತಿಗಳು, ವೈವಿಧ್ಯತೆಗಳು ಕಾಣುವ ಸಾಧ್ಯತೆಯಿದೆ.
ಇದು ನೇಕಾರಿಕೆ ಮಾತ್ರವಲ್ಲದೆ ಸಾಮಾಜಿಕ ಬಾಂಧವ್ಯವನ್ನು ಇನ್ನಷ್ಟು ಬೆಸೆಯಲಿದೆ.
ಎಂಟು: ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಯೋಜನೆಗಳ ಮತ್ತು ಪರಿಹಾರಗಳ ನೇತೃತ್ವ
ಡಿಸೆಂಬರ್ 6ರಂದು ಸ್ಮೃತಿ ಇರಾನಿಯವರು ಸಂಸತ್ತಿನಲ್ಲಿ ತಮ್ಮ ದೃಢವಾದ ನಿಲುವನ್ನು, ಗಟ್ಟಿ ಸ್ವಭಾವವನ್ನು ಪ್ರತಿಬಿಂಬಿಸಿದರು. ಅತ್ಯಾಚಾರವನ್ನು ರಾಜಕೀಯಗೊಳಿಸುವುದು ಸ್ವೀಕಾರಾರ್ಹವಲ್ಲ ಎಂದು ಅವರು ಇಲ್ಲಿ ಹೇಳಿದರು.
ಪ್ರತಿಪಕ್ಷಗಳ ವಿರುದ್ಧ ಸಿಡಿದೆದ್ದ ಅವರು, ಅತ್ಯಾಚಾರವನ್ನು ಕೋಮುವಾದೀಕರಣಗೊಳಿಸುವ ವಿಕೃತಿ ನಿಲ್ಲಬೇಕು ಎಂದು ಪ್ರತಿಪಾದಿಸಿದರು. ಮಹಿಳೆಯರ ದೌರ್ಜನ್ಯದ ವಿರುದ್ಧ ಒಗ್ಗಟ್ಟಿನ ಮತ್ತು ಸ್ಫೂರ್ತಿಯ ಹೋರಾಟದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಮಹಿಳೆಯರ ಸಮಸ್ಯೆಗಳ ಬಗ್ಗೆ ಗಟ್ಟಿಧ್ವನಿಯಲ್ಲಿ ಮಾತನಾಡುವವರಿಗೆ ಮಹಿಳಾ ಪರವಾದ ಯೋಜನೆಗಳ ಮತ್ತು ಪರಿಹಾರಗಳಲ್ಲಿ ಅತ್ಯಂತ ಸಕ್ರಿಯವಾಗಿ ನೇತೃತ್ವ ವಹಿಸುವ ಸಾಮರ್ಥ್ಯವಿದೆ.
ಸ್ಮೃತಿ ಇರಾನಿಯವರು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿಯೇ ನಿಭಾಯಿಸುತ್ತಿದ್ದಾರೆ.
Source : swarajyamag.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.