ಮಂಗಳೂರು : ವಿಶ್ವ ಹಿಂದು ಪರಿಷತ್ – ಗೋ ಸಂರಕ್ಷಣಾ ಸಮಿತಿಯು ಗೋವಂಶ ಉಳಿಸಲು ಬೃಹತ್ ಜಾಗೃತಿ ಜಾಥಾವನ್ನು ಮಂಗಳೂರಿನಲ್ಲಿ ಜುಲೈ 13 ರಂದು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಡುಪಿ ಹಾಗೂ ದ.ಕ.ಜಿಲ್ಲೆಯ ಗ್ರಾಮಾಂತರ ಹಾಗೂ ನಗರದ ವಿವಿಧ ಸ್ಥಳಗಳಿಂದ ಸುಮಾರು 10 ಸಾವಿರಕ್ಕಿಂತಲೂ ಮಿಕ್ಕಿ ಗೋಪ್ರೇಮಿಗಳು ಆಗಮಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಮಂಗಳೂರು ಮಹಾನಗರದ ಅಂಬೇಡ್ಕರ್ (ಜ್ಯೋತಿ) ವೃತ್ತದಲ್ಲಿ ಸೇರಿ ಅಲ್ಲಿಂದ ಜಾಥಾ ಕೇಂದ್ರ ಮೈದಾನಕ್ಕೆ ತೆರಳಲಿದೆ. ಅಲ್ಲಿ ಜರಗಲಿರುವ ಸಭೆಯನ್ನು ಉದ್ಧೇಶಿಸಿ ಅಖಿಲ ಭಾರತ ಗೋರಕ್ಷಾ ಪ್ರಮುಖ ಮಾನ್ಯ ಶ್ರೀ ಹುಕುಂಚಂದ್ ಸಾವ್ಲಾ ಪ್ರಧಾನ ಭಾಷಣ ಮಾಡಲಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ಪಶು ಸಂಗೋಪನೆಯನ್ನು ನಿರಾತಂಕವಾಗಿ ಸಾಗಿಸಲು ಇರುವ ಅಡ್ಡಿ ಆತಂಕವನ್ನು ಸಮರ್ಥಕವಾಗಿ ನಿವಾರಿಸುವ ದೃಷ್ಟಿಯಿಂದ ಈ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.