ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿಗಳು ಸಹಜವಾಗಿದೆ, ಆಗಸ್ಟ್ 5 ರಿಂದ ಅಲ್ಲಿ ಪೊಲೀಸ್ ಫೈರಿಂಗ್ಗೆ ಒಬ್ಬರೇ ಒಬ್ಬರು ಬಲಿಯಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ರಾಜ್ಯ ಸಭೆಗೆ ಮಾಹಿತಿ ನೀಡಿದ್ದಾರೆ.
“ಈ ಸದನದಲ್ಲಿ ಕೂತಿರುವವರು ಜಮ್ಮು-ಕಾಶ್ಮೀರದಲ್ಲಿ ರಕ್ತಪಾತವನ್ನು ನಿರೀಕ್ಷೆ ಮಾಡಿದ್ದರು, ಆದರೆ ಅಲ್ಲಿ ಪೊಲೀಸ್ ಫೈರಿಂಗ್ಗೆ ಒಬ್ಬನೇ ಒಬ್ಬ ಬಲಿಯಾಗಿಲ್ಲ ಮತ್ತು ಕಲ್ಲು ತೂರಾಟದ ಪ್ರಕರಣಗಳೂ ಕಡಿಮೆಯಾಗಿವೆ ಎಂದು ನಾನು ಅತೀವ ಸಂತೋಷದಿಂದ ಹೇಳುತ್ತೇನೆ” ಎಂದಿದ್ದಾರೆ.
“ಜಮ್ಮು-ಕಾಶ್ಮೀರದಲ್ಲಿ ತಳಮಟ್ಟದಲ್ಲಿ ಸಹಜ ಸನ್ನಿವೇಶ ಇದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ದೈನಂದಿನ ಜನಜೀವನ ಹಿಂದಿನಂತೆ ಸಹಜತೆಗೆ ಮರಳಿದೆ. ಸಾರಿಗೆಯೂ ಸಹಜ ಸ್ಥಿತಿಗೆ ಮರಳಿದೆ. ಈಗ ಅಲ್ಲಿ ಎಲ್ಲಾ ವಿಧದ ಸಾರಿಗೆಯೂ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಲ್ಯಾಂಡ್ಲೈನ್ ಮತ್ತು ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳು ಕಾರ್ಯಾರಂಭ ಮಾಡುತ್ತಿವೆ” ಎಂದು ಶಾ ಹೇಳಿದ್ದಾರೆ.
ಶಿಕ್ಷಣದ ಸನ್ನಿವೇಶವೂ ಅಲ್ಲಿ ಸಹಜವಾಗಿದೆ ಎಂದ ಅವರು, “ಇತ್ತೀಚಿಗೆ ನಡೆದ ಬೋರ್ಡ್ ಎಕ್ಸಾಮಿನೇಷನಿನಲ್ಲಿ ಶೇ. 98 ರಷ್ಟು ಹಾಜರಾತಿ ಕಂಡು ಬಂದಿದೆ, ಹೀಗಾಗಿ ಅಲ್ಲಿ ಶಿಕ್ಷಣದಲ್ಲಿ ಕೊರತೆ ಇಲ್ಲ ಎಂಬುದು ಸ್ಪಷ್ಟವಾಗಿದೆ” ಎಂದಿದ್ದಾರೆ.
“ಜಮ್ಮು-ಕಾಶ್ಮೀರದ ಎಲ್ಲಾ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದ ಔಷಧಿಗಳು ಲಭ್ಯವಿದೆ. ಅಲ್ಲಿ ಔಷಧಿಗಳನ್ನು ಪೂರೈಸುವ ಮೊಬೈಲ್ ವ್ಯಾನ್ಗಳನ್ನು ಸಹ ಪ್ರಾರಂಭಿಸಲಾಗಿದೆ. ಎಲ್ಲಿಯೂ ಯಾವುದೇ ಸಮಸ್ಯೆಗಳಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.