ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸಚಿವಾಲಯವು, 62 ಏರ್ಬಸ್ ಸಿ -295 ಟ್ರಾನ್ಸ್ಪೋರ್ಟ್ ಏರ್ಕ್ರಾಫ್ಟ್ಗಳನ್ನು ಖರೀದಿಸಲು ಟಾಟಾ ಮತ್ತು ಏರ್ಬಸ್ ಜೊತೆಗೆ ಮಾತುಕತೆಯನ್ನು ಅಂತಿಮಗೊಳಿಸಿ, ವೆಚ್ಚವನ್ನು ನಿಗದಿಪಡಿಸಿದೆ.
ವೆಚ್ಚದ ಬಗೆಗಿನ ಮಾತುಕತೆಗಳನ್ನು ಸಚಿವಾಲಯವು ಅಂತಿಮಗೊಳಿಸಿದ ನಂತರ, ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯ (ಸಿಸಿಎಸ್) ಅನುಮತಿಗಾಗಿ ಈ ವಿಷಯವನ್ನು ಮುಂದಿಡಲಾಗುತ್ತದೆ, ಮುಂದಿನ ಕೆಲವು ತಿಂಗಳುಗಳಲ್ಲಿ ಒಪ್ಪಂದಕ್ಕೆ ಅನುಮೋದನೆಯನ್ನು ನಿರೀಕ್ಷಿಸಬಹುದಾಗಿದೆ.
ಖರೀದಿಯಾದ ಬಳಿಕ, ಹೊಸ ಸಿ-295 ಟ್ರಾನ್ಸ್ಪೋರ್ಟ್ ಏರ್ಕ್ರಾಫ್ಟ್ಗಳು ವಾಯುಸೇನೆಯ 56 ವರ್ಷ ಹಳೆಯ ಅವ್ರೊ ಸಾರಿಗೆ ವಿಮಾನಗಳನ್ನು ಬದಲಾಯಿಸಲಿದೆ. ಅಲ್ಲದೇ, 56 ಸಿ -295 ವಿಮಾನಗಳ ಹೊರತಾಗಿ, ಸಚಿವಾಲಯವು ಭಾರತೀಯ ಕೋಸ್ಟ್ಗಾರ್ಡ್ಗಾಗಿ ಆರು ಹೆಚ್ಚುವರಿ ವಿಮಾನಗಳಿಗೆ ಆದೇಶವನ್ನು ನೀಡಿದೆ.
ಒಟ್ಟು ಒಪ್ಪಂದವು 3 ಬಿಲಿಯನ್ ಮೌಲ್ಯದ್ದಾಗಿದೆ ಮತ್ತು ಈ ಯೋಜನೆಗಾಗಿ ಟಾಟಾ ಮತ್ತು ಏರ್ಬಸ್ನ ಏಕೈಕ ಬಿಡ್ ಅನ್ನು ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) 2015 ರಲ್ಲಿ ಅಂಗೀಕರಿಸಿತ್ತು. 2013 ರಲ್ಲಿ ವಿಮಾನಗಳಿಗಾಗಿ ಪ್ರಸ್ತಾವನೆ (ಆರ್ಎಫ್ಪಿ) ಅನ್ನು ಜಾಗತಿಕ ಸಂಸ್ಥೆಗಳಿಗೆ ಸಹ ನೀಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.