“ಖಾಲಿ ಪಾತ್ರೆ ಹೆಚ್ಚು ಸದ್ದು ಮಾಡುತ್ತದೆ” ಎಂಬ ನಾಣ್ಣುಡಿ ಇದೆ. ಅಜ್ಞಾನಿ ಮನುಷ್ಯ ಹೆಚ್ಚು ಅರಚಾಡುತ್ತಾನೆ ಎಂಬುದನ್ನು ಪರೋಕ್ಷವಾಗಿ ಹೇಳಲು ಈ ನಾಣ್ಣುಡಿಯನ್ನು ಬಳಸಲಾಗುತ್ತದೆ. ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಧೋರಣೆ, ಪ್ರತಿಭಟನೆ, ಗಲಾಟೆ, ಗದ್ದಲಗಳನ್ನು ನೋಡಿದಾಗ ಈ ಮಾತು ಅವರಿಗೆ ಹೆಚ್ಚು ಅನ್ವಯವಾಗುತ್ತದೆ ಎಂದು ಅನಿಸುತ್ತದೆ. ವಿದ್ಯಾರ್ಥಿಗಳು ಎಂದು ಕರೆಯಲ್ಪಡುವ ಜನರು, ರಾಷ್ಟ್ರ ರಾಜಧಾನಿಯಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ಅದರಲ್ಲೂ ವಿಶ್ವವಿದ್ಯಾಲಯದ ಆವರಣವಂತು ಪ್ರತಿಭಟನೆ, ಗದ್ದಲ, ಗಲಾಟೆಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಈ ವಿದ್ಯಾರ್ಥಿಗಳು ಘೋಷಣೆ ಕೂಗುವುದಕ್ಕೆ, ಗದ್ದಲವೆಬ್ಬಿಸುವುದಕ್ಕೆ ವಿಶೇಷ ಕೋರ್ಸುಗಳನ್ನು ಮಾಡುತ್ತಿದ್ದಾರೆಯೇ ಎಂಬ ಅನುಮಾನವೂ ಕಾಡುತ್ತದೆ.
ಜೆಎನ್ಯುನಲ್ಲಿನ ವಿದ್ಯಾರ್ಥಿಗಳ ಶಿಕ್ಷಣವನ್ನು ಭಾರತೀಯ ತೆರಿಗೆದಾರರ ಹಣದಿಂದ ಸಬ್ಸಿಡೀಕರಣಗೊಳಿಸಲಾಗಿದೆ ಎಂಬುದು ರಹಸ್ಯವಾಗಿರುವ ವಿಷಯವಲ್ಲ. ಜೆಎನ್ಯುನಲ್ಲಿನ ಪಿಎಚ್ಡಿ ‘ವಿದ್ವಾಂಸರಿಗೆ’ ಅವರ ಸಂಶೋಧನೆಗೆ ಅನುಕೂಲವಾಗುವಂತೆ ಸರ್ಕಾರವು ತಿಂಗಳಿಗೆ 28,000 ರೂಪಾಯಿ ಹಣಕಾಸು ನೆರವು ನೀಡುತ್ತಿದೆ. ಇಲ್ಲಿನ ಸಂಶೋಧನೆಯ ವಿಷಯಗಳು ಇತ್ತೀಚಿನ ದಿನಗಳಲ್ಲಿ ‘ಸವಿತಾ ಬಾಭಿ’ ಯಿಂದ ಹಿಡಿದು ‘ಮೊಘಲ್ ಭಾರತದಲ್ಲಿ ಲೈಂಗಿಕ ಸಂಬಂಧಗಳು’ ಎಂಬ ವಿಷಯದವರೆಗೂ ವ್ಯಾಪಿಸಿದೆ. ‘ದೆಹಲಿಯ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ವಿರಾಮ-ಸಮಯದ ಚಟುವಟಿಕೆಗಳು’ ಎಂಬ ವಿಷಯದ ಬಗ್ಗೆಯೂ ಇಲ್ಲಿ ಸಂಶೋಧನೆಗಳು ನಡೆದಿವೆ. ಈ ಸಂಶೋಧನೆಗಳು ತೆರಿಗೆದಾರರ ಹಣವನ್ನು ಬೇಕಾಬಿಟ್ಟಿಯಾಗಿ ಪೋಲು ಮಾಡುತ್ತಿವೆ ಎಂಬುದನ್ನು ಬಿಟ್ಟರೆ ಮತ್ಯಾವುದೇ ಪ್ರಭಾವ, ಪರಿಣಾಮಗಳನ್ನೂ ಉಂಟು ಮಾಡುತ್ತಿಲ್ಲ.
ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದವರು, ಕಲಿಯುವ ಅದಮ್ಯ ಆಸಕ್ತಿಯನ್ನು ಹೊಂದಿರುವವರು ತಮ್ಮ ವಿದ್ಯಾಭ್ಯಾಸಕ್ಕೆ ತಾವೇ ಹಣಕಾಸು ಹೊಂದಿಸುತ್ತಾರೆ. ಇದಕ್ಕಾಗಿ ಅರೆ ಕಾಲಿಕವಾಗಿ ಕೆಲಸ ಮಾಡುತ್ತಾರೆ, ಮಕ್ಕಳಿಗೆ ಟ್ಯೂಷನ್ ನೀಡುತ್ತಾರೆ. ಒಟ್ಟಾರೆಯಾಗಿ ತಮ್ಮ ಪೋಷಕರಿಗೆ ಹೊರೆಯಾಗದಂತೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ. ಆದರೆ ಜೆಎನ್ಯು ವಿದ್ಯಾರ್ಥಿಗಳು ಇಂತಹ ಕಾರ್ಯಗಳನ್ನು ಮಾಡಲು ಆಸಕ್ತಿ ಹೊಂದಿಲ್ಲ. ಭಾರತೀಯ ತೆರಿಗೆದಾರರ ಹಣದಲ್ಲಿ ಉಚಿತವಾಗಿಯೇ ಶಿಕ್ಷಣ ಸಿಗಬೇಕಾದರೆ ದುಡಿಯುವುದು ಯಾಕಲ್ಲವೇ? ಬೇರೆ ವಿಶ್ವವಿದ್ಯಾಲಯಗಳಲ್ಲಿನ ಶುಲ್ಕವನ್ನು ನೋಡಿದರೆ, ಜೆಎನ್ಯುನಲ್ಲಿ ಶುಲ್ಕ ತೀರಾ ಕಡಿಮೆ. ಶುಲ್ಕವನ್ನು ಪರಿಷ್ಕರಣೆಗೊಳಿಸದೆ ಜೆಎನ್ಯು ಆಡಳಿತ ಮಂಡಳಿ ತಪ್ಪೆಸಗಿತ್ತು. ಬಿಟ್ಟಿಯಾಗಿ ಸಿಗುವ ಸೌಲಭ್ಯಗಳು ಅಲ್ಲಿನ ವಿದ್ಯಾರ್ಥಿಗಳ ತಲೆ ಕೆಡಿಸಿತ್ತು. ಈಗ ಶುಲ್ಕ ಪರಿಷ್ಕರಣೆಯಾದಾಗ ತಮ್ಮ ರಕ್ತಗತ ಅಭ್ಯಾಸದಂತೆ ವಿದ್ಯಾರ್ಥಿಗಳು ಗದ್ದಲವೆಬ್ಬಿಸುತ್ತಿದ್ದಾರೆ.
