ತವಾಂಗ್: ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಗುರುವಾರ ನಡೆದ ‘ಮೈತ್ರೀ ದಿವಸ್’ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾಗಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಂಗ್, “ಈ ಉತ್ಸವವು ಪ್ರದೇಶದ ಜನರ ದೇಶಭಕ್ತಿ ಮತ್ತು ಸಶಸ್ತ್ರ ಪಡೆಗಳೊಂದಿಗಿನ ಅವರ ನಿಕಟ ಸಂಬಂಧವನ್ನು ಸಂಕೇತಿಸುತ್ತದೆ. ನಾಗರಿಕ-ಮಿಲಿಟರಿ ಸ್ನೇಹವು ರಾಷ್ಟ್ರದ ಗಡಿಗಳು ದುಪ್ಪಟ್ಟು ಸುರಕ್ಷಿತವಾಗಿದೆ ಎಂಬುದರ ಭರವಸೆಯಾಗಿದೆ. ಹೊಸ ಭಾರತದ ಕನಸನ್ನು ನನಸಾಗಿಸಲು ಜನರು, ನಾಗರಿಕ ಆಡಳಿತ, ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಒಗ್ಗಟ್ಟು ಇರಬೇಕು” ಎಂದು ಕರೆ ನೀಡಿದರು.
ಎರಡು ದಿನಗಳ ಸಾಮಾಜಿಕ-ಮಿಲಿಟರಿ ಸಾಂಸ್ಕೃತಿಕ ಉತ್ಸವವನ್ನು ಭಾರತೀಯ ಸೇನೆ, ತವಾಂಗ್ ನಾಗರಿಕ ಆಡಳಿತ ಮತ್ತು ಸ್ವಯಂಸೇವಕರು ಜಂಟಿಯಾಗಿ ಅತೀ ಎತ್ತರದಲ್ಲಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದಾರೆ, ಇದು ತವಾಂಗ್ನ ಸ್ಥಳೀಯರ ಮತ್ತು ಸೇನೆಯ ನಡುವಣ ಆಳವಾಗಿ ಒಗ್ಗಟ್ಟು ಮತ್ತು ದೇಶಭಕ್ತಿಯ ಉತ್ಸಾಹಕ್ಕೆ ಸಾಕ್ಷಿಯಾಗಿದೆ.
ಈಶಾನ್ಯ ಕೈಗಾರಿಕಾ ಕಾರಿಡಾರ್ ಸ್ಥಾಪಿಸುವ ಸರ್ಕಾರದ ಯೋಜನೆಯನ್ನು ಸಿಂಗ್ ಈ ಸಂದರ್ಭದಲ್ಲಿ ಒತ್ತಿ ಹೇಳಿದರು, ಇದು ಪ್ರದೇಶದ ಜನರಿಗೆ ಹಲವಾರು ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.