ದೇಶದ ರಕ್ಷಣೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿರುವ ವೀರ ಸೈನಿಕರು ಪ್ರತಿಯೊಬ್ಬ ಭಾರತೀಯರ ನಿಜವಾದ ಹೀರೋಗಳು. ಈ ದೇಶ ತನ್ನ ಸೈನಿಕರಿಗೆ ಅತ್ಯುನ್ನತವಾದ ಗೌರವವನ್ನು ನೀಡುತ್ತದೆ. ಸೈನಿಕರ ಬಗ್ಗೆ ಕೀಳಾಗಿ ಮಾತನಾಡುವುದು ಈ ದೇಶಕ್ಕೆ ಮಾಡುವ ಅವಮಾನವೂ ಹೌದು. ಆದರೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ತಮ್ಮ ಫಿಲ್ಟರ್ ಇಲ್ಲದ ಬಾಯಿಯಲ್ಲಿ ಭಾರತೀಯ ಸೇನೆಯನ್ನು ಅವಮಾನಿಸಿ ಜನರ ಭಾವನೆಗಳನ್ನು ಕೆರಳಿಸಿದ್ದಾರೆ. ತನ್ನ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಸೈನಿಕರ ಎದೆಯ ಮೇಲಿರುವ ಪದಕಗಳಿಗೆ ಹೋಲಿಸಿ ಅವಮಾನ ಮಾಡಿದ್ದಾರೆ.
“ನನ್ನ ವಿರುದ್ಧ 15 ರಿಂದ 16 ಪ್ರಕರಣಗಳು ಇವೆ. ನೀವು ಸೈನಿಕರನ್ನು ನೋಡಿದರೆ, ಅವರ ಎದೆಯ ಮೇಲೆ ಹಲವಾರು ಪದಕಗಳು ಇರುತ್ತವೆ. ನನಗೆ ಪ್ರತಿ ಪ್ರಕರಣಗಳು ಪದಕ ಇದ್ದಂತೆ” ಎಂದಿದ್ದಾರೆ.
ತನ್ನ ರಾಜಕೀಯ ಕ್ಷೇತ್ರದಲ್ಲಿ ಪ್ರವಾಸವನ್ನು ನಡೆಸಿದ ರಾಹುಲ್ ಗಾಂಧಿಯವರು ಅತಿ ಕೆಟ್ಟ ರೀತಿಯ ಹೋಲಿಕೆಯನ್ನು ಮಾಡಿ ವೀರ ಸೈನಿಕರನ್ನು ಅವಮಾನಿಸಿದ್ದಾರೆ. ಯೋಧರ ಪದಕಗಳಿಗೂ ರಾಹುಲ್ ಗಾಂಧಿಯವರ ಭ್ರಷ್ಟಾಚಾರ ಪ್ರಕರಣಗಳಿಗೂ ಹೋಲಿಕೆ ಮಾಡುವುದನ್ನು ಯಾರು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ತನ್ನ ಮೂರ್ಖತನದಿಂದ ಪ್ರಸಿದ್ಧಿಯನ್ನು ಪಡೆದಿರುವ ರಾಹುಲ್ ಗಾಂಧಿಯವರು ಈ ರೀತಿಯ ಹೋಲಿಕೆಯನ್ನು ಮಾಡಿ ವಿಕೃತಿಯನ್ನು ಮೆರೆದಿದ್ದಾರೆ. ದೇಶವ್ಯಾಪಿಯಾಗಿ ತನ್ನ ವಿರುದ್ಧ ಹೂಡಲಾದ ಪ್ರಕರಣಗಳ ಬಗ್ಗೆ ತಾನೆಂದು ತಲೆಕೆಡಿಸಿಕೊಳ್ಳುವುದಿಲ್ಲ, ಬದಲಾಗಿ ಅವುಗಳನ್ನು ನನಗೆ ಸಿಕ್ಕ ಪದಕಗಳು ಎಂದು ಭಾವಿಸುತ್ತೇನೆ ಎನ್ನುವ ಮೂಲಕ ಮೂರ್ಖತನದ ಹೇಳಿಕೆಯನ್ನು ನೀಡಿದ್ದಾರೆ. ಹೆಚ್ಚು ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದಂತೆ ನಾನು ಹೆಚ್ಚು ಹೆಚ್ಚು ಸಂತೋಷಗೊಳ್ಳುತ್ತೇನೆ ಎಂದು ಹೇಳುವ ಮೂಲಕ ಬಾಲಿಶತನ ಮೆರೆದಿದ್ದಾರೆ.
