“ಮೇಕ್ ಇನ್ ಇಂಡಿಯಾ” ಕಾರ್ಯಕ್ರಮದಿಂದಾಗಿ ನೋಯ್ಡಾ / ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ ಮೊಬೈಲ್ ಉತ್ಪಾದನಾ ಚಟುವಟಿಕೆ ವೇಗ ಪಡೆದುಕೊಂಡಿದೆ. 2025ರ ವೇಳೆಗೆ ನಮ್ಮ ದೇಶವು ವಾರ್ಷಿಕವಾಗಿ ಉತ್ಪಾದಿಸುವ ಅಂದಾಜು 100 ಕೋಟಿ ಮೊಬೈಲ್ ಫೋನ್ಗಳ ಪೈಕಿ ಈ ಪ್ರದೇಶವು ಶೇಕಡಾ 30 ರಷ್ಟು ಮೊಬೈಲ್ ಫೋನುಗಳನ್ನು ಉತ್ಪಾದಿಸಲು ಸಜ್ಜಾಗಿದೆ.
ಸರಿಸುಮಾರು 80 ಮೊಬೈಲ್ ಉತ್ಪಾದನಾ ಕಾರ್ಖಾನೆಗಳು ಈ ಪ್ರದೇಶದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಅಂದಾಜು 50,000 ಜನರಿಗೆ ಉದ್ಯೋಗವನ್ನು ನೀಡಿದೆ ಎಂದು ಮೊಬೈಲ್ ಉದ್ಯಮ ಸಂಸ್ಥೆ ಐಸಿಇಎ ತಿಳಿಸಿದೆ.
ಈ 80 ಘಟಕಗಳು ಮೊಬೈಲ್ ಹ್ಯಾಂಡ್ಸೆಟ್ಗಳನ್ನು ಮತ್ತು ಚಾರ್ಜರ್ಗಳು / ಅಡಾಪ್ಟರುಗಳು, ಬ್ಯಾಟರಿ ಪ್ಯಾಕ್ಗಳು ಮುಂತಾದ ಹ್ಯಾಂಡ್ಸೆಟ್ಗಳ ಬಿಡಿಭಾಗಗಳನ್ನು ಉತ್ಪಾದಿಸುತ್ತವೆ.
2018-19ರ ಅವಧಿಯಲ್ಲಿ, ಭಾರತವು 29 ಕೋಟಿ ಯುನಿಟ್ಗಳ ಮೊಬೈಲ್ ಫೋನ್ ಉತ್ಪಾದನೆಯನ್ನು ಕಂಡಿದೆ ಮತ್ತು ಹೆಚ್ಚಿನ ಉತ್ಪಾದನೆಯು ನೋಯ್ಡಾ-ಗ್ರೇಟರ್ ನೋಯ್ಡಾ ಪ್ರದೇಶದಿಂದ ಬಂದಿದೆ ಎಂಬುದು ಗಮನಾರ್ಹ ವಿಷಯವಾಗಿದೆ.
ಉದಾಹರಣೆಗೆ, ಕಳೆದ ವರ್ಷ ಸೆಕ್ಟರ್ 81 ರಲ್ಲಿ ತನ್ನ ಅತಿದೊಡ್ಡ ಮೊಬೈಲ್ ಕಾರ್ಖಾನೆಯನ್ನು ತೆರೆದ ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್, 2020 ರ ವೇಳೆಗೆ ನೋಯ್ಡಾದಲ್ಲಿ ತನ್ನ ಮೊಬೈಲ್ ಫೋನ್ ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ 6.8 ಕೋಟಿಯಿಂದ 12 ಕೋಟಿ ಯೂನಿಟ್ಗೆ ದ್ವಿಗುಣಗೊಳಿಸಲು ಸಜ್ಜಾಗಿದೆ.
