ನವದೆಹಲಿ: ಜೈಪುರದ 21 ವರ್ಷದ ಯುವಕ ಮಾಯಾಂಕ್ ಪ್ರತಾಪ್ ಸಿಂಗ್ ಅವರು ಸಣ್ಣ ವಯಸ್ಸಿನಲ್ಲೇ ರಾಜಸ್ಥಾನ ನ್ಯಾಯಾಂಗ ಸೇವೆ 2018 ರ ಪರೀಕ್ಷೆಯನ್ನು ತೇರ್ಗಡೆಯಾಗಿ ಇತಿಹಾಸ ನಿರ್ಮಿಸಿದ್ದಾರೆ, ಈ ಮೂಲಕ ದೇಶದ ಅತ್ಯಂತ ಕಿರಿಯ ನ್ಯಾಯಾಧೀಶರಾಗುವ ಹಾದಿಯಲ್ಲಿದ್ದಾರೆ.
“ಸಮಾಜದಲ್ಲಿ ನ್ಯಾಯಾಧೀಶರಿಗೆ ಸಿಗುತ್ತಿರುವ ಪ್ರಾಮುಖ್ಯತೆ ಮತ್ತು ಗೌರವವನ್ನು ಕಂಡು ನಾನು ಯಾವಾಗಲೂ ನ್ಯಾಯಾಂಗ ಸೇವೆಗಳತ್ತ ಆಕರ್ಷಿತನಾಗಿದ್ದೆ. ರಾಜಸ್ಥಾನ ವಿಶ್ವವಿದ್ಯಾಲಯದ ಐದು ವರ್ಷಗಳ ಎಲ್ಎಲ್ಬಿ ಕೋರ್ಸ್ಗೆ ನಾನು 2014 ರಲ್ಲಿ ಪ್ರವೇಶ ಪಡೆದುಕೊಂಡಿದ್ದೆ, ಈ ವರ್ಷ ಕೋರ್ಸ್ ಅಂತ್ಯವಾಗಿದೆ” ಎಂದು ಸಿಂಗ್ ಹೇಳಿದ್ದಾರೆ.
ನ್ಯಾಯಾಂಗ ಸೇವೆಗಳ ಪರೀಕ್ಷೆಯನ್ನು ಬರೆಯಲು ಇರುವ ವಯಸ್ಸು 23 ವರ್ಷ ಆಗಿತ್ತು, 2019ರಲ್ಲಿ ರಾಜಸ್ಥಾನ ಹೈಕೋರ್ಟ್ ಈ ವಯಸ್ಸನ್ನು 21ಕ್ಕೆ ಇಳಿಸಿತ್ತು.
ಹೈಕೋರ್ಟ್ ತೀರ್ಪು ಅತ್ಯಂತ ಸಮಂಜಸವಾಗಿದೆ, ಇದರಿಂದ ಖಾಲಿ ಇರುವ ನ್ಯಾಯಾಧೀಶ ಹುದ್ದೆಗಳನ್ನು ಭರ್ತಿ ಮಾಡಲು ಸಹಾಯಕವಾಗುತ್ತದೆ ಎಂದು ಸಿಂಗ್ ಹೇಳುತ್ತಾರೆ.
“ಕನಿಷ್ಠ ವಯಸ್ಸನ್ನು ಕಡಿಮೆಗೊಳಿಸಿದ್ದರಿಂದ ಮಾತ್ರ ನಾನು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಯಿತು. ಇಲ್ಲದೇ ಇರುತ್ತಿದ್ದರೆ ನಾನು ಅರ್ಹನಾಗಿರುತ್ತಿರಲಿಲ್ಲ. ವಯಸ್ಸಿನ ಇಳಿಕೆ ನನಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ನನ್ನ ವೃತ್ತಿಜೀವನದಲ್ಲಿ ನಾನು ಹೆಚ್ಚು ಕಲಿಯಲು ಮತ್ತು ಹೆಚ್ಚಿನ ಕೆಲಸ ಮಾಡಲು ಮತ್ತು ಹೆಚ್ಚು ಸೇವೆ ಮಾಡಲು ಹೆಚ್ಚು ಸಮಯವನ್ನು ಪಡೆದುಕೊಂಡಿದ್ದೇನೆ. ನಾನು ಇಷ್ಟು ಚಿಕ್ಕ ವಯಸ್ಸಿನಲ್ಲಿ ನ್ಯಾಯಾಂಗವನ್ನು ಸೇರುತ್ತಿದ್ದೇನೆ “ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.