ನವದೆಹಲಿ: ಸಂಸತ್ತಿನ ಆವರಣದ ಒಳಗಡೆ ಸದಸ್ಯರುಗಳ ಸಂಚಾರಕ್ಕಾಗಿ ಎರಡು ಇ-ವೆಹ್ಹಿಕಲ್ ಟ್ರಾನ್ಸ್ಪೋರ್ಟ್ ಫೆಸಿಲಿಟಿಯನ್ನು ಆರಂಭಿಸಲಾಗಿದೆ. ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ದೇಶ್ ದೀಪಕ್ ವರ್ಮಾ ಅವರು ಶುಕ್ರವಾರ ಇದಕ್ಕೆ ಚಾಲನೆಯನ್ನು ನೀಡಿದರು.
ರಾಜ್ಯಸಭಾ ಸಭಾಪತಿ ಮತ್ತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇ-ವಾಹನಗಳನ್ನು ಪರಿಶೀಲನೆ ನಡೆಸಿದರು.
ಈ ವಾಹನಗಳು ಸಂಸತ್ತಿನ ಆವರಣದ ಒಳಗಡೆಯೇ ಸಂಸತ್ತಿನ ಸದಸ್ಯರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲಿವೆ.
ಪರಿಸರ ಸ್ನೇಹಿ ಮತ್ತು ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಎಲೆಕ್ಟ್ರಿಕ್ ವಾಹನಗಳ ಸಕ್ರಿಯ ಪ್ರಚಾರ ಮಾಡುವ ಕೇಂದ್ರ ಸರ್ಕಾರದ ನೀತಿಗೆ ಅನುಗುಣವಾಗಿ ವಾಹನಗಳನ್ನು ನಿಯೋಜನೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ವರ್ಮಾ, ದೆಹಲಿಯಲ್ಲಿನ ಮಾಲಿನ್ಯ ಮತ್ತು ಹವಾಮಾನ ವೈಪರೀತ್ಯದ ದುಷ್ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು, ಶುದ್ಧ, ಹಸಿರು ಮತ್ತು ಮಾಲಿನ್ಯ ರಹಿತ ಶಕ್ತಿಯ ಪರ್ಯಾಯ ಮೂಲವನ್ನು ಅನ್ವೇಷಿಸುವುದು ಇಂದು ಹೆಚ್ಚು ಅಗತ್ಯವಾಗಿದೆ ಎಂದಿದ್ದಾರೆ.
“ರಾಜ್ಯಸಭಾ ಸಚಿವಾಲಯವು ಎರಡು ಎಲೆಕ್ಟ್ರಿಕ್ ವಾಹನಗಳನ್ನು ನಿಯೋಜಿಸುವ ಮೂಲಕ ಈ ದಿಕ್ಕಿನಲ್ಲಿ ಒಂದು ಉತ್ತಮ ಹೆಜ್ಜೆ ಇಟ್ಟಿದೆ ಮತ್ತು ಈ ಮೂಲಕ ಮಾಲಿನ್ಯದ ಭೀತಿಯನ್ನು ಎದುರಿಸಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ತನ್ನ ಕೊಡುಗೆ ನೀಡಿದೆ” ಎಂದು ಅವರು ಹೇಳಿದರು.
ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಇಂಧನ ಸಚಿವಾಲಯದ ಶೇ 100 ರಷ್ಟು ಸ್ವಾಮ್ಯದ ಅಂಗಸಂಸ್ಥೆಯಾದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್)ನೊಂದಿಗೆ ಈ ನಿಟ್ಟಿನಲ್ಲಿ ಸಮಾಲೋಚನೆಗಳನ್ನು ನಿರಂತರವಾಗಿ ನಡೆಲಾಗುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.