ಗ್ರೇಟರ್ ನೋಯ್ಡಾದ ಕಾಸ್ನಾ ಮೂಲದ ಕಾರ್ಖಾನೆಯಲ್ಲಿ ಪ್ರಸ್ತುತ ವಾರ್ಷಿಕವಾಗಿ 5 ಕೋಟಿ ಸ್ಮಾರ್ಟ್ಫೋನ್ಗಳನ್ನು ತಯಾರಿಸುತ್ತಿರುವ ಚೀನಾದ ಸ್ಮಾರ್ಟ್ಫೋನ್ ತಯಾರಕ ಒಪ್ಪೋ(OPPO) ಮುಂದಿನ ವರ್ಷದ ವೇಳೆಗೆ ಸಾಮರ್ಥ್ಯವನ್ನು 10 ಕೋಟಿ ಯೂನಿಟ್ಗಳಿಗೆ ದ್ವಿಗುಣಗೊಳಿಸುವ ಗುರಿ ಹೊಂದಿದೆ ಎಂದು ಒಪಿಪಿಒ ಇಂಡಿಯಾದ ಉತ್ಪನ್ನ ಮತ್ತು ಮಾರುಕಟ್ಟೆ ಮುಖ್ಯಸ್ಥ ಸುಮಿತ್ ವಾಲಿಯಾ ಹೇಳಿದ್ದಾರೆ.
ಚೀನಾದ ಇನ್ನೊಂದು ದಿಗ್ಗಜ ಸಂಸ್ಥೆ ವಿವೊ, ಈ ತಿಂಗಳ ಆರಂಭದಲ್ಲಿ ಭಾರತದಲ್ಲಿ ತನ್ನ ಅಂದಾಜು 7,500 ಕೋಟಿ ರೂ.ಗಳ ಹೂಡಿಕೆ ಯೋಜನೆಯ ಭಾಗವಾಗಿ ಗ್ರೇಟರ್ ನೋಯ್ಡಾದಲ್ಲಿ ಹೊಸ ಉತ್ಪಾದನಾ ಸೌಲಭ್ಯವನ್ನು ಹೊರತಂದಿದ್ದು, ಪ್ರಸ್ತುತ ಉತ್ಪಾದಿಸುವ 2.5 ಕೋಟಿಯಿಂದ ವಾರ್ಷಿಕವಾಗಿ 3.3 ಕೋಟಿ ಡಿವೈಸ್ಗಳನ್ನು ಉತ್ಪಾದಿಸಲು ಸಿದ್ಧವಾಗಿದೆ.
“ನೋಯ್ಡಾ / ಗ್ರೇಟರ್ ನೋಯ್ಡಾ / ವೈಇಡಬ್ಲ್ಯೂ (ಯಮುನಾ ಎಕ್ಸ್ಪ್ರೆಸ್ವೇ) ಮೊಬೈಲ್ ಫೋನ್ ಮತ್ತು ಘಟಕ ಉತ್ಪಾದನೆಯ ಜಾಗತಿಕ ಕೇಂದ್ರವಾಗುವ ಹಾದಿಯಲ್ಲಿದೆ” ಎಂದು ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ಐಸಿಇಎ) ಅಧ್ಯಕ್ಷ ಪಂಕಜ್ ಮೊಹಿಂದ್ರೂ ತಿಳಿಸಿದ್ದಾರೆ.
“2025 ರ ವೇಳೆಗೆ ಉತ್ಪಾದಿಸಬೇಕಾದ ಉದ್ದೇಶಿತ 190 ಬಿಲಿಯನ್ ಮೌಲ್ಯದ ಉತ್ಪಾದನೆ ಮತ್ತು 100 ಕೋಟಿ ಪ್ರಮಾಣದ ಫೋನ್ಗಳಲ್ಲಿ, ಕನಿಷ್ಠ ಶೇ.30ರಷ್ಟನ್ನು ಇಲ್ಲಿ ತಯಾರಿಸಲಾಗುತ್ತದೆ ಎಂದು ನಾವು ಅಂದಾಜು ಮಾಡಿದ್ದೇವೆ. ಪ್ರಸ್ತುತ ಸಂಖ್ಯೆಗಳಿಂದ ಸುಮಾರು 57 ಬಿಲಿಯನ್ ಫೋನುಗಳ ಉತ್ಪಾದನೆಯು ನಾಲ್ಕು ಪಟ್ಟು ಹೆಚ್ಚಾಗಿದೆ” ಎಂದು ಮೊಹಿಂದ್ರೂ ಒತ್ತಿಹೇಳಿದ್ದಾರೆ.
