ನವದೆಹಲಿ: ತನ್ನ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರವು, ಟೆಸ್ಲಾ ಮೋಟಾರ್ಸ್ ಮತ್ತು ಗ್ಲಾಕ್ಸೊ ಸ್ಮಿತ್ಕ್ಲೈನ್ನಂತಹ 324 ಅಂತಾರಾಷ್ಟ್ರೀಯ ಉತ್ಪಾದಕರಿಗೆ ಭಾರತದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ರೂಪಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಪ್ರಸ್ತುತ ನಡೆಯುತ್ತಿರುವ ಯುಎಸ್-ಚೀನಾ ವ್ಯಾಪಾರ ಗುದ್ದಾಟದ ಲಾಭವನ್ನು ಪಡೆಯಲು ಸರ್ಕಾರ ಬಯಸಿದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ ಮತ್ತು ಸರ್ಕಾರದ ಹೂಡಿಕೆ ಉತ್ತೇಜನ ಸಂಸ್ಥೆ ಇನ್ವೆಸ್ಟ್ ಇಂಡಿಯಾ ರಚಿಸಿದ ಯೋಜನೆಯ ಕರಡಿನ ಪ್ರಕಾರ, ಈ ಕಂಪನಿಗಳ ಭೂಮಿ, ವಿದ್ಯುತ್ ಹಂಚಿಕೆ, ಪೂರೈಕೆ, ರಸ್ತೆ, ನೀರು ಸೇರಿದಂತೆ ಎಲ್ಲಾ ಪ್ರಮುಖ ಅವಶ್ಯಕತೆನ್ನೂ ಸರ್ಕಾರವೇ ನೋಡಿಕೊಳ್ಳಲಿದೆ.
ಲ್ಯಾಂಡ್ ಬ್ಯಾಂಕ್ ಅನ್ನು ಸ್ಥಾಪಿಸಲು ಯೋಜನೆಯು ಪ್ರಸ್ತಾಪಿಸಿದೆ, ಅದರ ಮೂಲಕ ಸರ್ಕಾರವು ಈ ಕಂಪನಿಗಳಿಗೆ ಕೈಗಾರಿಕಾ ಕ್ಲಸ್ಟರ್ಗಳಲ್ಲಿ ರೆಡಿ ಟು ಮೂವ್ ಇನ್ ಲ್ಯಾಂಡ್ ಪಾರ್ಸೆಲ್( ಸರ್ವ ಸನ್ನದ್ಧವಾದ ಭೂಮಿ)ಯನ್ನು ನೀಡುತ್ತದೆ ಮತ್ತು ಸ್ಥಳ ನಿರ್ದಿಷ್ಟ ಪ್ರೋತ್ಸಾಹಗಳನ್ನು ಕೂಡ ನೀಡುತ್ತದೆ.
ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂ ಕ್ಷೇತ್ರದಲ್ಲಿ, ಹೊಂದಿಕೊಳ್ಳುವ ಉದ್ಯೋಗ ನಿಯಮಗಳು ಮತ್ತು ಉತ್ಪಾದನೆಯಲ್ಲಿ ಮೌಲ್ಯವರ್ಧನೆಗೆ ಸಂಬಂಧಿಸಿದ ಪ್ರೋತ್ಸಾಹಗಳನ್ನು ಕೂಟ ಈ ಕಂಪನಿಗಳನ್ನು ಆಕರ್ಷಿಸಲು ಬಳಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.