ಆದರೆ ಭಾರತದ ಡಿಜಿಟಲ್ ಕ್ರಾಂತಿಯು ಕಟ್ಟ ಕಡೆಯ ಮನುಷ್ಯನಿಗೂ ಪ್ರಜಾಪ್ರಭುತ್ವವನ್ನು ತಲುಪಿಸಿದೆ. ಜೆಎನ್ಯು ವಿದ್ಯಾರ್ಥಿಗಳ ಪ್ರತಿಯೊಂದು ಮೂರ್ಖ ಪ್ರದರ್ಶನಕ್ಕೂ, ಕಷ್ಟಪಟ್ಟು ದುಡಿಯುವ ಅಸಂಖ್ಯಾತ ಭಾರತೀಯರ ಮನಸ್ಸಿನಲ್ಲಿ ಕೋಲಾಹಲವೆಬ್ಬಿದೆ, ವಿದ್ಯಾರ್ಥಿಗಳ ಗೂಂಡಾಗಿರಿಯ ಸಿದ್ಧಾಂತವನ್ನು ಭಾರತೀಯರು ಖಂಡಿಸುತ್ತಿದ್ದಾರೆ. ಕಷ್ಟಪಟ್ಟು ಕಾಲೇಜಿಗೆ ತೆರಳಿ, ದುಡಿದು ಶುಲ್ಕ ಪಾವತಿ ಮಾಡಿದವರು ಇಂದು ಜೆಎನ್ಯು ವಿದ್ಯಾರ್ಥಿಗಳಿಗೆ ಕೆಲವೊಂದು ಉಪಯುಕ್ತವಾದ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಜೆಎನ್ಯು ವಿದ್ಯಾರ್ಥಿಗಳಿಗೆ ಕಷ್ಟ ಪಟ್ಟು ದುಡಿಯುವ ಹುಮ್ಮಸ್ಸನ್ನು ನೀಡುವ ಸಾವಿರಾರು ಕಥೆಗಳನ್ನು ಟ್ವಿಟರಿಗರು ಮುಂದಿಡುತ್ತಿದ್ದಾರೆ.
ಕೆಲವೊಂದು ಟ್ವಿಟ್ಗಳು ಇಲ್ಲಿವೆ:
Back in my Engg days, I was suspended for a semester (for doing netagiri). When I returned, I stopped taking money from my parents (out of guilt), enrolled on digitalpointforum and started writing tech content. I became one of the most sought after tech writers in India soon.
— Atul Mishra (@TheAtulMishra) November 20, 2019
I assembled gaming PCs, wrote assignments, taught subjects while doing engineering to take out my expenses.
My younger brother topped Univ, earned scholarships and went to Germany for Masters without being a burden on the parents.
You can either find a way or make excuses.
— पुलकित वशिष्ठ 🇮🇳 (@Modern_Monk719) November 19, 2019
Had No reason but an Inner Call..being a daughter of a single working mom,
started my own Business in 11th grade. Gave tuitions, interned in ToI as a paid contributor.. Still continuing my own Business.. And that shall be my future.
Paying 1L as my semester fee..whenever I can.— Aastha Varma (@AasthaVarma) November 19, 2019
ಸರ್ಕಾರವು ಜೆಎನ್ಯುಗೆ ವಾರ್ಷಿಕ ರೂ.556 ಕೋಟಿಗಳನ್ನು ವ್ಯಯ ಮಾಡುತ್ತದೆ. ವಿದ್ಯಾರ್ಥಿಗಳು ಅತ್ಯಂತ ಕಡಿಮೆ ಖರ್ಚಿನಲ್ಲಿ ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಕೂಡ ಅಲ್ಲಿನ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ಆದರೆ ಭಯೋತ್ಪಾದಕರಿಗೆ ಬೆಂಬಲ ನೀಡುವ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುವುದು, ಭಾವನೆ ಕೆರಳಿಸುವಂತಹ ಘೋಷಣೆಗಳನ್ನು ಕೂಗುವುದು, ಪ್ರತಿಭಟನೆ, ಗಲಾಟೆ ನಡೆಸುವುದು ನಿಜಕ್ಕೂ ಜೆಎನ್ಯುವಿನ ನಿತ್ಯ ಕಾರ್ಯವಾಗಿ ಪರಿಣಮಿಸಿದೆ. ಇದನ್ನೆಲ್ಲಾ ಬಿಟ್ಟು ಅಲ್ಲಿನ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ, ಭವ್ಯ ಭಾರತದ ನಿರ್ಮಾಣಕ್ಕೆ ಹೇಗೆ ಕೊಡುಗೆ ನೀಡಬೇಕು ಎಂಬತ್ತು ಯೋಚಿಸುವುದು ಅವರಿಗೆಯೇ ಒಳಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.