“4-5 ವರ್ಷಗಳಲ್ಲಿ ಕನಿಷ್ಠ 20-25 ಶತಕೋಟಿ ಡಾಲರ್ಗಳಷ್ಟು ಅಭಿವೃದ್ಧಿ ಹೊಂದುತ್ತಿರುವ ಒಂದು ಘಟಕ ಮತ್ತು ಸಬ್-ಅಸೆಂಬ್ಲಿ ಉದ್ಯಮವನ್ನು ನಾವು ಇಲ್ಲಿ ಅಂದಾಜು ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.
100 ಕೋಟಿ ಹ್ಯಾಂಡ್ಸೆಟ್ಗಳಲ್ಲಿ, ಸುಮಾರು 60 ಕೋಟಿ ರಫ್ತು ಮಾಡುವ ನಿರೀಕ್ಷೆಯಿದೆ, ಎಲೆಕ್ಟ್ರಾನಿಕ್ಸ್ನ 2019 ರ ರಾಷ್ಟ್ರೀಯ ನೀತಿಯ ಪ್ರಕಾರ, 2025 ರ ವೇಳೆಗೆ ಸುಮಾರು 28 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಇಎಸ್ಡಿಎಂ (ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ) ಯ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ದೇಶೀಯ ಉತ್ಪಾದನೆ ಮತ್ತು ರಫ್ತು ಉತ್ತೇಜಿಸುವ ಗುರಿಯನ್ನು ಹೊಂದಲಾಗಿದೆ.
ಭಾರತವು ಪ್ರಸ್ತುತ 450 ಮಿಲಿಯನ್ ಸ್ಮಾರ್ಟ್ಫೋನ್ ಬಳಕೆದಾರರನ್ನು ಹೊಂದಿದ್ದು, 2022 ರ ವೇಳೆಗೆ ಈ ಸಂಖ್ಯೆ 859 ಮಿಲಿಯನ್ ತಲುಪುವ ನಿರೀಕ್ಷೆಯಿದೆ ಎಂದು ಇತ್ತೀಚಿನ ಅಸ್ಸೋಚಾಮ್-ಪಿಡಬ್ಲ್ಯೂಸಿ ಜಂಟಿ ಅಧ್ಯಯನದ ವರದಿ ತಿಳಿಸಿದೆ.
2014ರಲ್ಲಿ ಭಾರತವು ಕೇವಲ ಎರಡು ಮೊಬೈಲ್ ಫೋನ್ ಉತ್ಪಾದನಾ ಘಟಕಗಳನ್ನು ಹೊಂದಿತ್ತು. ಆದರೆ “ಮೇಕ್ ಇನ್ ಇಂಡಿಯಾ” ಕಾರ್ಯಕ್ರಮದಿಂದಾಗಿ ದೇಶವು ಈಗ 268 ಮೊಬೈಲ್ ಹ್ಯಾಂಡ್ಸೆಟ್ ಮತ್ತು ಪರಿಕರಗಳ ಉತ್ಪಾದನಾ ಘಟಕಗಳನ್ನು ಹೊಂದಿದೆ.
ವಾಸ್ತವವಾಗಿ, ಚೀನಾ ನಂತರ ಭಾರತ ಈಗ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿದೆ.
” 2014ರ ನಂತರ ಮೊಬೈಲ್ ಹ್ಯಾಂಡ್ಸೆಟ್ ಉತ್ಪಾದನಾ ಚಟುವಟಿಕೆಯು ಮೂಲಭೂತವಾಗಿ ನೋಯ್ಡಾ / ಗ್ರೇಟರ್ ನೋಯ್ಡಾ ಪ್ರದೇಶದತ್ತ ವಾಲಿತು. ಮುಖ್ಯವಾಗಿ ಈ ಪ್ರದೇಶವು ರಾಷ್ಟ್ರೀಯ ರಾಜಧಾನಿ ನವದೆಹಲಿಗೆ ಹತ್ತಿರದಲ್ಲಿದೆ ಮತ್ತು ಉತ್ಪಾದನಾ ಚಟುವಟಿಕೆಯನ್ನು ತ್ವರಿತವಾಗಿ ಚಲಿಸುವಂತೆ ಮಾಡಲು ಮತ್ತು ಕಾರ್ಯಗತಗೊಳಿಸಲು ಸ್ಥಳಾವಕಾಶದ ಲಭ್ಯತೆಯು ಇಲ್ಲಿ ಸಾಕಷ್ಟಿದೆ” ಎಂದು ಮೊಹಿಂದ್ರೂ ವಿವರಿಸುತ್ತಾರೆ.
