ಶ್ರೀನಗರ: ಕೂಂಬಿಂಗ್ ಕಾರ್ಯಾಚರಣೆಗಳನ್ನು ನಡೆಸಲು, ಕಟ್ಟಡಗಳಲ್ಲಿ ಅವಿತಿರುವ ಉಗ್ರರ ವಿರುದ್ಧ ಕಾರ್ಯಾಚರಣೆಗಳನ್ನು ನಡೆಸಲು ಸೇರಿದಂತೆ ವಿವಿಧ ಉಗ್ರ ವಿರೋಧಿ ಕಾರ್ಯಾಚರಣೆಗಳಲ್ಲಿ ಇನ್ನು ಮುಂದೆ ರೋಬೋಟ್ಗಳು ಯೋಧರಿಗೆ ಸಹಾಯ ಮಾಡಲಿದೆ.
ಕೇಂದ್ರ ರಕ್ಷಣಾ ಸಚಿವಾಲಯವು ಇದಕ್ಕಾಗಿ 550 ಕಣ್ಗಾವಲು ರೋಬೋಟ್ಗಳನ್ನು ಖರೀದಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದೆ. ಜಮ್ಮು ಕಾಶ್ಮೀರದಲ್ಲಿ ನಡೆಯುವ ಕಾರ್ಯಾಚರಣೆಗಳಲ್ಲಿ ಭಾಗಿಯಾಗಲು 25 ವರ್ಷ ಜೀವಿತಾವಧಿ ಇರುವ ರೋಬೋಟ್ಗಳನ್ನು ನಿಯೋಜನೆಗೊಳಿಸಲಾಗುತ್ತಿದೆ.
ಈ ರೋಬೋಟುಗಳು ಮೆಟ್ಟಿಲುಗಳನ್ನು ಹತ್ತಲು ಮತ್ತು ಕಟ್ಟಡಗಳಲ್ಲಿ ಅವಿತಿರುವ ಉಗ್ರರ ವಿರುದ್ಧ ಗ್ರೆನೇಡ್ ದಾಳಿಗಳನ್ನು ನಡೆಸಲು, 20 ಸೆಂ.ಮೀ. ಆಳದ ನೀರಿಗೆ ಇಳಿಯಲು ಸಮರ್ಥವಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಣಿವೆಯಲ್ಲಿ ನಡೆಯುವ ಕೂಂಬಿಂಗ್ ಮತ್ತು ಶೋಧ ಕಾರ್ಯಾಚರಣೆಯ ವೇಳೆ ಈ ರೋಬೋಟುಗಳು ರಕ್ಷಣೆಯ ಮೊದಲ ರೇಖೆಗಳಾಗಲಿವೆ, ಇದರಿಂದಾಗಿ ಹಾನಿಗಳು ಕಡಿಮೆಯಾಗಲಿದೆ. ಕಾರ್ಯಾಚರಣೆಯ ಪ್ರಾಥಮಿಕ ಹಂತದಲ್ಲಿ ನಡೆಯುವ ಜೀವ ಹಾನಿಗಳನ್ನು ಈ ರೋಬೋಟುಗಳು ತಪ್ಪಿಸಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನವೆಂಬರ್ 19ರಂದು ರಕ್ಷಣಾ ಸಚಿವಾಲಯವು ಭಾರತೀಯ ರಕ್ಷಣಾ ಉತ್ಪಾದನಾ ಸಂಸ್ಥೆಗಳಿಗೆ ತಮ್ಮ ಪ್ರಾತಿನಿಧಿತ್ವವನ್ನು ಸಲ್ಲಿಕೆ ಮಾಡುವಂತೆ ಸೂಚಿಸಿದೆ. ರೋಬೋಟುಗಳನ್ನು ದೇಶೀಯವಾಗಿ ಉತ್ಪಾದನೆ ಮಾಡಲು ಹೆಚ್ಚಿನ ಉತ್ತೇಜನವನ್ನು ನೀಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.