ಇಟಾನಗರ್: ರಾಷ್ಟ್ರದ, ಅದರಲ್ಲೂ ವಿಶೇಷವಾಗಿ ಈಶಾನ್ಯದ ಆರ್ಥಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿತ್ವದಿಂದ (ಆರ್ಸಿಇಪಿ) ಹೊರಗುಳಿಯುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡರು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಅವರು, “ಇತ್ತೀಚೆಗೆ ಬ್ಯಾಂಕಾಕ್ನಲ್ಲಿ ನಡೆದ ಆಸಿಯಾನ್ ಶೃಂಗಸಭೆಯಲ್ಲಿ, ಭಾರತವು ಆರ್ಸಿಇಪಿಯ ಭಾಗವಾಗುವುದಿಲ್ಲ ಎಂದು ನಮ್ಮ ಪ್ರಧಾನಿ ಬಹಳ ದೃಢವಾದ ನಿರ್ಧಾರವನ್ನು ತೆಗೆದುಕೊಂಡಿರುವುದನ್ನು ನೀವು ನೋಡಿದ್ದೀರಿ. ಭಾರತವು ಆರ್ಸಿಇಪಿಗೆ ಸೇರ್ಪಡೆಯಾಗಿದ್ದರೆ ರೈತರು, ಕಾರ್ಮಿಕರು, ಕಾರ್ಖಾನೆಗಳು ಮತ್ತು ಕೈಗಾರಿಕೆಗಳ ಮೇಲೆ ಪರಿಣಾಮ ಬೀರುತ್ತಿತ್ತು. ಮೋದಿ ತೆಗೆದುಕೊಂಡಿದ್ದು ದೊಡ್ಡ ನಿರ್ಧಾರ ”ಎಂದಿದ್ದಾರೆ.
ದಿಬಾಂಗ್ ಕಣಿವೆ ಮತ್ತು ಸಿಯಾಂಗ್ ಅನ್ನು ಸಂಪರ್ಕಿಸುವ 200 ಮೀಟರ್ ಉದ್ದದ ಸಿಸ್ಸೆರಿ ನದಿ ಸೇತುವೆಯನ್ನು ಉದ್ಘಾಟನೆ ಮಾಡುವ ಸಲುವಾಗಿ ರಕ್ಷಣಾ ಸಚಿವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಸೇತುವೆಯು ರಾಜ್ಯದ ಜನರ ಬಹುದಿನಗಳ ಬೇಡಿಕೆಯನ್ನು ಪೂರೈಸಿದೆ, ಇದು ಪಾಸಿಘಾಟ್ನಿಂದ ರೋಯಿಂಗ್ವರೆಗಿನ ಪ್ರಯಾಣದ ಸಮಯವನ್ನು ಸುಮಾರು ಐದು ಗಂಟೆಗಳವರೆಗೆ ಕಡಿತಗೊಳಿಸುತ್ತದೆ.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು, ಉಪ ಮುಖ್ಯಮಂತ್ರಿ ಚೌನಾ ಮೇ, ಬಾರ್ಡರ್ ರೋಡ್ಸ್ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ಮತ್ತು ಅರುಣಾಚಲ ಪೂರ್ವದ ಸಂಸತ್ತು ಸದಸ್ಯ ತಪೀರ್ ಗಾವೊ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತನ್ನ ಯೋಜನೆಯಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮವನ್ನು (ಬಿಎಡಿಪಿ) ಅಳವಡಿಸಿಕೊಂಡಿದೆ ಎಂದು ಸಿಂಗ್ ಹೇಳಿದರು. “ಈಶಾನ್ಯ ಮತ್ತು ಇಡೀ ದೇಶದ ಭದ್ರತೆಗೆ ಮೂಲಸೌಕರ್ಯ ನವೀಕರಣ ಅಗತ್ಯ” ಎಂದು ಅವರು ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.