ವಾಷಿಂಗ್ಟನ್: ಅಮೆರಿಕಾ ಆಡಳಿತವು ಭಾರತಕ್ಕೆ 1 ಬಿಲಿಯನ್ ಡಾಲರ್ ಮೌಲ್ಯದ ನೌಕಾ ಬಂದೂಕುಗಳನ್ನು ಮಾರಾಟ ಮಾಡಲು ಅನುಮೋದನೆಯನ್ನು ನೀಡಿದೆ. ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ನೌಕಾ ಬಂದೂಕುಗಳು ಮಹತ್ವದ ಪಾತ್ರವನ್ನು ನಿಭಾಯಿಸಲಿದೆ. ಈ ನೌಕಾ ಬಂದೂಕುಗಳನ್ನು ಭಾರತವು ಶತ್ರುಗಳ ಯುದ್ಧನೌಕೆ, ಆ್ಯಂಟಿ ಏರ್ಕ್ರಾಪ್ಟ್ ಮತ್ತು ತೀರ ಬಾಂಬ್ ಸ್ಪೋಟಗಳ ವಿರುದ್ಧ ಬಳಕೆ ಮಾಡಲಿದೆ.
13 ಎಂಕೆ -45 5 ಇಂಚಿನ / 62 ಕ್ಯಾಲಿಬರ್ (ಎಂಒಡಿ 4) ನೌಕಾ ಬಂದೂಕುಗಳು ಮತ್ತು ಸಂಬಂಧಿತ ಉಪಕರಣಗಳ ಮಾರಾಟವು 1.0210 ಬಿಲಿಯನ್ ಯುಎಸ್ ಡಾಲರ್ಗಳಷ್ಟು ಅಂದಾಜು ವೆಚ್ಚದಲ್ಲಿದೆ ಎಂದು ಅಮೆರಿಕಾದ ಡಿಫೆನ್ಸ್ ಸೆಕ್ಯೂರಿಟಿ ಕಾರ್ಪೋರೇಶನ್ ಏಜೆನ್ಸಿ ಮಂಗಳವಾರ ಯುಎಸ್ ಕಾಂಗ್ರೆಸ್ಗೆ ನೀಡಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಬಿಎಇ ಸಿಸ್ಟಮ್ಸ್ ಲ್ಯಾಂಡ್ ಮತ್ತು ಆರ್ಮಮೆಂಟ್ಸ್ ಈ ಬಂದೂಕುಗಳನ್ನು ತಯಾರಿಸಲಿದ್ದು, ಉದ್ದೇಶಿತ ಮಾರಾಟವು ಶತ್ರುಗಳ ಶಸ್ತ್ರಾಸ್ತ್ರ ವ್ಯವಸ್ಥೆಗಳಿಂದ ಬರುವ ಪ್ರಸ್ತುತ ಮತ್ತು ಭವಿಷ್ಯದ ಬೆದರಿಕೆಗಳನ್ನು ಎದುರಿಸುವ ಭಾರತದ ಸಾಮರ್ಥ್ಯವನ್ನು ಸುಧಾರಿಸುತ್ತದೆ ಎಂದು ಅಧಿಸೂಚನೆ ತಿಳಿಸಿದೆ.
“ಎಂಕೆ -45 ಗನ್ ಸಿಸ್ಟಮ್ ಯುಎಸ್ ಮತ್ತು ಇತರ ಮಿತ್ರ ಪಡೆಗಳೊಂದಿಗೆ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವಾಗ ಮೇಲ್ಮೈ ವಿರೋಧಿ ಯುದ್ಧ ಮತ್ತು ವಾಯು-ವಿರೋಧಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯವನ್ನು ಒದಗಿಸುತ್ತದೆ” ಎಂದು ಅಧಿಸೂಚನೆ ತಿಳಿಸಿದೆ.
ಈ ಬಂದೂಕು ಭಾರತದ ಸಾಮರ್ಥ್ಯವನ್ನು ವರ್ಧಿಸಲಿದೆ, ಇದು ಪ್ರಾದೇಶಿಕ ಬೆದರಿಕೆಗಳನ್ನು ಎದುರಿಸಲು ನೌಕಾಪಡೆಗೆ ಹೆಚ್ಚಿನ ಬಲವನ್ನು ನೀಡುತ್ತದೆ ಮತ್ತು ರಕ್ಷಣೆಯನ್ನು ಬಲಪಡಿಸುತ್ತದೆ.
ಯುಎಸ್ ತನ್ನ ನೌಕಾ ಬಂದೂಕುಗಳ ಇತ್ತೀಚಿನ ಆವೃತ್ತಿಯನ್ನು (ಮಾಡ್ 4) ಮಾರಾಟ ಮಾಡಲು ನಿರ್ಧರಿಸಿದ ಕೆಲವೇ ದೇಶಗಳಲ್ಲಿ ಭಾರತವೂ ಒಂದು ಎಂಬುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.