ಇಷ್ಟು ಮಾತ್ರವಲ್ಲದೆ, “ಅವರು ಹೆಚ್ಚು ಹೆಚ್ಚು ಪ್ರಕರಣಗಳನ್ನು ನನ್ನ ವಿರುದ್ಧ ದಾಖಲು ಮಾಡುತ್ತಿದ್ದಾರೆ ಎಂದರೆ ಅವರು ನನಗೆ ಹೆಚ್ಚು ಹೆಚ್ಚು ಪದಕಗಳನ್ನು ನೀಡುತ್ತಿದ್ದಾರೆ ಎಂದು ಅರ್ಥ” ಎನ್ನುವ ಹೇಳಿಕೆಯನ್ನು ರಾಹುಲ್ ಗಾಂಧಿ ಅವರು ನೀಡಿದ್ದಾರೆ.
ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಬೆಳೆದಿರುವ ರಾಹುಲ್ ಗಾಂಧಿಯವರಿಗೆ ಪ್ರಬುದ್ಧತೆ ಎಂಬುದು ಇನ್ನೂ ಬಂದಿಲ್ಲ. ಈಗಲೂ ಅವರ ಮಾತುಗಳು ಮಕ್ಕಳಂತೆಯೇ ಇದೆ. ಅವರ ಮೂರ್ಖತನದ ಹೇಳಿಕೆಗಳು ಕೆಲವೊಮ್ಮೆ ಹಾಸ್ಯಾಸ್ಪದವಾಗಿ ಕಂಡುಬರುತ್ತವೆ.
ಗಡಿಯಲ್ಲಿ ನಿಂತುಕೊಂಡು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಶತ್ರುಗಳ ವಿರುದ್ಧ ಕಾದಾಡಿ ವೀರ ಯೋಧರು ಪದಕಗಳನ್ನು ಪಡೆದುಕೊಳ್ಳುತ್ತಾರೆ ಎಂಬುದನ್ನು ರಾಹುಲ್ ಗಾಂಧಿಯವರು ಮೊದಲು ಅರ್ಥ ಮಾಡಿಕೊಳ್ಳಬೇಕು. ಪದಕಗಳನ್ನು ಪಡೆಯಲು ಯೋಧರು ಎಷ್ಟು ತ್ಯಾಗ ಬಲಿದಾನವನ್ನು ಮಾಡಿರುತ್ತಾರೆ, ಎಷ್ಟು ಕಷ್ಟ ಸಂಕಷ್ಟಗಳನ್ನು ಪಟ್ಟಿರುತ್ತಾರೆ ಎಂಬುದನ್ನು ಅವರು ಅರಿತುಕೊಳ್ಳಬೇಕು. ತನ್ನ ವಿರುದ್ಧ ಹೂಡಲಾಗಿರುವ ಪ್ರಕರಣಗಳನ್ನು ಅವರು ತ್ಯಾಗ ಬಲಿದಾನಗಳ ಮೂಲಕ ಪಡೆದಿರುವ ಪದಕಗಳಿಗೆ ಹೋಲಿಕೆ ಮಾಡುವುದು ನಿಜಕ್ಕೂ ಈ ದೇಶಕ್ಕೆ ಮಾಡಿದ ಅವಮಾನವಾಗಿದೆ.
ಚೌಕಿದಾರ್ ಚೋರ್ ಹೇ ಎಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹೇಳಿಕೆಯನ್ನು ನೀಡಿ ಸುಪ್ರೀಂಕೋರ್ಟ್ನಿಂದಲೇ ಛೀಮಾರಿಗೆ ಒಳಗಾಗಿದ್ದಾರೆ ರಾಹುಲ್ ಗಾಂಧಿ. ಸುಪ್ರೀಂಕೋರ್ಟ್ ಮೋದಿಯವರನ್ನು ಚೌಕಿದಾರ್ ಚೋರ್ ಹೈ ಎಂದು ಹೇಳಿತ್ತು ಎಂದು ಜನರನ್ನು ನಂಬಿಸಲು ಹೋಗಿ ಅವರು ಛೀಮಾರಿಗೆ ಒಳಗಾಗಿದ್ದರು. ಅವರ ಮೂರ್ಖತನದ ಹೇಳಿಕೆಯನ್ನು ಕಂಡು ಸುಪ್ರೀಂ ಕೋರ್ಟೇ ಅಚ್ಚರಿ ಪಟ್ಟುಕೊಂಡಿತ್ತು. ಹೆಚ್ಚು ಹೆಚ್ಚು ಪ್ರಕರಣಗಳು ದಾಖಲಾದಂತೆ ನಾನು ಹೆಚ್ಚು ಹೆಚ್ಚು ಸಂತೋಷ ಪಡುತ್ತೇನೆ ಎನ್ನುವ ಮೂಲಕ ಅವರು ತಮ್ಮ ರಾಜಕೀಯ ವೈಫಲ್ಯವನ್ನು ತಾವೇ ಸಮರ್ಥಿಸಿಕೊಂಡಿದ್ದಾರೆ.
ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಆರೋಪಿಯಾಗಿರುವ ರಾಹುಲ್ ಗಾಂಧಿಯವರು ಸೈನಿಕರ ಪದಕಗಳಿಗೆ ತಮ್ಮ ಪ್ರಕರಣವನ್ನು ಹೋಲಿಸಿದ್ದು ಸೈನಿಕರಿಗೆ ಮಾಡಿದ ಅವಮಾನ ಮತ್ತು ಬೇಜವಾಬ್ದಾರಿತನದ ಹೇಳಿಕೆಯನ್ನು ಅವರ ಚಿಯರ್ ಲೀಡರ್ಗಳು, ಅವರ ಬೆಂಗಾವಲಾಗಿ ಇರುವ ಕೆಲವು ಮಾಧ್ಯಮಗಳು ಅರ್ಥಮಾಡಿಕೊಳ್ಳಬೇಕಾಗಿದೆ. ಭ್ರಷ್ಟಾಚಾರ, ತೆರಿಗೆ ವಂಚನೆಗಳನ್ನು ಸೈನಿಕರ ಪರಿಶ್ರಮ, ಕಠಿಣ ತರಬೇತಿ, ತ್ಯಾಗಗಳಿಗೆ ಹೋಲಿಕೆ ಮಾಡಿರುವುದು ರಾಹುಲ್ ಗಾಂಧಿಯವರ ಮಾನಸಿಕ ದಿವಾಳಿತನವನ್ನು ಪ್ರತಿಬಿಂಬಿಸುತ್ತದೆ. 49 ವರ್ಷದ ಈ ನಾಯಕ ಅತಿ ಹಿರಿಯ ಪಕ್ಷದ ಭವಿಷ್ಯದ ಪ್ರಧಾನಿ ಅಭ್ಯರ್ಥಿ ಎಂಬುದು ನಿಜಕ್ಕೂ ಅವಮಾನಕಾರಿ ವಿಷಯ.
ರಾಹುಲ್ ಗಾಂಧಿಯವರು ಸಾರ್ವಜನಿಕವಾಗಿ ಹೇಳಿಕೆ ನೀಡುವುದನ್ನು ಆದಷ್ಟು ತಪ್ಪಿಸಿದರೆ ಒಳಿತು, ಇಲ್ಲದೆ ಹೋದರೆ ಸ್ವಲ್ಪ ಜಾಣತನ ಇರುವ ಕಾಂಗ್ರೆಸ್ ನಾಯಕರುಗಳು ಕೂಡ ರಾಹುಲ್ ಗಾಂಧಿಯವರ ಹೇಳಿಕೆಯ ಪರಿಣಾಮದಿಂದಾಗಿ ಜನರ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ.
ಸೈನಿಕರನ್ನು ಈ ದೇಶದ ಹೆಮ್ಮೆ ಎಂದು ಪರಿಗಣಿಸಲಾಗುತ್ತದೆ. ಆದರೆ ರಾಹುಲ್ ಗಾಂಧಿಯವರನ್ನು ಪಾಕಿಸ್ಥಾನದ ಆಸ್ತಿಯೆಂದು ಪರಿಗಣಿಸುವುದು ಇಂದಿನ ಸ್ಥಿತಿಯಲ್ಲಿ ಅನಿವಾರ್ಯವಾಗಿದೆ. ಯಾಕೆಂದರೆ ರಾಹುಲ್ ಗಾಂಧಿಯವರ ಭಾಷಣಗಳನ್ನು ಪಾಕಿಸ್ಥಾನವು ವಿಶ್ವಸಂಸ್ಥೆಗೆ ಭಾರತದ ವಿರುದ್ಧದ ಸಾಕ್ಷ್ಯವಾಗಿ ನೀಡಿದೆ. 370 ನೇ ವಿಧಿ ರದ್ಧತಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರು ಪಾಕಿಸ್ಥಾನದ ಭಾಷೆಯಲ್ಲೇ ಮಾತನಾಡುತ್ತಿದ್ದರು.
ಪ್ರತಿಯೊಂದು ವಿಷಯದಲ್ಲೂ ಸರ್ಕಾರವನ್ನು ಟೀಕಿಸುವ ಭರದಲ್ಲಿ ರಾಹುಲ್ ಗಾಂಧಿಯವರು ಈ ದೇಶದ ಹಿರಿಮೆಗೆ ಹಾನಿಯನ್ನು ಉಂಟು ಮಾಡುತ್ತಿದ್ದಾರೆ. ತಮ್ಮ ತಪ್ಪನ್ನು ಆದಷ್ಟು ಬೇಗ ಅವರು ತಿದ್ದಿಕೊಂಡು ಮುಂದೆ ನಡೆದರೆ ಅವರಿಗೆ ಒಳಿತು, ಇಲ್ಲವಾದರೆ ಮುಂಬರುವ ದಿನಗಳಲ್ಲಿ ಈ ದೇಶ ಅವರಿಗೆ ತಕ್ಕ ಪಾಠವನ್ನು ಕಲಿಸುತ್ತದೆ ಎಂಬುದು ಶತಸಿದ್ಧ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.