ಭಾರತದಲ್ಲಿ ಹೊಸ ಐಫೋನ್ಗಳ ತಯಾರಿಕೆಯನ್ನು ದ್ವಿಗುಣಗೊಳಿಸಲು ಆ್ಯಪಲ್ ಮುಂದಾಗಿದೆ, ಇದು ಭಾರತದ ಉತ್ಪಾದನಾ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆ ಇದೆ.
“ಆ್ಯಪಲ್ ಭಾರತದಲ್ಲಿ ಬಿಡಿ ಭಾಗಗಳನ್ನು ಒಳಗೊಂಡಂತೆ ಫೋನ್ ತಯಾರಿಕೆಯನ್ನು ಪ್ರಾರಂಭಿಸಿದೆ. ಅದು ಭಾರತದಲ್ಲಿ ಐಫೋನ್ ಅನ್ನೂ ತಯಾರಿಸಲು ಪ್ರಾರಂಭಿಸಿದೆ. ರಫ್ತು ಮಾಡುವ ಉದ್ದೇಶದಿಂದಲೇ ಅದು ಘಟಕಗಳನ್ನು ಸ್ಥಾಪನೆ ಮಾಡಿದೆ. ಆದರೆ, ಇದು ಕೇವಲ ಅರೆ ಕಾಸಿನ ಮಜ್ಜಿಗೆ. ಭಾರತದಲ್ಲಿ ಆ್ಯಪಲ್ನ ದೃಢವಾದ ಉಪಸ್ಥಿತಿಯನ್ನು ನಾನು ಬಯಸುತ್ತೇನೆ. ಸ್ಯಾಮ್ಸಂಗ್ನ ಉಪಸ್ಥಿತಿಯಂತೆಯೇ ಆ್ಯಪಲ್ ಉಪಸ್ಥಿತಿಯನ್ನು ನಾವು ಬಯಸುತ್ತೇವೆ” ಎಂದು ಐಟಿ ಮತ್ತು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಸೆಪ್ಟೆಂಬರ್ನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದರು.
ಸೈಬರ್ ಮೀಡಿಯಾ ರಿಸರ್ಚ್ (ಸಿಎಮ್ಆರ್) ಪ್ರಕಾರ, ಚೀನಾ ಮೂಲದ ಒಪ್ಪೂ, ವಿವೊ, ರಿಯಲ್ಮೆ ಮತ್ತು ಒನ್ಪ್ಲಸ್ ಬ್ರಾಂಡ್ಗಳ ಮೂಲ ಕಂಪನಿಯಾದ ಬಿಬಿಕೆ ಗ್ರೂಪ್, ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಶೇ 42 ರಷ್ಟು ಪಾಲನ್ನು ಸಾಧಿಸಿದೆ, ಇದು ಬಹುತೇಕ ಶಿಯೋಮಿ ಮತ್ತು ಸ್ಯಾಮ್ಸಂಗ್ನ ಮಾರುಕಟ್ಟೆ ಪಾಲಿಗೆ ಸಮಾನವಾಗಿದೆ.
ಐಸಿಇಎ ಪ್ರಕಾರ, ಭಾರತದಲ್ಲಿ ಮಾರಾಟವಾಗುವ ಮೊಬೈಲ್ ಶೇ.95 ರಷ್ಟು ದೇಶೀಯವಾಗಿಯೇ ಉತ್ಪಾದನೆಯಾಗುತ್ತಿದೆ.
“ನಮ್ಮ ದೇಶೀಯ ಮಾರುಕಟ್ಟೆ vis-a-visದೇಶೀಯ ಉತ್ಪಾದನೆಯು ಸ್ಯಾಚುರೇಟೆಡ್ ಆಗಿದೆ ಮತ್ತು 2025 ರ ವೇಳೆಗೆ ನಾವು 7.7 ಲಕ್ಷ ಕೋಟಿ ರೂ. ರಫ್ತು ಮಾಡುವ ಗುರಿಯನ್ನು ಹೊಂದಿದ್ದೇವೆ” ಎಂದು ಮೋಹಿಂದ್ರೂ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.